ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ-ಕಹಳೆ ನ್ಯೂಸ್

ಕಲ್ಲಡ್ಕ: ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಮಹಿಳಾ ದೌರ್ಜನ್ಯ ವಿರೋಧಿ ಘಟಕ ಮತ್ತು ಲೈಂಗಿಕ ಶೋಷಣಾ ವಿರೋಧಿ ಘಟಕಗಳ ಆಶ್ರಯದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಮಾನವಿಕ ಸಂಘದ ನಿರ್ದೇಶಕಿ ಹಾಗೂ ಇತಿಹಾಸ ಉಪನ್ಯಾಸಕಿ ಶ್ರೀಮತಿ ಆಶಾಲತಾ ಇವರು ಮಹಿಳಾದಿನದ ಮಹತ್ವವನ್ನು ತಿಳಿಸಿದರು. ಉಪ ಪ್ರಾಂಶುಪಾಲ ಯತಿರಾಜ್ ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
Anti women harrasmentcell ಹಾಗೂ anti sexual harrasment cell ನ ನಿರ್ದೇಶಕಿಯರಾದ ಶ್ರೀಮತಿ ಶ್ರೀದೇವಿ ಹಾಗೂ ಕು. ದೀಕ್ಷಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಕಾಂ ವಿದ್ಯಾರ್ಥಿನಿ ಕು. ಅನುಷಾ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.














