Sunday, March 8, 2026
ಕ್ರೀಡೆಜಿಲ್ಲೆರಾಜ್ಯರಾಷ್ಟ್ರೀಯಸುದ್ದಿ

ಭಾರತದ ಗೆಲುವನ್ನು ಕುಣಿದು ಸಂಭ್ರಮಿಸಿದ ಕಪಿಲ್‌ದೇವ್,ಗವಾಸ್ಕರ್-ಕಹಳೆ ನ್ಯೂಸ್

ದುಬೈ: ಭಾನುವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ ತಂಡವು ಟ್ರೋಫಿ ಎತ್ತಿ ಹಿಡಿದಿದೆ. ಇದೂ ಸೇರಿ ಭಾರತವು ಈವರೆಗೆ 7 ಬಾರಿ ಐಸಿಸಿ ಟ್ರೋಫಿಗಳನ್ನು ಗೆದ್ದಿದೆ. ಹಾಲಿ, ಮಾಜಿ ಕ್ರಿಕೆಟಿಗರು ಈ ಸಂಭ್ರಮವನ್ನು ತಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

1983ರಲ್ಲಿ ಭಾರತ ತಂಡ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಾಗ ಭಾರತ ತಂಡದಲ್ಲಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮತ್ತು ತಂಡದ ನಾಯಕತ್ವ ವಹಿಸಿದ್ದ ಕಪಿಲ್ ದೇವ್ ಭಾರತ ಟ್ರೋಫಿ ಗೆಲ್ಲುತ್ತಿದ್ದಂತೆ ಕುಣಿದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರೋಹಿತ್ ಶರ್ಮಾ ಟ್ರೋಫಿ ಸ್ವೀಕರಿಸುತ್ತಿದ್ದಂತೆ ಇತ್ತ ಮೈದಾನದಲ್ಲಿ ನಿರೂಪಕಿ ಜೊತೆ ಚರ್ಚೆಯಲ್ಲಿ ತೊಡಗಿದ್ದ ಸುನಿಲ್ ಗಬಾಸ್ಕರ್ ಕುಣಿಯುತ್ತಿರುವ ದೃಶ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು

ಇತ್ತ, ಟಿ.ವಿ ಲೈವ್ ಚರ್ಚೆಯಲ್ಲಿ ತೊಡಗಿದ್ದ ಕಪಿಲ್ ದೇವ್ ಸಹ ಕುಣಿದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.