Friday, March 13, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಶಾಲಾವರಣದ ಗಿಡಗಳಿಗೆ ಕ್ಯೂಆರ್‌ ಕೋಡ್‌ -ಕಹಳೆ ನ್ಯೂಸ್

ಬಜಪೆ: ಹಲವು ಹೊಸತನಗಳ ಮೂಲಕ ಗಮನ ಸೆಳೆಯುತ್ತಿರುವ ಬಡಗ ಎಕ್ಕಾರು ಪ್ರೌಢ ಶಾಲೆ ಈ ಬಾರಿ ಶಾಲೆ ಆವರಣದ ಗಿಡಗಳಿಗೆ ಕ್ಯೂ ಆರ್‌ ಕೋಡ್‌ ಅಳವಡಿಸುವ ಮೂಲಕ ಭೂ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತು.

ಶಾಲಾ ಪರಿಸರದಲ್ಲಿರುವ ಅಥವಾ ಶಾಲಾ ಹೊರಗಿನ ಪರಿಸರದಲ್ಲಿರುವ ಗಿಡ ಮರಗಳ ಮಾಹಿತಿಯನ್ನು ವಿದ್ಯಾರ್ಥಿಗಳು ಗುಂಪಿನಲ್ಲಿ ಸಂಗ್ರಹಿಸಿ ಮಾಹಿತಿಗೆ ಅನುಗುಣವಾಗಿ ಆಯಾ ಸಸ್ಯದ ಕ್ಯೂಆರ್‌ ಕೋಡ್‌ ಅನ್ನು ಸೃಷ್ಟಿಸಿ ಅದನ್ನು ಗಿಡಗಳಿಗೆ ಅಂಟಿಸುವ ಕೆಲಸ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಯೂಆರ್‌ ಕೋಡ್‌ ಮಂಕಿ ಎನ್ನುವವೆಬ್‌ ಪೋರ್ಟಲ್‌ನಲ್ಲಿ ಕ್ಯೂ ಆರ್‌ ಕೋಡ್‌ ಜನರೇಟ್‌ ಮಾಡಿ, ಅದರ ಪ್ರಿಂಟ್‌ ತೆಗೆದು ಮರಕ್ಕೆ ಅಂಟಿಸುವ ಚಟುವಟಿಕೆ ಇದಾಗಿದೆ. ಇದರ ಫೋಟೊ ಮತ್ತು ವಿಡಿಯೊವನ್ನು ಇಕೋ ಕ್ಲಬ್‌ ಎಜುಕೇಶನ್‌ನಲ್ಲಿ ಶಾಲಾ ಲಾಗ್‌ಇನ್‌ ನಲ್ಲಿ ಅಪ್ಲೋಡ್‌ ಮಾಡಲಾಯಿತು.

ಜಾಹೀರಾತು
ಜಾಹೀರಾತು

ಪಿಡಿಎಫ್ನಲ್ಲಿ ಮಾಹಿತಿ
ವಿದ್ಯಾರ್ಥಿಗಳು ಶಾಲಾ ಪರಿಸರ ದಲ್ಲಿರುವ ರೆಂಜೆ, ಹಲಸು, ಅಂಜೂರ, ಪೇರಳೆ, ಬಾಳೆ ಕಹಿಬೇವು ಮೊದಲಾದ ಮರಗಳ ಮಾಹಿತಿಗಳನ್ನು ಸಂಗ್ರಹಿಸಿ, ಅದರ ಪಿಡಿಎಫ್‌ ಅನ್ನು ತಯಾರಿಸಿ, ಅದನ್ನು ಡ್ರೈವ್‌ನಲ್ಲಿ ಅಪ್ಲೋಡ್‌ ಮಾಡಿದ್ದರು. ಪ್ರತಿಯೊಂದು ಮರಗಳಿಗೆ ಅದರದೇ ಆದ ಕ್ಯೂಆರ್‌ ಕೋಡ್‌ ನ್ನು ಜನರೇಟರ್‌ ಮಾಡಿ ಆಯಾ ಮರಕ್ಕೆ ಅಂಟಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಎನ್‌ ರಾವ್‌, ಇಕೋ ಕ್ಲಬ್‌ ನ ಸಂಚಾಲಕಿ ರಮ್ಯಾ ಅವರ ಸಾರಥ್ಯದಲ್ಲಿ ಈ ಚಟುವಟಿಕೆ ನಡೆಯಿತು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಕೆ ಶಿಕ್ಷಕರಾದ ವಿದ್ಯಾ ಗೌರಿ, ವಿದ್ಯಾಲತಾ, ಡಾ| ಅನಿತ್‌ ಕುಮಾರ್‌ ಉಪಸ್ಥಿತರಿದ್ದರು.

ಪರಿಸರ ಕ್ಲಬ್‌ ಈಗ ಮಿಷನ್‌ ಲೈಫ್
– ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಉತ್ತೇಜಿಸಲು ಪರಿಸರ ಕ್ಲಬ್‌ಗಳು ಒಂದು ಮಹತ್ವದ ಉಪಕ್ರಮವಾಗಿದೆ. ಈ ಕ್ಲಬ್‌ಗಳನ್ನು ಮಿಷನ್‌ ಲೈಫ್‌ಗಾಗಿ ಪರಿಸರ ಕ್ಲಬ್‌ಗಳು ಎಂದು ಮರುನಾಮಕರಣ ಮಾಡಲಾಗಿದೆ ಎಂದು ಇಕೋ ಕ್ಲಬ್‌ ಸಂಚಾಲಕಿ ರಮ್ಯಾ ಆವರು ಭೂ ದಿನ ಆಚರಣೆ ವೇಳೆ ಹೇಳಿದರು.
– ಮಿಷನ್‌ ಲೈಫ್‌ನಲ್ಲಿ 7 ಪ್ರಮುಖ ವಿಷಯಗಳಿವೆ. ಆರೋಗ್ಯಕರ ಜೀವನಶೈಲಿ, ಸುಸ್ಥಿರ ಆಹಾರ ಪದ್ಧತಿ, ಇ-ತ್ಯಾಜ್ಯವನ್ನು ಕಡಿಮೆ ಮಾಡುವುದು, ಸಾಮಾನ್ಯ ತ್ಯಾಜ್ಯವನ್ನು ಕಡಿಮೆ ಮಾಡುವುದು, ಶಕ್ತಿಯನ್ನು ಉಳಿಸುವುದು, ನೀರನ್ನು ಉಳಿಸುವುದು, ಏಕ ಬಳಕೆಯ ಪ್ಲಾಸ್ಟಿಕ್‌ಗೆ ಬೇಡ ಎಂದು ಹೇಳುವುದು ಎಂದು ಅವರು ವಿವರಿಸಿದರು.
– ಮಕ್ಕಳನ್ನು ಪರಿಸರ ಮತ್ತು ಹವಾಮಾನ ಬದಲಾವಣೆ ಸಮಸ್ಯೆಗಳ ಬಗ್ಗೆ ಸಂವೇದನಾಶೀಲಗೊಳಿಸುವ ಮತ್ತು ಅವರಲ್ಲಿ ಪರಿಸರ ಪರ ವರ್ತನೆಗಳು ಮತ್ತು ನಡವಳಿಕೆಗಳನ್ನು ಬೆಳೆಸುವತ್ತ ಇದು ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ನುಡಿದರು.
– ಎನ್‌ಇಪಿ 2020, ಶಾಲಾ ಪಠ್ಯಕ್ರಮದಲ್ಲಿ ಪರಿಸರ ಜಾಗೃತಿ ಮತ್ತು ಸುಸ್ಥಿರತೆಯ ಏಕೀಕರಣವನ್ನು ಒತ್ತಿಹೇಳುತ್ತದೆ. ಇದು ಬಾಲ್ಯದಿಂದಲೇ ಪರಿಸರ ಪ್ರಜ್ಞೆಯನ್ನು ಹುಟ್ಟುಹಾಕುವ ಮನಸ್ಥಿತಿಯನ್ನು ಬೆಳೆಸುತ್ತದೆ. ಸಮಗ್ರ ಶಿಕ್ಷಣ ಯೋಜನೆಯ ಮೂಲಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ದೇಶಾದ್ಯಂತ ಸರಕಾರಿ ಶಾಲೆಗಳಲ್ಲಿ ಪರಿಸರ ಕ್ಲಬ್‌ಗಳನ್ನು ಸ್ಥಾಪಿಸಿದೆ, ವಿದ್ಯಾರ್ಥಿಗಳು ಮತ್ತು ವಿಶಾಲ ಸಮುದಾಯದಲ್ಲಿ ಪ್ರಕೃತಿಯೊಂದಿಗೆ ಆಳವಾದ ಬೇರೂರಿರುವ ಸಂಪರ್ಕವನ್ನು ಬೆಳೆಸಿದೆ. ಎನ್‌ಇಪಿ 2020 ರೊಂದಿಗೆ ಜೋಡಿಸಲಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಶಾಲೆಗಳಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳ ಅಳವಡಿಕೆ ಮತ್ತು ಅಭ್ಯಾಸದ ಮೇಲೆ ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದರು.

ಸಸ್ಯಗಳ ಪರಿಚಯ
ಈ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಮನೆಯ ಸುತ್ತಮುತ್ತ ಇರುವ ಗಿಡಗಳ ಅಧ್ಯಯನದ ಕುತೂಹಲ ಮೂಡುತ್ತದೆ. ಕ್ಯೂಆರ್‌ ಕೋಡ್‌ ಗಳನ್ನು ಜನರೇಟ್‌ ಮಾಡಿ ಅಂಟಿಸುವುದರಿಂದ ಗಿಡದ ಬಗ್ಗೆ ಪರಿಚಯ ಇಲ್ಲದ ಜನರಿಗೆ ಸುಲಭವಾಗಿ ಸಸ್ಯಗಳ ಪರಿಚಯ ಉಂಟಾಗುತ್ತದೆ.
-ಇಂದಿರಾ ಎನ್‌. ರಾವ್‌, ಶಾಲಾ ಮುಖ್ಯ ಶಿಕ್ಷಕಿ

ಉಪಯೋಗಗಳು
– ವಿದ್ಯಾರ್ಥಿಗಳಿಗೆ ಪರಿಸರದಲ್ಲಿರುವ ಮರಗಳು, ಅವುಗಳ ಪರಿಚಯ, ವೈಜ್ಞಾನಿಕ ನಾಮಕರಣ, ಅದರ ವಿಶೇಷತೆ ಮತ್ತು ಉಪಯೋಗಗಳ ಅರಿವು ಆಗುತ್ತದೆ.
– ಪರಿಸರ ಅಧ್ಯಯನದ ಹೊಸ ಅರಿವು ದೊರೆಯುತ್ತದೆ. ತಂತ್ರಜ್ಞಾನದ ತಿಳುವಳಿಕೆ ಲಭ್ಯ. ಸಾರ್ವಜನಿಕರಿಗೂ ಇದರಿಂದ ಮರಗಳ ಬಗ್ಗೆ ವೈಜ್ಞಾನಿಕವಾದ ಮಾಹಿತಿ ಸಿಗುತ್ತದೆ.