Thursday, March 12, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಶ್ರೀರಾಮ ಡಿಗ್ರಿ ಕಾಲೇಜು-ಅಂತರ್‌ಕಾಲೇಜು ಮಟ್ಟದ ಕಬಡ್ಡಿ ಲೀಗ್ -ಕಹಳೆ ನ್ಯೂಸ್

ಕಲ್ಲಡ್ಕ: ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರತಾಪ ಕ್ರೀಡಾಸಂಘದ ವತಿಯಿಂದ ಅಂತರ್ ಕಾಲೇಜು ಮಟ್ಟದ ಕಬಡ್ಡಿ ಲೀಗ್ (ಮ್ಯಾಟ್ ಕಬಡ್ಡಿ) ಪಂದ್ಯವು ದಿನಾಂಕ 15/04/2025ರಂದು ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಂಬೇಡ್ಕರ್
ಜಯAತಿ ಹಿನ್ನೆಲೆಯಲ್ಲಿ ಅಸ್ಪೃಶ್ಯತೆ ನಿವಾರಣೆಯ ಸಂದೇಶದೊAದಿಗೆ ಭಾರತೀಯ ಆಟವಾದ ಕಬಡ್ಡಿ ಲೀಗ್‌ನ್ನು ಆಯೋಜಿಸಲಾಗಿದೆ ಎಂದರು. ಮಂಗಳೂರಿನ ಯುವ ಉದ್ಯಮಿ, ಬಿಜೆಪಿ ಯುವಮೋರ್ಚಾ (ದ.ಕ ಜಿಲ್ಲೆಯ) ಅಧ್ಯಕ್ಷ ಶ್ರೀ ನಂದನ್ ಮಲ್ಯ ಟ್ರೋಫಿಗಳ ಮೇಲಿನ ಪರದೆ ಸರಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಕಬಡ್ಡಿ ಆಟಗಾರ, ಅಖPಈ ಯೋಧ ಶ್ರೀ ಧನರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಧನರಾಜ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಕಾಲೇಜು ಪ್ರಾಚಾರ್ಯ ಕೃಷ್ಣ ಪ್ರಸಾದ್ ಕಾಯರ್‌ಕಟ್ಟೆ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಾಹೀರಾತು
ಜಾಹೀರಾತು

ತೀರ್ಪುಗಾರರಾಗಿ ಆಗಮಿಸಿದ ಶ್ರೀ ಮನೋಹರ್ ಕೆದಿಲ, ಅರವಿಂದ Pಖಿ, ದೀಪಕ್ ಪೆರಾಜೆ ಹಾಗೂ ಉಪ ಪ್ರಾಂಶುಪಾಲ ಯತಿರಾಜ್ ಪೆರಾಜೆ, ಕ್ರೀಡಾ ಸಂಘದ ನಿರ್ದೇಶಕ ಪ್ರಶಾಂತ್ ಸೋಮಯಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಶಾಂಕ್ ಅಂತಿಮ ಬಿಸಿಎ ವಂದಿಸಿ,

ದಿವ್ಯಶ್ರೀ ದ್ವಿತೀಯ ಬಿಸಿಎ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಚಾಲನೆಗೊಂಡಿತು.