ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯಲ್ಲಿ ಲಕ್ಕಿ ಡ್ರಾ ಫಲಿತಾಂಶ ; ವಿಜೇತರ ಆಯ್ಕೆ-ಕಹಳೆ ನ್ಯೂಸ್

ಪುತ್ತೂರಿನ ದರ್ಬೆಯಲ್ಲಿರುವ ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯಲ್ಲಿ ಪ್ರತಿಷ್ಟಿತ ಕಂಪೆನಿಗಳ ಎಲ್‌ಇಡಿ ಲೈಟ್ಸ್ ಮತ್ತು ಬಿಎಲ್‌ಡಿಸಿ ಫ್ಯಾನ್ಸ್ಗಳ ಮಾರಾಟ ಮೇಳ ಉತ್ಸವ ಯಶಸ್ವಿಯಾಗಿ ನಡೆದಿದೆ. ಕಡಿಮೆ ವಿದ್ಯುತ್ ಬಳಕೆಯ ಫ್ಯಾನ್ಸ್ ಮೇಲೆ ವಿಶೇಷ ರಿಯಾಯಿತಿ, ಲೈಟ್ಸ್ ಮತ್ತು ಫ್ಯಾನ್ಸ್ಗಳ ಮೇಲೆ ಶೇ 50ರವರೆಗೆ ಡಿಸ್ಕೌಂಟ್ ಹಾಗೂ ಪ್ರತೀ ಖರೀದಿಗೂ ವಿಶೇಷ ಕೂಪನ್‌ನ್ನು ನೀಡಲಾಗಿತ್ತು. ಈ ಕೂಪನ್ ನ ಲಕ್ಕಿ ಡ್ರಾ ಕಾರ್ಯಕ್ರಮ ನಡೆದಿದ್ದು, ವಿಜೇತರನ್ನು ಆಯ್ಕೆ ಮಾಡಲಾಯಿತು.
ಪ್ರಥಮ ಬಹುಮಾನವನ್ನು ಜಯರಾಮ್ ಭಟ್ ಸಂತ್ಯಾರ್ ಇವರು ಪಡೆದುಕೊಂಡಿದ್ದು, ದ್ವಿತೀಯಾ ಬಹುಮಾನವನ್ನು ಅನಿತ ಪರ್ಪುಂಜ ಹಾಗು ತೃತೀಯಾ ಬಹುಮಾನವನ್ನು ಅಶ್ರಫ್ ಸಂಪ್ಯ ಇವರು ಪಡೆದಿದ್ದಾರೆ.
ಇನ್ನು ಜುನೈದ್ ಮತ್ತು ದುರ್ಗಾಭಿರಾಮ್ 4 ಮತ್ತು 5ನೇ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ವಿಜೇತರು ಬಿಎಲ್‌ಡಿಸಿ ಫ್ಯಾನ್, ಸೋಲಾರ್ ಲೈಟ್, ಈರನ್ ಬಾಕ್ಸ್ ಹಾಗೂ ಸೋಲಾರ್ ಲ್ಯಾಂಪ್‌ನ್ನು ತಮ್ಮದಾಗಿಸಿಕೊಂಡಿದ್ದಾರೆ,














