ರೇಣುಕಾಸ್ವಾಮಿ ಕೇಸ್, ದರ್ಶನ್ ಬೆನ್ನಲ್ಲೇ ಪವಿತ್ರಾ ಗೌಡಗೂ ಶಾಕ್..!! – ಕಹಳೆ ನ್ಯೂಸ್

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಕೊಲೆ ಪ್ರಕರಣದ A-1 ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿ ಇದೀಗ ಕೋರ್ಟ್ ಆದೇಶಿಸಿದೆ.
ಆರೋಪಿ ನಟ ದರ್ಶನ್ ಜಾಮೀನು ಅರ್ಜಿಯನ್ನೂ ಅದೇ ದಿನಾಂಕಕ್ಕೆ ನ್ಯಾಯಾಲಯ ಈಗಷ್ಟೇ ಮುಂದೂಡಿತ್ತು.

ದರ್ಶನ್ ಬೆನ್ನಲ್ಲೇ ಪವಿತ್ರಾಗೌಡೂ ಇದೀಗ ಬೇಲ್ ಸಿಗದೇ ಆಘಾತವಾಗಿದೆ. ಇದಲ್ಲದೇ ರವಿಶಂಕರ್ ಹಾಗೂ ಲಕ್ಷ್ಮಣ್ ಎಂಬ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯೂ ಕೋರ್ಟ್ ಮುಂದೂಡಿ ಆದೇಶ ನೀಡಿದೆ.

57ನೇ ಸಿಸಿಹೆಚ್ ಕೋರ್ಟ್ನ ನ್ಯಾ.ಜೈಶಂಕರ್ ಅವರು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶವನ್ನು ಎಸ್ಪಿಪಿ ಪ್ರಸನ್ನ ಕುಮಾರ್ ಕೋರಿದ್ದ ಹಿನ್ನೆಲೆಯಲ್ಲಿ ಇಂದಿಗೆ ವಿಚಾರಣೆ ಮುಂದೂಡಲಾಗಿತ್ತು. ಈಗಾಗಲೇ ಕೊಲೆ ಕೇಸ್ನಲ್ಲಿ ಕೇವಲ ಮೂವರು ಆರೋಪಿಗಳಿಗೆ ಬೇಲ್ ಸಿಕ್ಕಿದೆ.














