Friday, March 13, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾಟಕ್ಕೆ ತೆರಳುವ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಭಹಾರೈಕೆ-ಕಹಳೆ ನ್ಯೂಸ್

 ಪುತ್ತೂರು: ವಿದ್ಯಾಭಾರತಿ ರಾಷ್ಟ್ರಮಟ್ಟದ ಖೋ–ಖೋ ಪಂದ್ಯಾಟವು ಗೀತಾ ವಿದ್ಯಾ ಮಂದಿರ ಗೋಹನ, ಸೋನಿಪತ್ ಪ್ರದೇಶ, ಹರಿಯಾಣ ಇಲ್ಲಿ ನಡೆಯಲಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಈ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ.
ಅಕ್ಟೋಬರ್ 15ರಿಂದ 18ರವರೆಗೆ ನಡೆಯಲಿರುವ ಈ ಪಂದ್ಯಾಟದಲ್ಲಿ ತಂಡದಲ್ಲಿ ದ್ವಿತೀಯ ಪಿಯುಸಿಯ ಜಿಷ್ಣು ಪ್ರಕಾಶ್ ಎ, ಬಿ. ಗುರುಕಿರಣ್ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ವನಿಶ್, ಚಿಂತನ್ ಪಿ, ಭವಿಷ್ ಜಿ, ಸೃಜನ್,ತರುಣ್ ಬಿ.ಎಸ್, ಮಿಥುನ್ ಶೆಟ್ಟಿ ಎಸ್.ಎಲ್, ತೇಜಸ್ ಪಿ.ಕೆ, ಮನ್ವಿತ್ ಬಿ.ಎಲ್, ಗೌತಮ್ ವಿ ಅಂಚನ್, ಪ್ರೇಕ್ಷಿತ್ ಶೆಟ್ಟಿ ಎಂ ಭಾಗವಹಿಸಲಿದ್ದಾರೆ.

ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಶುಭಹಾರೈಸಿರುತ್ತಾರೆ. ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ಮಾರ್ಗದರ್ಶನವನ್ನು ಪಡೆದಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು