
ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಮಸೀದಿಗೆ ಸಂಬಂಧಿಸಿದ ಕಟ್ಟಡವೊಂದರ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃ*ತದೇಹ ಪತ್ತೆಯಾಗಿದೆ.
ಮಸೀದಿಯ ವ್ಯವಸ್ಥಾಪಕ ಸುಹೇಲ್ ಅವರು ನಿನ್ನೆ ಶೌಚಾಲಯಕ್ಕೆ ಹೋದಾಗ ಮೃ*ತಪಟ್ಟ ಸ್ಥಿತಿಯಲ್ಲಿ ನವಜಾತ ಶಿಶುವನ್ನು ಗಮನಿಸಿದ್ದಾರೆ.
ತಕ್ಷಣವೇ ಅವರು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದು, ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಮದುವೆಯಾಗದ ಯುವತಿ ಸ್ಥಳೀಯ ವೈದ್ಯರ ಬಳಿ ಪರೀಕ್ಷೆಗಳನ್ನು ನಡೆಸಿದ್ದ ಬಗ್ಗೆಯೂ ಮಾಹಿತಿ ಹರಿದಾಡುತ್ತಿದೆ. ಸಿಸಿ ಕ್ಯಾಮೆರಾದಲ್ಲಿ ಯುವತಿ ಮಸೀದಿಗೆ ಸೇರಿದ ಶೌಚಾಲಯಕ್ಕೆ ಬಂದು ಹೋಗಿರುವುದು ಪತ್ತೆಯಾಗಿದ್ದು, ಆಕೆ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ಮಗುವನ್ನು ಕೊಂದು ಶೌಚಾಲಯದಲ್ಲಿ ಎಸೆದು ಹೋಗಿರುವುದಾಗಿ ಹೇಳಲಾಗಿದೆ.
ಈ ಬಗ್ಗೆ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದು, ಸತ್ಯಾಂಶ ಏನು ಎಂಬುದು ಇನ್ನಷ್ಟೇ ಬಯಲಿಗೆ ಬರಬೇಕಾಗಿದೆ.














