ಮೆ.04ರಂದು ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಉತ್ಸವಾಂಗಣದ ಮೈದಾನದಲ್ಲಿ ಕಾಶ್ಮೀರ ಹುತಾತ್ಮರಿಗೆ ನಿಡಿ ನಮನ ಹಾಗೂ ಹಿಂದೂ ಜಾಗೃತಿ ಸಮಾವೇಶ – ಕಹಳೆ ನ್ಯೂಸ್

ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಮ್ ಎಡನೀರು ಮಠ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠ ಇದರ ಸಂಯುಕ್ತ ಆಶ್ರಯದಲ್ಲಿ ಮತ್ತು ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಮೆ.04ರಂದು ಐಲ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ಉತ್ಸವಾಂಗಣದ ಮೈದಾನದಲ್ಲಿ ಕಾಶ್ಮೀರ ಹುತಾತ್ಮರಿಗೆ ನಿಡಿ ನಮನ ಹಾಗೂ ಹಿಂದೂ ಜಾಗೃತಿ ಸಮಾವೇಶ ನಡೆಯಲಿದೆ.
ಭಾರತ ಮುಕುಟಮಣಿ ಕಾಶ್ಮೀರದ ಪಾಹಲ್ಗಮ್ ನಲ್ಲಿ ಎ.22 ರಂದು ನಡೆದ ಪಾಕಿಸ್ಥಾನಿ ಪ್ರೇರಿತ ದುಷ್ಟ ಭಯೋತ್ಪಾದಕರಿಂದ ನಡೆದ ಅಮಾಯಕ ಹಿಂದೂಗಳ ಭೀಕರ ನರಮೇಧವನ್ನು ಖಂಡಿಸಿ ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನ ಎಲ್ಲಾ ಪಂಚಾಯತ್‌ಗಳ ಸರ್ವ ದೇಶ ಭಕ್ತ ಹಿಂದೂ ಶಕ್ತಿಗಳ ಒಗ್ಗೂಡುವಿಕೆಯೊಂದಿಗೆ ಪರಮ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ವಿರಾಟ್ ಹಿಂದೂ ಸಂಗಮದ ಅಭೂತ ಪೂರ್ವ ಕಾರ್ಯಕ್ರಮ ನಡೆಯಲಿದೆ.














