Thursday, March 12, 2026
ಬೆಂಗಳೂರುರಾಜ್ಯಸುದ್ದಿ

ದಾಖಲೆಯ 16ನೇ ಬಜೆಟ್‌ಗೆ ಸಿಎಂ ಸನ್ನದ್ಧ : 4 ಲಕ್ಷ ಕೋ. ರೂ. ಸಿದ್ದು ಬಜೆಟ್‌-ಕಹಳೆ ನ್ಯೂಸ್

ಬೆಂಗಳೂರು: “ಪಂಚ ಗ್ಯಾರಂಟಿ’ ಯೋಜನೆಗಳಿಂದಾಗಿ ರಾಜ್ಯದ ಅಭಿವೃದ್ಧಿ ತಾಳ ತಪ್ಪಿದೆ ಎಂಬ ಅಪಸ್ವರಗಳ ನಡುವೆಯೇ ವಿತ್ತ ಖಾತೆಯನ್ನು ತಮ್ಮಲ್ಲಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 16ನೇ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ.

ಶುಕ್ರವಾರ ಬೆಳಗ್ಗೆ 10.15ಕ್ಕೆ ಮಂಡನೆಯಾಗಲಿರುವ 2025- 26ನೇ ಸಾಲಿನ ಬಜೆಟ್‌ ಹಲವು ನಿರೀಕ್ಷೆ, ಕುತೂಹಲಗಳನ್ನು ಸೃಷ್ಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷವಾಗಿ ಗ್ಯಾರಂಟಿ ಯೋಜನೆಗಳು, ವಿವಿಧ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳ ಜತೆಗೆ ಅಭಿವೃದ್ಧಿ ಯೋಜನೆಗಳಿಗೆ ಬೇಡಿಕೆಗೆ ತಕ್ಕಂತೆ ಅನುದಾನ ನೀಡಿ ಅಭಿವೃದ್ಧಿ ಪಥದ ರಥ ಎಳೆಯುವ ಸವಾಲು ಸಿಎಂ ಅವರ ಮುಂದಿದೆ.

ಜಾಹೀರಾತು
ಜಾಹೀರಾತು

ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಯುವನಿಧಿಯಂತಹ ಗ್ಯಾರಂಟಿ ಯೋಜನೆಗಳ ಬಗ್ಗೆ ಪಕ್ಷದ ಒಳಗೆ-ಹೊರಗೆ ಸಾಕಷ್ಟು ವಿರೋಧಗಳಿದ್ದರೂ ಅವುಗಳನ್ನು ಮುಂದುವರಿಸುವ ಬದ್ಧತೆಯನ್ನು ಬಜೆಟ್‌ನಲ್ಲಿ ಪ್ರದರ್ಶಿಸಬಹುದು. ಆದರೆ ದುರ್ಬಳಕೆ ನೆಪದಲ್ಲಿ ಕೆಲವು ಗ್ಯಾರಂಟಿ ಯೋಜನೆಗಳಿಗೆ ತುಸು ಕಡಿವಾಣ ಹಾಕುವ ಸಾಧ್ಯತೆಗಳಿವೆ. ಜತೆಗೆ, “ಸ್ವಯಂಪ್ರೇರಣೆಯಿಂದ ಗ್ಯಾರೆಂಟಿ ಬಿಟ್ಟುಕೊಡಿ’ ಎಂಬ ಕೋರಿಕೆಯನ್ನು ಮಂಡಿಸಬಹುದಾಗಿದೆ.

ಕಳೆದ ಬಾರಿ 3,68,674 ಕೋ.ರೂ. ಗಾತ್ರದ ಬಜೆಟ್‌ ಮಂಡಿಸಿದ್ದ ಸಿಎಂ ಸಿದ್ದರಾಮಯ್ಯ ಈ ಬಾರಿ ಅಂದಾಜು 4 ಲಕ್ಷ ಕೋ.ರೂ. ಗಾತ್ರದ ಬಜೆಟ್‌ ಮಂಡಿಸುವ ನಿರೀಕ್ಷೆ ಇದೆ. ರಾಜ್ಯದ ಸಂಪನ್ಮೂಲಗಳ ಜತೆಗೆ ಅಂದಾಜು 1.50 ಲಕ್ಷ ಕೋ.ರೂ. ಸಾಲ ಎತ್ತುವಳಿ ಸಾಧ್ಯತೆಗಳಿವೆ. ಜತೆಗೆ ತೆರಿಗೆಯೇತರ ಆದಾಯ ಮೂಲಗಳ ಕಡೆಯೂ ಹೆಚ್ಚು ಗಮನ ಕೊಡುವ ಪ್ರಯತ್ನ ನಡೆದಿದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ 1.10 ಲಕ್ಷ ಕೋ.ರೂ. ಆದಾಯ ಸಂಗ್ರಹ ಗುರಿ ಹಮ್ಮಿಕೊಂಡಿರುವ ಸರಕಾರವು 2025-26ನೇ ಸಾಲಿನಲ್ಲಿ ಈ ಇಲಾಖೆಯಿಂದ 1.25 ಲಕ್ಷ ಕೋ.ರೂ. ಆದಾಯ ನಿರೀಕ್ಷಿಸಬಹುದೆಂದು ಹೇಳಲಾಗುತ್ತಿದೆ.

ಎಂದಿನಂತೆ ಅಹಿಂದ ವರ್ಗಕ್ಕೆ ಬಜೆಟ್‌ನಲ್ಲಿ ಹೆಚ್ಚು ಪ್ರಾಧಾನ್ಯ ಮುಂದುವರಿಸುವುದರ ಜತೆಗೆ ರೈತ ಸಮುದಾಯಕ್ಕೆ ಚಾಲ್ತಿಯಲ್ಲಿರುವ ಶೂನ್ಯಬಡ್ಡಿ ಸಾಲ 5 ಲಕ್ಷ ರೂ.ಗಳ ಜತೆಗೆ ಶೇ. 3ರ ಬಡ್ಡಿ ದರದಲ್ಲಿ ನೀಡಲಾಗುತ್ತಿರುವ 15 ಲಕ್ಷ ರೂ. ಸಾಲ ಸೌಲಭ್ಯ ಮುಂದುವರಿಸಬಹುದು. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಮೂಲಸೌಲಭ್ಯಗಳ ಜತೆಗೆ ಬೆಂಗಳೂರು ಅಭಿವೃದ್ಧಿಗೆ ಸರಕಾರ ಏನು ವಿಶೇಷ ಕೊಡುಗೆ ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಬಜೆಟ್‌ಗೆ ಮುನ್ನ ಬಿಜೆಪಿ-ಜೆಡಿಎಸ್‌ ಪ್ರತಿಭಟನೆ
ಎಸ್‌ಸಿಪಿ -ಟಿಎಸ್‌ಪಿ ಹಣ ದುರ್ಬಳಕೆ ಆಗಬಾರದು, ಪ್ರತೀ ವಿಧಾನಸಭಾ ಕ್ಷೇತ್ರಕ್ಕೂ 150 ಕೋಟಿ ರೂ. ಜತೆಗೆ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಬೇಕೆಂದು ಆಗ್ರಹಿಸಿ ಬಿಜೆಪಿ-ಜೆಡಿಎಸ್‌ ಪಕ್ಷಗಳು ಜಂಟಿಯಾಗಿ ಶುಕ್ರವಾರ ಬೆಳಿಗ್ಗೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿವೆ.

ಬಜೆಟ್‌ ಕೇವಲ ಹಾಳೆಗಳ ಮೇಲಿನ ಲೆಕ್ಕವಲ್ಲ, ರಾಜ್ಯದ 7 ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ. ನಾಡಿನ ಪ್ರತಿಯೊಬ್ಬ ಪ್ರಜೆಯನ್ನು ಸರಕಾರದ ಯಾವುದಾದರೊಂದು ಯೋಜನೆಯ ಫ‌ಲಾನುಭವಿಯನ್ನಾಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಬಜೆಟ್‌ ಮೂಲಕ ಮಾಡಿದ್ದೇನೆ ಎನ್ನುವ ಭರವಸೆ ನನಗಿದೆ-ಮುಖ್ಯಮಂತ್ರಿ ಸಿದ್ದರಾಮಯ್ಯ.