Thursday, March 12, 2026
ಕ್ರೈಮ್ದಕ್ಷಿಣ ಕನ್ನಡಬೆಂಗಳೂರುಸುದ್ದಿ

ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ‌‌‌‌‌‌ಗೆ ಹೈಕೋರ್ಟ್ ಎಚ್ಚರಿಕೆ…!! ನ್ಯಾಯಾಲಯ‌ ಅದೇಶ ಮೀರಿದ್ರೆ ತಿಮರೋಡಿ ಪಕ್ಕ ಅಂದರ್..!! – ಕಹಳೆ ನ್ಯೂಸ್

ಬೆಂಗಳೂರು : ನ್ಯಾಯಾಂಗ ‌ನಿಂದನೆ ಹಾಗೂ ನ್ಯಾಯಾಧೀಶರನ್ನು ಸಾರ್ವಜನಿಕವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಷರತ್ತಾಗಿ ಕ್ಷಮೆಯಾಚಿಸಿ ಮಹೇಶ್ ಶೆಟ್ಟಿ ತಿಮರೋ‌ಡಿ‌ ಸಲ್ಲಿದ ಪ್ರಮಾಣ ಪತ್ರವನ್ನು ಪುರಸ್ಕರಿಸಿದ ನ್ಯಾಯಾಲಯವು ನ್ಯಾಯಾಧೀಶರನ್ನು ನಿಂದಿಸಿದ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಆದರೆ ಇದೀಗ ಇನ್ನುಳಿದಂತೆ ಭೂ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಅರ್ಜಿ ಮುಕ್ತಾಯಗೊಂಡಿರುವುದಿಲ್ಲವಾಗಿದ್ದು, ಆ ಪ್ರಕರಣದಲ್ಲಿ‌ ಇದೇ ಆಗಸ್ಟ್ 29 ನ್ಯಾಯಾಲಯದ ಮುಂದೆ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಕುದ್ದು ಹಾಜರಾತಿ ಗೆ ಆದೇಶ ಮಾಡಿತ್ತು. ಅದರಂತೆ ಇಂದು ನ್ಯಾಯಾಲಯದ ಮುಂದೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಆತನ ಪತ್ನಿ ಹಾಜರಾಗಿದ್ದಾರೆ.

ತಿಮರೋಡಿ‌‌‌‌‌‌ ಪದೇ ಪದೇ ನ್ಯಾಯಾಲಯದ ಆದೇಶಗಳನ್ನು ಮೀರಿ ವರ್ತಿಸುದರ ಬಗ್ಗೆ ಗರಂ ಆದ ನ್ಯಾಯಾಧೀಶರು ಇನ್ನೊಂದು ಬಾರಿ ಹೀಗೆ ಮಾಡಿದ್ರೆ, ಬಂಧಿಸಿ ಕಾನೂನು ಕ್ರಮ ಜರಗಿಸುವ ಮೌಖಿಕ‌ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ನ್ಯಾಯಾಂಗ ನಿಂದನೆ ಮಾಡಿ ನ್ಯಾಯಲಯದಲ್ಲಿ ಬಂದು ಸುಳ್ಳು ಹೇಳಿದ್ರೆ ನಾರ್ಕೋಟಿಕ್ಸ್ ಪರೀಕ್ಷೆಗೆ ಆದೇಶ ಮಾಡ್ತೇನೆ ಎಂದು ಎಚ್ಚರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು