Friday, March 13, 2026
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಸಿ ಎ ಫೌಂಡೇಶನ್‌ ಪರೀಕ್ಷೆ ಫಲಿತಾಂಶ ಪ್ರಕಟ: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ – ಕಹಳೆ ನ್ಯೂಸ್

ಇನ್ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ(ಐಸಿಎಐ) ನಡೆಸುವ ಸಿಎ ಫೌಂಡೇಶನ್‌ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಮಹೇಂದ್ರ ಗೋಪಾಲ್‌ ವಿಭಾಸ್‌.ಕೆ ಹಾಗೂ ನಿಧಿರಾಜ್‌ ಎಂ.ಕೆ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುತ್ತಾರೆ. ಮಹೇಂದ್ರ ಗೋಪಾಲ್‌ ವಿಭಾಸ್‌ ಇವರು ಪುತ್ತೂರಿನ ಪರ್ಲಡ್ಕದ ಪ್ರಸಾದ್‌ ಕೆ.ವಿ.ಎಲ್‌.ಎನ್ ಹಾಗೂ ಅನುಪಮ ಎಸ್‌ ಇವರ ಪುತ್ರ. ನಿಧಿರಾಜ್‌ ಎಂ.ಕೆ ಇವರು ಹಾಸನದ ಗುಲಾಬಿ.ಕೆ ಇವರ ಪುತ್ರರಾಗಿರುತ್ತಾರೆ.

ಇವರನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
1. ಮಹೇಂದ್ರ ಗೋಪಾಲ್‌ ವಿಭಾಸ್‌
2. ನಿಧಿರಾಜ್‌ ಎಂ.ಕೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು