ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಗತಿಕ ಕುಟುಂಬಕ್ಕೆ ಮಾಸಾಸನ ಕೈಪಿಡಿ ಹಸ್ತಾಂತರ -ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಅಂಗರಾಜೆ ಜಾಕುರವರಿಗೆ ಮಸಾಸನ ಕೈಪಿಡಿ ವಿತರಣೆ ಮಾಡಲಾಯಿತು.
ಮನೆಗೆ ಆಧಾರ ಸ್ತಂಭವಾಗಿದ್ದ ಮಗ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಬಿದ್ದು ಮೃತಪಟ್ಟಿರುತ್ತಾರೆ. ದೊಡ್ಡ ಮಗಳು ಹೃದ್ರೋಗ ಸಮಸ್ಯೆಯಿಂದ ಬಳಲುತಿದ್ದು, ಸಣ್ಣ ಮಗಳು ಬುದ್ಧಿಮಾಂದ್ಯ ಯಾಗಿದ್ದು. ಶ್ರೀ ಕ್ಷೇತ್ರದಿಂದ ಮಂಜೂರಾದ ಮಾಸಾಸನ ಕೈಪಿಡಿಯನ್ನು ಶೌರ್ಯ ವಿಪತ್ತು ನಿರ್ವಹಣಾ ಕೆದಿಲದ ಸದಸ್ಯರು ವಿತರಿಸಿದರು.
ಈ ಸಂದರ್ಭದಲ್ಲಿ, ಜ್ಞಾನವಿಕಾಸ ಸಮನ್ವಯಧಿಕಾರಿ ದೀಪಾರವರು ಕೆದಿಲ B ಒಕ್ಕೂಟದ ಸೇವಾಪ್ರತಿನಿದಿ ಯವರಾದ ಜಯಂತಿ ರವರು. ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕೆದಿಲದ ಜಗದೀಶ್, ಶೀನಪ್ಪ, ಗಿರೀಶ, ಉಪಸ್ಥಿತರಿದ್ದರು.














