
ಬಂಟ್ವಾಳ: ಅಜಿಲಮೊಗರು- ಸರಪಾಡಿ ರಸ್ತೆಯ ಮಣಿನಾಲ್ಕೂರು ಗ್ರಾಮದ ಕೊಟ್ಟುಂಜದಲ್ಲಿ ಸರಪಾಡಿ- ಬಿ.ಸಿ.ರೋಡು ಮಧ್ಯೆ ಸಂಚರಿಸುವ ಖಾಸಗಿ ಬಸ್ಸು ಪಲ್ಟಿಯಾದ ಘಟನೆ ಸೋಮವಾರ ನಡೆದಿದೆ.
ಬಸ್ಸು ಸಂಪೂರ್ಣವಾಗಿ ಗದ್ದೆಗೆ ಪಲ್ಟಿಯಾಗಿದ್ದು, ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ವಿಪರೀತ ಮಳೆಯಿಂದಾಗಿ ಗದ್ದೆಯಲ್ಲಿ ನೀರು ತುಂಬಿದ್ದು, ಹೀಗಾಗಿ ಕೆಲವು ಪ್ರಯಾಣಿಕರು ಕೆಸರಿನಿಂದ ತುಂಬಿದ್ದರು ಎನ್ನಲಾಗಿದೆ.














