Sunday, March 8, 2026
ಅಂಕಣದಕ್ಷಿಣ ಕನ್ನಡಬೆಳ್ತಂಗಡಿಮಂಗಳೂರುಸಿನಿಮಾಸುದ್ದಿ

ನಟನೆ, ನಿರ್ದೇಶನ, ಕಥೆ ಸಂಭಾಷಣೆ ಎಲ್ಲದಕ್ಕೂ ಸೈ ನಮ್ಮ ತುಳುನಾಡ ಕುವರ ಅನೀಶ್ ಪೂಜಾರಿ ವೇಣೂರು..!! – ಕಹಳೆ ನ್ಯೂಸ್

ನಟನೆಯಲ್ಲೂ ಸೈ, ಕಥೆ, ಸಂಭಾಷಣೆ, ನಿರ್ದೇಶನದಲ್ಲಂತೂ ಎತ್ತಿದ ಕೈ. ಅವರೇ ನಮ್ಮ ತುಳುನಾಡಿನ ಕುವರ ಸಕಲಕಲಾವಲ್ಲಭ ಅನೀಶ್ ಪೂಜಾರಿ ವೇಣೂರು. 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು

ಬಹುಶಃ ತುಳುನಾಡಿನಲ್ಲಿ ಇವರ ಹೆಸರು ಕೇಳದವರಿಲ್ಲ. ತುಳುನಾಡು ಮಾತ್ರವಲ್ಲದೇ ಕರ್ನಾಟಕದಾದ್ಯಂತ ಕಾಮಿಡಿ ಕಿಲಾಡಿ ಶೋ ಮೂಲಕ ಹೆಸರುವಾಸಿಯಾದ ಪ್ರತಿಭಾನ್ವಿತ ನಟ, ನಿರ್ದೇಶಕರೂ ಹೌದು. ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿ ತನ್ನ ವಿಭಿನ್ನ ಶೈಲಿಯ ನಟನಾ ಕೌಶಲ್ಯದ ಮೂಲಕ ಕರುಣಾಡ ಮನೆ ಮನ ಗೆದ್ದ ಅನೀಶ್ ಅವರು ಬೆಳ್ತಂಗಡಿಯ ವೇಣೂರಿನವರು. ಕೋಟ್ಯಪ್ಪ ಪೂಜಾರಿ ಹಾಗೂ ವಿಜಯಲಕ್ಷಿö್ಮÃ ದಂಪತಿಯ ಪ್ರೀತಿಯ ಪುತ್ರ ಅನೀಶ್.

ಬೆಳ್ತಂಗಡಿಯಲ್ಲಿ ಪ್ರಾಥಾಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಅನೀಶ್ ವಾಮದಪದವು ಸರ್ಕಾರಿ ಶಾಲೆಯಲ್ಲಿ ಪದವಿ ಪಡೆದು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಾಲ್ಯದಿಂದಲೇ ನಟನೆ, ನೃತ್ಯ ಹಾಗೂ ಹಾಡುಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದ ಇವರು ನಾಟಕ ಹಾಗೂ ನಾಟಕಗಳಿಗೆ ಕಥೆ ಬರೆಯೋದ್ರಲ್ಲೂ ಎತ್ತಿದ ಕೈ. ಕನ್ನಡ ಚಿತ್ರವಾದ ಕನಸು ಮಾರಾಕ್ಕಿದೆ ಸಿನಿಮಾದಲ್ಲಿ ಚಿತ್ರಕಥೆ, ಸಂಭಾಷಣೆ, ಸಹಾಯಕ ನಿರ್ದೇಶಕರಾಗಿ ಹಾಗೂ ನಟನೆಯೂ ಮಾಡಿದ್ದಾರೆ. 35ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ ಹಾಗೂ ಸಾಕಷ್ಟು ತುಳು ಹಾಗೂ ಕನ್ನಡ ಸಿನಿಮಾಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

 


ಇನ್ನು ಇವರೇ ಸ್ವತಃ ರಚಿಸಿ ನಟಿಸಿದ ತುಳು ಭಾಷೆಯ ಯಶಸ್ವೀ ನಾಟಕಗಳಲ್ಲಿ ಒಂದಾದ ‘ಮರ್ಲ್ ಕಟ್ಟೊಡ್ಚಿ’ ನಾಟಕ ಖ್ಯಾತಿ ಪಡೆದಿದೆ. ಅಷ್ಟೇ ಅಲ್ಲ ಇವರ ನಟನೆಗಾಗಿ ರಾಜ್ಯ ಹಾಗೂ ಅಂತಾರಾಷ್ಟಿçÃಯ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳು ಲಭಿಸಿದೆ.
ಸದ್ಯ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರಹೊಮ್ಮಿರುವ ತುಳುವಿನ ದಸ್ಕತ್ ಸಿನಿಮಾವನ್ನು ರಚಿಸಿದ್ದು ಅತ್ಯದ್ಭುತ ಖ್ಯಾತಿಯನ್ನು ತಂದುಕೊಟ್ಟಿದೆ. ಮೊದಲ ಬಾರಿ ನಿರ್ದೇಶಿಸಿದ ಸಿನಿಮಾವೇ ಸಖತ್ ಹಿಟ್ ತಂದು ಕೊಟ್ಟಿರೋದು ತುಳುನಾಡಿನ ಹೆಮ್ಮೆಯ ವಿಚಾರ.

ಗ್ರಾಮೀಣ ಭಾಗದ ಮಧ್ಯಮ ಕುಟುಂಬದಿAದ ಬಂದ ಅನೀಶ್ ಅವರು ಕೇವಲ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಇಷ್ಟೆಲ್ಲಾ ಸಾಧನೆ ಮಾಡಿರೋದು ನಿಜಕ್ಕೂ ಅವರಿಗೆ ಕಲೆಯ ಮೇಲಿರೋ ಅಭಿಮಾನಕ್ಕೆ ಸಿಕ್ಕ ಪ್ರತಿಫಲ. ಅದೇನೆ ಆಗ್ಲಿ ತುಳುನಾಡಿನ ಪ್ರತಿಭೆ ಅನೀಶ್ ಪೂಜಾರಿ ಕೇವಲ ಕರ್ನಾಟಕ ಮಾತ್ರವಲ್ಲದೇ ವಿಶ್ವದಾದ್ಯಂತ ತಮ್ಮ ಹೆಸರು ಅಚ್ಚೊತ್ತಲಿ ಎಂಬುವುದೇ ನಮ್ಮ ಆಶಯ.