Wednesday, March 11, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪಡಿಬಾಗಿಲು-ಬೈರಿಕಟ್ಟೆ ರಸ್ತೆ ಮರುಡಾಮರೀಕರಣಕ್ಕೆ ಬೇಡಿಕೆ-ಕಹಳೆ ನ್ಯೂಸ್

ವಿಟ್ಲ: ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯು ಅಳಿಕೆ ಗ್ರಾಮ ವ್ಯಾಪ್ತಿಯ ಪಡಿಬಾಗಿಲು ಜಂಕ್ಷನ್‌ನಿಂದ ಸತ್ಯಸಾಯಿ ವಿಹಾರ – ಚೆಂಡುಕಳ – ಪುಳಿಂಚಾರು – ಅಳಿಕೆ – ಬರೆಂಗೋಡಿ – ಮಡಿಯಾಲ – ಬೈರಿಕಟ್ಟೆ ಜಂಕ್ಷನ್‌ ತನಕ ಹಾದು ಹೋಗುತ್ತದೆ.

ಹಿಂದೆಲ್ಲ ಈ ರಸ್ತೆಗೆ 5 ವರ್ಷಕ್ಕೊಮ್ಮೆ ಮರು ಡಾಮರು ಹಾಕಲಾಗು ತ್ತಿತ್ತು. ಈಗ ಮರು ಡಾಮರೀಕರಣ ಕಾಣದೆ 10 ವರ್ಷ ಸಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

2024-25ನೇ ವರ್ಷದ ಮರು ಡಾಮರೀಕರಣ ನೀರ್ಕಜೆಯಿಂದ – ಉಕ್ಕುಡ ಕಟ್ಟೆ ತನಕ ಮತ್ತು ಸತ್ಯಸಾಯಿ ವಿಹಾರದಿಂದ – ಬೈರಿಕಟ್ಟೆ ತನಕ (ಮೊದಲು ರಸ್ತೆ 3.75 ಮೀಟರ್‌ ಅಗಲ ಇದ್ದ ರಸ್ತೆಯನ್ನು 5.5 ಮೀಟರ್‌ ಅಗಲೀಕರಣ ಮಾಡಿದ ರಸ್ತೆಗೆ ಮಾತ್ರ ಮರು ಡಾಮರೀಕರಣ ) ಹಾಗೂ ನೀರ್ಕಜೆ – ಉಕ್ಕುಡ ಕಟ್ಟೆ ಮತ್ತು ಸತ್ಯಸಾಯಿ ವಿಹಾರ – ಬೆ„ರಿಕಟ್ಟೆ ಜಂಕ್ಷನ್‌ ತನಕ ಈ ರಸ್ತೆಗೆ ಮರು ಡಾಮರೀಕರಣಕ್ಕೆ ಅನುದಾನ ಬಿಡುಗಡೆಯಾಗಿದೆ. ಕೆಲವು ವಾರದಲ್ಲಿ ಕಾಮಗಾರಿ ಪ್ರಾರಂಭವಾಗುತ್ತದೆ ಎನ್ನಲಾಗಿತ್ತು. ಕಾಮಗಾರಿಯೂ ಆರಂಭವಾಗಿಲ್ಲ, ಪಡಿಬಾಗಿಲು ಜಂಕ್ಷನ್‌ನಿಂದ ಸತ್ಯಸಾಯಿ ವಿಹಾರ ತನಕವೂ ಕಾಮಗಾರಿ ಪೂರ್ತಿಯಾಗಿಲ್ಲ.

ಜಾಹೀರಾತು
ಜಾಹೀರಾತು

ಮನವಿಗೆ ಸ್ಪಂದನೆ ಇಲ್ಲ ಅದಲ್ಲದೆ ಸುಬ್ರಹ್ಮಣ್ಯ – ಮಂಜೇಶ್ವರ ಹೆದ್ದಾರಿಯ ಪಡಿಬಾಗಿಲು ಜಂಕ್ಷನ್‌ನಿಂದ – ಅಳಿಕೆ – ಬೈರಿಕಟ್ಟೆ ಜಂಕ್ಷನ್‌ ತನಕ ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿ ವೈಜ್ಞಾನಿಕ ರೀತಿಯಿಂದ ರಸ್ತೆ ಅಭಿವೃದ್ಧಿ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಮತ್ತು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ಅಳಿಕೆ ಗ್ರಾಮ ಪಂಚಾಯತ್‌ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಮನವಿ ನೀಡಿದೆ. ಅದಲ್ಲದೆ ಕಳೆದ ವರ್ಷ ಅಳಿಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ದ. ಕ. ಜಿಲ್ಲಾ ಧಿಕಾರಿಗಳಿಗೆ ಮನವಿ ನೀಡಿದೆ. ಯಾವುದೇ ಮನವಿಗೆ ಸ್ಪಂದನೆ ಇಲ್ಲ.

ಪಡಿಬಾಗಿಲಿನಿಂದ ಬೈರಿಕಟ್ಟೆ ಜಂಕ್ಷನ್‌ ವರೆಗೆ ಹಲವು ಕಡೆ ಕಠಿನ ತಿರುವುಗಳಿವೆ ಮತ್ತು ಏರಿಳಿತಗಳಿವೆ. ಕೆಲವು ಕಡೆ ಮೋರಿಗಳು ಸಣ್ಣದಾಗುತ್ತಿವೆ. ಮತ್ತು ರಸ್ತೆ ಇಕ್ಕಟ್ಟು ಆಗುತ್ತಲಿದೆ. ಈ ಅಂತಾರಾಜ್ಯ ಹೆದ್ದಾರಿಯ ಎರಡು ಬದಿಯಲ್ಲಿ ಮಳೆ ನೀರು ಸಾಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಇದನ್ನೆಲ್ಲ ಗಮನಿಸಿ, ಇಲಾಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.