Friday, March 13, 2026
ಉಡುಪಿಸುದ್ದಿ

ಪಡುಬಿದ್ರಿ: ಸಾಲಬಾಧೆ ತಾಳಲಾರದೆ ನೇಣಿಗೆ ಶರಣಾದ ಯುವಕ -ಕಹಳೆ ನ್ಯೂಸ್

ಪಡುಬಿದ್ರಿ : ಸಾಲಬಾಧೆ ತಾಳಲಾರದೇ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರೆಯಲ್ಲಿ ನಿನ್ನೆ(ಜ.8) ರಂದು ಸಂಜೆ ನಡೆದಿದೆ.

ಪಡುಬಿದ್ರಿ ಬೇಂಗ್ರೆ ರಸ್ತೆಯ ಕೌಸರ್ ಮಂಜಿಲ್‌ನ ನಸ್ರುಲ್ಲಾ(29) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿದೇಶದಲ್ಲಿ ಉದ್ಯೋಗದಲ್ಲಿದ್ದ ನಸ್ರುಲ್ಲಾ ಅವರು 3 ತಿಂಗಳ ಹಿಂದೆ ಊರಿಗೆ ಬಂದಿದ್ದರು. ನಸ್ರುಲ್ಲಾ ಅವರು ಪಡೆದಿದ್ದ ಮನೆ ಸಾಲ ಹಾಗು ವೈಯಕ್ತಿಕ ಸಾಲಗಳನ್ನು ಹಿಂತಿರುಗಿಸಲು ಬ್ಯಾಂಕ್ ನವರು ಮತ್ತು ಸಾಲದವರು ಆತನ ಮನೆಗೆ ಬಂದು ಹೋಗುತ್ತಿದ್ದರು. ಇದರಿಂದ ಅವರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು

ತಮ್ಮ ಪತ್ನಿಯ ಆಭರಣಗಳನ್ನೂ ಅಡವಿಟ್ಟಿದ್ದ ನಸ್ರುಲ್ಲಾ ಬುಧವಾರ ಕೆಲ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬಂದಿದ್ದರು. ಬುಧವಾರ ಸಂಜೆಯ ವೇಳೆ ಪತ್ನಿಯೊಂದಿಗೆ ಜಗಳವಾಡಿ, ತನ್ನ ಮೊಬೈಲನ್ನು ಪುಡಿ ಮಾಡಿ ನೇರ ತಮ್ಮ ಬೆಡ್ ರೂಂಗೆ ತೆರಳಿ
ಫ್ಯಾನಿಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.