ಶ್ರಿ ಸದಾಶಿವ ದೇವರ ಮೂಲಕ್ಷೇತ್ರ ಪುತ್ತಿಲಗುತ್ತು, ಬಂದಾರು, ಶ್ರೀ ಸದಾಶಿವಾ ಭಜನಾ ಮಂಡಳಿ (ರಿ.),ಕುರಾಯ, ಬಂದಾರು ಶ್ರೀ ಸದಾಶಿವ ಮಕ್ಕಳ ಕುಣಿತ ಭಜನಾ ಮಂಡಳಿ,ಕುರಾಯ,ಬಂದಾರು ಇವರ 42ನೇ ವರ್ಷದ ವಾರ್ಷಿಕೋತ್ಸವ-ಕಹಳೆ ನ್ಯೂಸ್

ಬಂದಾರು:”ಶ್ರಿ ಸದಾಶಿವ ದೇವರ ಮೂಲಕ್ಷೇತ್ರ ಪುತ್ತಿಲಗುತ್ತು, ಬಂದಾರು, ಶ್ರೀ ಸದಾಶಿವಾ ಭಜನಾ ಮಂಡಳಿ (ರಿ.),ಕುರಾಯ, ಬಂದಾರು ಶ್ರೀ ಸದಾಶಿವ ಮಕ್ಕಳ ಕುಣಿತ ಭಜನಾ ಮಂಡಳಿ,ಕುರಾಯ,ಬಂದಾರು ಇವರ 42ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಏ.23 ರಂದು ಪುತ್ತಿಲ ಗುತ್ತು ಶ್ರೀ ಸದಾಶಿವ ದೇವರ ಮೂಲಕ್ಷೇತ್ರ ದೇವರ ಗದ್ದೆಯಲ್ಲಿ ರುದ್ರಾಭಿಷೇಕ ಶಿವಪೂಜೆ, ರಂಗಪೂಜೆ ಅರ್ಧಏಕಾಹ ಭಜನೆ ,ಭಜನಾ ಕಮ್ಮಟೋತ್ಸವ ಮತ್ತು ನಾಗದೇವರ ಹಾಗೂ ಪಂಜುರ್ಲಿದೈವದ ಶಿಲಾ ಪ್ರತಿಷ್ಠೆ ನಡೆಯಲಿದೆ.
ಬೆಳಿಗ್ಗೆ ಗಂಟೆ 6.30 ರಿಂದ ಸಂಜೆ ಗಂಟೆ 6.30ರ ತನಕ ಅರ್ಧಏಕಾಹ ಭಜನಾ ಕಾರ್ಯಕ್ರಮ ನಡೆಯಲಿದ್ದು,
ಭಜನಾ ಕಮ್ಮಟೋತ್ಸವದ ಉದ್ಘಾಟನೆಯನ್ನು ಗಾಯಕರು ಮತ್ತು ಭಜನಾ ತರಬೇತುದಾರದ ಶ್ರೀ ರಾಮಕೃಷ್ಟ ಕಾಟುಕುಕ್ಕೆ ಇವರು ಮಾಡಲಿದಾರೆ.
ರಾತ್ರಿ ಗಂಟೆ 9.30ಕ್ಕೆ ಪುತ್ತಿಲಗುತ್ತು ದೇವರ ಮೂಲ ಕ್ಷೇತ್ರದ ಭಗವಸದ್ಭಕ್ತರ ಪ್ರಾಯೋಜಕತ್ವದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾ ಕುಂಭ ಕುಳಾಯಿ ಅರ್ಪಿಸುವ ಅರದಳ ಅಣಿದಾಂತಿನ ಪಾಡ್ಡನ ಅಧಾರಿತ ತುಳುನಾಟಕ ಪರಮಾತ್ಮೆ ಪಂಜುರ್ಲಿ ಕಾಡ್ ಪೊಗ್ಗಿಯೆಂಡ ಮೃಗ ನಾಡ್ ಪೊಗ್ಗಿಯೆಂಡ ದೈವ ಎಂಬ ತುಳುನಾಟಕ ನಡೆತಲಿದೆ.














