Wednesday, March 18, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಛತ್ರಪತಿ ಶಿವಾಜಿ ಜಯಂತಿಯ ಆಚರಣೆ-ಕಹಳೆ ನ್ಯೂಸ್

ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಬುಧವಾರ ಛತ್ರಪತಿ ಶಿವಾಜಿ ಜಯಂತಿಯ ಆಚರಣೆ ವೈಭವ ಪೂರ್ಣವಾಗಿ ನಡೆಯಿತು.

ಪ್ರಾಂಶುಪಾಲೆ ಮಾಲತಿ ಡಿ ಮಾತನಾಡಿ ವಿದ್ಯಾರ್ಥಿಗಳು ಐತಿಹಾಸಿಕ ವಿಷಯವನ್ನು ತಿಳಿದುಕೊಳ್ಳುವುದರೊಂದಿಗೆ ಶಿವಾಜಿಗೆ ಸಂಬAಧಿಸಿದ ತಾಣಗಳಿಗೆ ಭೇಟಿ ನೀಡುವುದು ಜೀವನಕ್ಕೆ ಸ್ಪೂರ್ತಿದಾಯಕ. ಶಿವಾಜಿಗೆ ಸಂಬAಧಿಸಿದ ಗ್ರಂಥಗಳ ವಾಚನದೊಂದಿಗೆ ನಮ್ಮ ಜೀವನವನ್ನು ಕೂಡ ಪಾವನವಾಗಿಸಬಹುದು. ಹಿಂದುತ್ವವನ್ನು ಕಾಪಾಡುವಂತದ್ದು ನಮ್ಮೆಲ್ಲರ ಜವಾಬ್ದಾರಿ ಎಂಬ ಹೇಳಿದರು.
ಐದನೇ ತರಗತಿಯ ನವೀಶ್ ಮಾರ್ತ ಶಿವಾಜಿಯ ಪಾತ್ರ ನಿರ್ವಹಿಸಿದರೆ, ಅದೇ ತರಗತಿಯ ರತುಲ್ ಅದ್ವೆöÊತ್ ಶಿವಾಜಿ ಬಗೆಗಿನ ನಾನಾ ಶ್ಲಾಘನೆಯ ಘೋಷಣೆಯೊಂದಿಗೆ ಶಿವಾಜಿ ಪಾತ್ರಧಾರಿಯನ್ನು ವೇದಿಕೆಗೆ ಆಹ್ವಾನಿಸಿದರು. ಏಳನೇ ತರಗತಿಯ ಸೌಪರ್ಣಿಕ ಮತ್ತು ಮಾನ್ಯ ಲಕ್ಷ್ಮಿ ಶಿವಾಜಿಯ ಜೀವನ ಚರಿತ್ರೆಯ ಕಥನವನ್ನು ತಿಳಿಸಿದರು. ಏಳನೇ ತರಗತಿಯ ಮನಸ್ವಿ ನಿರೂಪಣೆಗೈದರು. ಐದನೇ ತರಗತಿಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನೆರವೇರಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು