Saturday, March 14, 2026
ಸುದ್ದಿ

ವರದಕ್ಷಿಣೆ ಕಿರುಕುಳ: 6 ಮಂದಿ ವಿರುದ್ಧ ದೂರು ದಾಖಲು – ಕಹಳೆ ನ್ಯೂಸ್

ಉಡುಪಿ: ವರದಕ್ಷಿಣೆ ಕಿರುಕುಳ ಆರೋಪದಲ್ಲಿ ನ್ಯಾಯಾಲಯದಲ್ಲಿ ನೀಡಿದ ಖಾಸಗಿ ದೂರಿನ ಹಿನ್ನೆಲೆಯಲ್ಲಿ 6 ಮಂದಿ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದೂರುದಾರರಾದ ನೂರ್‌ ಜಹಾನ್‌ (37) ಅವರು ಮಹಮ್ಮದ್‌ ಮುಸ್ತಾಕ್‌ ಅವರನ್ನು ಬೆಳ್ತಂಗಡಿಯಲ್ಲಿ ಮದುವೆಯಾಗಿದ್ದು, ಮದುವೆ ಸಂದರ್ಭ 70 ಪವನ್‌ ಚಿನ್ನಾಭರಣ ಹಾಗೂ 75 ಸಾ.ರೂ. ವರದಕ್ಷಿಣೆ ನೀಡಲಾಗಿತ್ತು.  ಬೆಳ್ತಂಗಡಿಯಲ್ಲಿ ವಾಸವಿದ್ದ ಮುಸ್ತಾಕ್‌ ಹೆಚ್ಚಿನ ವರದಕ್ಷಿಣೆಗಾಗಿ ನೂರ್‌ ಜಹಾನ್‌ ಅವರಿಗೆ ಮಾನಸಿಕ ಹಿಂಸೆ ನೀಡಿ, ದೈಹಿಕ ಹಲ್ಲೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು

ಇತರ ಆರೋಪಿಗಳಾದ ಅಪ್ಸತ್‌, ಅಬ್ದುಲ್‌ ಖಾಸಿಂ ಇದಕ್ಕೆ ಸಹಕಾರ ನೀಡಿ ಕೋಣೆಯಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದರು.  2011ರಲ್ಲಿ ನೂರ್‌ ಜಹಾನ್‌ ಉಡುಪಿಯ ಬ್ರಹ್ಮಗಿರಿಯಲ್ಲಿರುವ ಅಪಾರ್ಟ್‌ ಮೆಂಟಿನಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದಾಗ ಮುಸ್ತಾಕ್‌  ಬಂದು ಮಾನಸಿಕ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು.

ಇತರ ಆರೋಪಿಗಳಾದ ಅಪ್ಸತ್‌, ಅಬ್ದುಲ್‌ ಖಾಸಿಂ, ಅಹಮ್ಮದ್‌, ಇಮಿಯಾಜ್‌ ಅವರು ಮುಸ್ತಾಕ್‌ಗೆ  ಆಸ್ಮಾರೊಂದಿಗೆ ಎರಡನೇ ವಿವಾಹ ನಡೆಸಿದ್ದಾರೆ ಎಂದು ನೂರ್‌ ಜಹಾನ್‌ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.