Thursday, March 12, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ : ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ವಿಜಯೋತ್ಸವ – ಕಹಳೆ ನ್ಯೂಸ್

ಬಂಟ್ವಾಳ: ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿ ಸಂಭ್ರಮಪಟ್ಟರು.

ನರೇಂದ್ರಮೋದಿಯವರು ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ,ಜಯಘೋಷ ಹಾಕಿದರಲ್ಲದೆ ಸಿಹಿ ಹಂಚಿದರಲ್ಲದೆ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪಕ್ಷದ ಕಚೇರಿಯ ಹೊರಭಾಗದಲ್ಲಿ ಎಲ್. ಇ.ಡಿ ಪರದೆಯ ಮೂಲಕ ಪ್ರಮಾಣವಚನದ ನೇರಪ್ರಸಾರವನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಬಂಟ್ವಾಳ ಕ್ಷೇತ್ರಾಧ್ಯಕ್ಷ ಚೆನ್ನಪ್ಪಕೋಟ್ಯಾನ್, ಪುರಸಭಾ ಸದಸ್ಯರಾದ ಗೋವಿಂದ ಪ್ರಭು,ಹರಿಪ್ರಸಾದ್ ಕುಲಾಲ್, ಪುರುಷೋತ್ತಮ ಶೆಟ್ಟಿ,ಗಣೇಶ್ ರೈ ಮಾಣಿ, ಭಾರತಿ ಚೌಟ, ಸುದರ್ಶನ್ ಬಜ, ದಿನೇಶ್ ಅಮ್ಟೂರು, ಜನಾರ್ದನ ಬೊಂಡಾಲ, ವಿಜಯಕುಮಾರ್ ಅಮ್ಟಾಡಿ, ಮಚ್ಚೇಂದ್ರ ಸಾಲಿಯಾನ್, ಪ್ರಕಾಶ್ ಅಂಚನ್, ಪ್ರಣಾಮ್ ಅಜ್ಜಿಬೆಟ್ಟು, ಸಂತೋಷ್ ರಾಯಿಬೆಟ್ಟು, ರೂಪೇಶ್ ಮೆಲ್ಕಾರ್, ಸುರೇಶ್ ಕೋಟ್ಯಾನ್,
ಸೀತರಾಮ ಸಜೀಪ, ರಮಾನಾಥ ಪೈ, ಸುರೇಶ್ ಕುಲಾಲ್ ಮೊದಲಾದವರಿದ್ದರು

ಜಾಹೀರಾತು
ಜಾಹೀರಾತು