Sunday, March 8, 2026
ಉತ್ತರಕನ್ನಡಸುದ್ದಿ

ಗೋಕರ್ಣದಲ್ಲಿ ಕಾಲೇಜು ವಿದ್ಯಾರ್ಥಿನಿಯರು ನೀರುಪಾಲು-ಕಹಳೆ ನ್ಯೂಸ್

ಕಾರಾವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಶೈಕ್ಷಣಿಕ ಪ್ರವಾಸಕ್ಕೆಂದು ತೆರಳಿದ್ದ ವೇಳೆ ನಾಲ್ವರು ವಿದ್ಯಾರ್ಥಿನಿಯರು ನೀರು ಪಾಲಾದ ಘಟನೆ ಮಾಸುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಮುದ್ರ ತಟಕ್ಕೆ ಪ್ರವಾಸಕ್ಕೆ ಬಂದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ನೀರು ಪಾಲಾಗಿದ್ದಾರೆ. ತಮಿಳುನಾಡು ಮೂಲದ ಸಿಂಧುಜಾ ಮತ್ತು ಕನ್ನಿ ಮೊಳಿ ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಪ್ರವಾಸಿ ತಾಣಕ್ಕೆ ಚಾರಣಕ್ಕಾಗಿ ತೆರಳಿದ್ದ ಕಾಲೇಜು ಯುವತಿಯರು ಸಮುದ್ರದ ಪಕ್ಕದಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ತಮಿಳನಾಡಿನ ತಿರುಚಿಯ ವೈದ್ಯಕೀಯ ಮಹಾವಿದ್ಯಾಲಯದ ಕೊನೆಯ ವರ್ಷದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದ ಪರೀಕ್ಷೆ ಮುಗಿಸಿ ಗೋಕರ್ಣದ ಜಟಾಯು ತೀರ್ಥಕ್ಕೆ ಪ್ರವಾಸ ಬಂದಿದ್ದರು.

ತಿರುಚಿಯ ಒಟ್ಟು 23 ವಿದ್ಯಾರ್ಥಿಗಳ ತಂಡ ಈ ಚಾರಣಕ್ಕೆ ಬಂದಿದ್ದಾರೆ. ಪ್ರವಾಸವನ್ನು ಎಂಜಾಯ್‌ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಈಗ ಬರಸಿಡಿಲು ಬಡಿದಿದೆ. 23 ವಿದ್ಯಾರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿನಿಯರು ಜಟಾಯು ತೀರ್ಥದ ಸಮುದ್ರದ ಅಂಚಿನಲ್ಲಿರುವ ಬಂಡೆ ಮೇಲೆ ಕೂತು ಸಮುದ್ರದ ಸೊಬಗನ್ನು ವೀಕ್ಷಿಸಿದ್ದಾರೆ. ತಂಪಾದ ಗಾಳಿ, ಅಲೆಗಳ ಅಬ್ಬರಕ್ಕೆ ಮನಸೋತ ಯುವತಿಯರು ಇನ್ನಷ್ಟು ಸಮಯವನ್ನು ಕಳೆಯುವ ಮನಸ್ಸು ಮಾಡಿದ್ದಾರೆ.

ಜೊತೆಗೆ ಬಂದ ಇತರ ಸ್ನೇಹಿತರು ಸ್ಥಳದಿಂದ ಹೋದರು ಕೂಡ ಈ ನಾಲ್ವರು ವಿದ್ಯಾರ್ಥಿನಿಯರು ಜಟಾಯು ತೀರ್ಥದ ಸಮುದ್ರದ ಅಂಚಿನಲ್ಲಿರುವ ಬಂಡೆ ಮೇಲೆ ಕೂತು ಮಾತನಾಡುತ್ತಾ, ಫೋಟೋ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಆಳೆತ್ತರದ ಅಲೆಗಳು ನಾಲ್ವರು ವಿದ್ಯಾರ್ಥಿನಿಯರು ಕುಳಿತಿದ್ದ ಸ್ಥಳಕ್ಕೆ ನುಗ್ಗಿ ಬಂದಿವೆ. ಅಲೆಗಳ ಅಬ್ಬರಕ್ಕೆ ಬಂಡೆಯ ಮೇಲೆ ಕುಳಿತಿದ್ದ ನಾಲ್ವರು ವಿದ್ಯಾರ್ಥಿನಿಯರು ನೀರಲ್ಲಿ ಕೊಚ್ಚಿ ಹೋಗಿದ್ದಾರೆ.

ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದ ಕಾರಣ ಸಿಂಧುಜಾ ಮತ್ತು ಕನ್ನಿ ಮೊಳಿ ಎನ್ನುವ ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಸಮುದ್ರದ ರಕ್ಷಣಾ ಪಡೆಯ ಮಷಿನ್ ಬೋಟ್ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ. ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೇ ಇನ್ನಿಬ್ಬರ ಮೃತದೇಹಗಳು ಕೂಡ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಗೆಳತಿಯರನ್ನು ಕಳೆದುಕೊಂಡ ಇತರ ವಿದ್ಯಾರ್ಥಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ಮೃತ ವಿದ್ಯಾರ್ಥಿಗಳ ಪೋಷಕರಿಗೆ ವಿಷಯ ಮುಟ್ಟಿಸಿದ್ದು, ತಮಿಳುನಾಡಿಗೆ ವಿದ್ಯಾರ್ಥಿನಿಯರ ಮೃತದೇಹವನ್ನು ರವಾನಿಸುವ ವ್ಯವಸ್ಥೆ ಮಾಡಿದ್ದಾರೆ.