Friday, March 13, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಹಿಂದೂ ಸಮಾಜವನ್ನು ಕೆಣಕುವ ಮುನ್ನ ಇತಿಹಾಸವನ್ನು ತಿರುಗಿನೋಡಿ : ದಯಾನಂದ ಶೆಟ್ಟಿ ಉಜಿರೆಮಾರು- ಕಹಳೆ ನ್ಯೂಸ್

ಹಿಂದೂ ನಾಯಕ ಶರಣ್ ಪಂಪುವೆಲ್ ರವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಸವಾಲು ಹಾಕಿದ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್ ಅವರ ನಡೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿದ ಅವರು ಹಿಂದೂ ಸಮಾಜ ಮೌನವಾಗಿದೆ , ಎದ್ದು ನಿಲ್ಲಲ್ಲ ಎಂದು ಭಾವಿಸಿ ಈ ರೀತಿ ನಾಲಿಗೆ ಹರಿಬಿಟ್ಟು ಹಿಂದೂ ಸಮಾಜಕ್ಕೆ ಸವಾಲು ಹಾಕಿದ್ರೆ ಅದೂ ನಿಮ್ಮ ಮೂರ್ಖತನ. ಹಿಂದೂ ಸಮಾಜ ತಾಳ್ಮೆ ಕಳೆದುಕೊಂಡು ಕ್ರಿಯೆಗೆ ಪ್ರತಿಕ್ರಿಯೆ ನೀಡಲು ಹೊರಟರೆ ಏನಾಗಬಹುದೂ ಎಂದೂ ಕರಾವಳಿಯ ಇತಿಹಾಸವನ್ನು ತಿರುಗಿ ನೋಡಿಕೊಂಡರೆ ಒಳಿತು ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮತೀಯವಾದಿ ದೇಶದ್ರೋಹಿ ಸಂಘಟನೆಗಳ ಬೆಂಬಲದಿಂದ ಜನಪ್ರತಿನಿಧಿಯಾಗಿ ಇದ್ದುಕೊಂಡು ದೇಶದ್ರೋಹಿ ಸಂಘಟನೆಗಳ ಋಣ ಸಂದಾಯ ಮಾಡಲು ಈ ರೀತಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮಟ್ಟಿಗೆ ಹೇಳಿಕೆಗಳನ್ನು ನೀಡುವುದು ಅಕ್ಷಮ್ಯ ಅಪರಾಧ. ಪೋಲಿಸ್ ಇಲಾಖೆ ಇಂಥವರ ಹಾಗೂ ಇವರನ್ನು ಪ್ರೇರೆಪಿಸುವವರ ವಿರುದ್ಧ ಅಗತ್ಯ ಕಾನೂನು ರೀತಿಯ ಕ್ರಮವನ್ನು ಜರುಗಿಸಿ ಇಂತವರಿಂದ ಸಮಾಜವನ್ನು ರಕ್ಷಿಸಬೇಕು. ಎಂದು ದಯಾನಂದ ಶೆಟ್ಟಿ ಉಜಿರೆಮಾರು ತಿಳಿಸಿದರು.

ಜಾಹೀರಾತು
ಜಾಹೀರಾತು