Monday, March 9, 2026
ಜಿಲ್ಲೆಮಡಿಕೇರಿಸುದ್ದಿ

ಜಿಲ್ಲಾ ಪೊಲೀಸ್ ಕ್ರೀಡಾಕೂಟ: ಗೆಲುವಿಗಾಗಿ ಬೆವರಿಳಿಸಿದ ಪೊಲೀಸರು-ಕಹಳೆ ನ್ಯೂಸ್

ಮಡಿಕೇರಿ: ಇಲ್ಲಿನ ಜಿಲ್ಲಾ ಸಶಸ್ತ್ರ ದಳದ ಕವಾಯತು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ಗುರುವಾರ ಸಂಭ್ರಮದ ತೆರೆ ಬಿತ್ತು.

ಪ್ರಭಾರ ಜಿಲ್ಲಾಧಿಕಾರಿ ಆನಂದ್‌ಪ್ರಕಾಶ್ ಮೀನಾ ಅವರು ಮಂಗಳವಾರ ಉದ್ಘಾಟಿಸಿದ್ದ ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ನೂರಾರು ಮಂದಿ ಪೊಲೀಸರು ಕಳೆದ 3 ದಿನಗಳಿಂದ ಭಾಗಿಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸದಾ ಕಳ್ಳರ ಹಿಂದೆ ಓಡುತ್ತಿದ್ದ ಪೊಲೀಸರು ಗೆಲುವಿಗಾಗಿ ಮೈದಾನದಲ್ಲಿ ಕೊರೆಯುವ ಚಳಿಗಾಲದಲ್ಲೂ ಬೆವರಿಳಿಸಿದರು. ಗೆಲುವು ಕಂಡಾಗ ಸಂಭ್ರಮದ ನಗೆ ಬೀರಿದರು. ಇವರ ಆಟೋಟ ಕಂಡ ಪೊಲೀಸರ ಕುಟುಂಬದವರು, ಇನ್ನಿತರ ಪೊಲೀಸರು ಹಾಗೂ ಸಾರ್ವಜನಿಕರು ಭಾರಿ ಕರತಾಡನ ಮಾಡಿ ಪ್ರೋತ್ಸಾಹಿಸಿದರು. ಪೊಲೀಸರ ಕ್ರೀಡಾ ಪ್ರತಿಭೆ ಕಂಡು ಹಿರಿಯ ಪೊಲೀಸ್ ಅಧಿಕಾರಿಗಳೂ ನಿಬ್ಬೆರಗಾದರು.

ಜಾಹೀರಾತು
ಜಾಹೀರಾತು