Thursday, March 12, 2026
ಜಿಲ್ಲೆರಾಜ್ಯಸುದ್ದಿ

ಭೀಕರ ರಸ್ತೆ ಅಪಘಾತ: ಮೂವರು ಸಾ*ವು -ಕಹಳೆ ನ್ಯೂಸ್

ಕಲಬುರಗಿ: ಮದುವೆ ಆಮಂತ್ರಣ ಪತ್ರಿಕೆ ಹಂಚಲು ಹೋದವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಕಲಬುರಗಿ- ಸೇಡಂ ರಸ್ತೆಯ ಮಳಖೇಡ ಬಳಿ ಎ.27ರ ರವಿವಾರ ಸಂಭವಿಸಿದೆ.

ಮಹೇಶ (32), ಪ್ರೇಮಕುಮಾರ ಮುಧೋಳ (27), ಅನ್ನದಾನಯ್ಯ ಬಟಗೇರಾ ಕೆ. (25) ಮೃತಪಟ್ಟ ದುರ್ದೈವಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಸ್ತೆ ಬದಿ ನಿಂತ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ಸಹೋದರನ ಮದುವೆ ಕಾರ್ಡ್ ಕೊಡಲು ಹೊರಟವರು ಮಸಣಕ್ಕೆ ಸೇರಿದ್ದಾರೆ.‌

ಜಾಹೀರಾತು
ಜಾಹೀರಾತು

ಮೃತರೆಲ್ಲರೂ ಸಂಬಂಧಿಕರಾಗಿದ್ದು, ಮಹೇಶನ ಸಹೋದರನ ಮದುವೆ ಆಹ್ವಾನ ಪತ್ರಿಕೆ ಕೊಡಲು ಸೇಡಂಗೆ ತೆರಳಿದ್ದರು.‌ ಆಹ್ವಾನ ಪತ್ರ ಕೊಟ್ಟು ಮರಳಿ ಕಲಬುರಗಿ ಕಡೆ ಬರುತ್ತಿರುವಾಗ ರಸ್ತೆ ಅಪಘಾತ ಸಂಭವಿಸಿದೆ. ‌