Friday, March 13, 2026
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಸಮುದ್ರದಲ್ಲಿ ಮುಳುಗಿ ಓರ್ವ ಸಾವು, ಇನ್ನೋರ್ವ ಯುವಕ ನಾಪತ್ತೆ -ಕಹಳೆ ನ್ಯೂಸ್

ಸುರತ್ಕಲ್‌: ಮದುವೆ ಸಂಭ್ರಮಕ್ಕೆ ಮುಂಬಯಿಯಿಂದ ಬಂದಿದ್ದ ಓರ್ವ ಬಾಲಕನ ಸಹಿತ ಇಬ್ಬರು ಸುರತ್ಕಲ್‌ ಬೀಚ್‌ನಲ್ಲಿ ಆಡುತ್ತಿದ್ದ ವೇಳೆ ಬೃಹತ್‌ ತೆರೆ ಅಪ್ಪಳಿಸಿ ನೀರು ಪಾಲಾಗಿದ್ದು ಓರ್ವ ಮೃತಪಟ್ಟು, ಇನ್ನೋರ್ವ ನಾಪತ್ತೆಯಾದ ದಾರುಣ ಘಟನೆ ಮಂಗಳವಾರ ಸಂಜೆ ನಡೆದಿದೆ.

ಮೃತ ಬಾಲಕನನ್ನು ಮುಂಬಯಿಯ ವಿವೇಕ್‌ ಅವರ ಪುತ್ರ ಗ್ಯಾನ್‌ ಬಂಜನ್‌(18)ಎಂದು ಗುರುತಿಸಲಾಗಿದ್ದು, ಮುಂಬಯಿಯ ಉಮೇಶ್‌ ಅವರ ಪುತ್ರ ಅನೀಶ್‌ ಕುಲಾಲ್‌ (16) ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ತುರ್ತು ಸ್ಪಂದನ ತಂಡ ರಾತ್ರಿ ಬಂದಿದ್ದು, ದಡದಲ್ಲಿ ಹುಡುಕಾಡಿ ಮರಳಿದೆ. ಬುಧವಾರ ಮತ್ತೆ ಶೋಧಕಾರ್ಯ ನಡೆಯಲಿದೆ.

ಜಾಹೀರಾತು
ಜಾಹೀರಾತು

ಸುರತ್ಕಲ್‌ ಸಮೀಪದ ಪುಚ್ಚಾಡಿ, ಪೊರಿಕಾನ ಮೂಲ ತಾಯಿ ಮನೆಯಲ್ಲಿ ಉಮೇಶ್‌ ಅವರ ಪುತ್ರಿಗೆ ವಿವಾಹ ನಿಶ್ಚಿತವಾಗಿದ್ದು ಶನಿವಾರ ಮೆಹಂದಿ ಕಾರ್ಯಕ್ರಮ ಮುಗಿದಿತ್ತು. ಬುಧವಾರ ಮೂಡಬಿದಿರೆಯಲ್ಲಿ ವಿವಾಹ ದಿನಾಂಕ ನಿಶ್ಚಯವಾಗಿತ್ತು. ಬಿಡುವು ಇದ್ದುದರಿಂದ ಮಂಗಳವಾರ ಸಂಬಂಧಿಕರು ತಮ್ಮ ಮಕ್ಕಳೊಂದಿಗೆ ಕಡಲ ತೀರಕ್ಕೆ ತೆರಳಿದ್ದರು. ಅಪರಾಹ್ನ 4ರಿಂದ ಬೀಚ್‌ನಲ್ಲಿ ಈಜಾಡಿ ಸಂಜೆ 5.30ಕ್ಕೆ ಹಿಂದಿರುಗಲು ಸಿದ್ಧವಾಗಿದ್ದರು. ಜತೆಗಿದ್ದ ಪ್ರಖ್ಯಾತ್‌ ಅವರು ರಸ್ತೆ ಬದಿ ಬರಲು ತಿಳಿಸಿ ಕಾರು ತರಲು ತೆರಳಿದರು. ಈ ಸಂದರ್ಭದಲ್ಲಿ ಈ ಇಬ್ಬರೂ ಕೊನೆಯ ಬಾರಿ ಒಮ್ಮೆ ಈಜಿ ಬರೋಣ ಎಂದು ವಾಪಸು ಸಮುದ್ರಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಪ್ರಬಲವಾದ ತೆರೆ ಬಂದದ್ದನ್ನು ತಿಳಿಯುವಲ್ಲಿ ವಿಫ‌ಲರಾದರು. ಅದರ ಪರಿಣಾಮ ತೆರೆಯ ಹೊಡೆತಕ್ಕೆ ಸಿಲುಕಿದರು.

ಸಂಬಂಧಿಕರು ಗ್ಯಾನ್‌ ಅಪಾಯದಲ್ಲಿರುವುದನ್ನು ಕಂಡು ಕೂಡಲೇ ಸ್ಥಳೀಯರ ಸಹಾಯದಿಂದ ದಡಕ್ಕೆ ಎಳೆದು ತಂದರು. ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಿದರಾದರೂ, ಪ್ರಯೋಜನವಾಗಲಿಲ್ಲ.

ಈಗ ಸಂಭ್ರಮದಲ್ಲಿರಬೇಕಾದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು ಹೆತ್ತವರ, ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.