Friday, March 13, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಡಿವೈಡರ್‌ ಗೆ ಢಿಕ್ಕಿ ಹೊಡೆದ ಪಿಕ್‌ ಅಪ್‌ : ಚಾಲಕ ಮೃತ್ಯು – ಕಹಳೆ ನ್ಯೂಸ್

ಬಂಟ್ವಾಳ: ದುರಸ್ತಿಗೆ ನೀಡಿದ್ದ ಪಿಕ್‌ ಅಪ್‌ ನ್ನು ಚಲಾಯಿಸಿಕೊಂಡುವ ಬರುತ್ತಿರುವ ವೇಳೆ ಪಿಕ್ ಅಪ್ ಡಿವೈಡರ್‌ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಅದರ ಚಾಲಕ ಕಕ್ಯಪದವಿನ ಯುವಕ ಮೃತಪಟ್ಟ ಘಟನೆ ಮೇ 11ರ ತಡರಾತ್ರಿ 2 ಗಂಟೆಗೆ ಸಕಲೇಶಪುರ ಸಮೀಪದ ಕುಂಬಾರಕಟ್ಟೆಯಲ್ಲಿ ನಡೆದಿದೆ.

ಕಕ್ಯಪದವು ಅಂತರ ನಿವಾಸಿ ಹನೀಫ್(38) ಮೃತಪಟ್ಟವರು. ಅವರ ಸಂಬಂಧಿಯೊಬ್ಬರ ಪಿಕ್ ಅಪ್ ವಾಹನವನ್ನು ಹಾಸನದಲ್ಲಿ ದುರಸ್ತಿ ಮಾಡಿಸಿಕೊಂಡು ರಾತ್ರಿ ಅದರ ಮಾಲಕರ ಜತೆಗೆ ಚಲಾಯಿಸಿಕೊಂಡು ಬರುತ್ತಿರುವ ವೇಳೆ ಘಟನೆ ನಡೆದಿದೆ. ಘಟನೆಯಲ್ಲಿ ಅದರ ಮಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹನೀಫ್ ಅವರ ಜೀಪು ಚಾಲಕರಾಗಿದ್ದು, ಕಕ್ಯಪದವು-ಬಿ.ಸಿ.ರೋಡು ಮಧ್ಯೆ ಜೀಪಿನ ಮೂಲಕ ಪ್ರಯಾಣಿಕರನ್ನು ಸಾಗಿಸುತ್ತಿದ್ದರು. ಹೀಗಾಗಿ ಸ್ಥಳೀಯರ ವಿಶೇಷ ಅಭಿಮಾನವನ್ನು ಗಳಿಸಿಕೊಂಡಿದ್ದರು. ಜತೆಗೆ ಕಂಬಳಾಭಿಮಾನಿಯಾಗಿ ಸ್ವತಃ ಕಂಬಳದ ಕೋಣಗಳನ್ನು ಸಾಕುತ್ತಿದ್ದರು.

ಜಾಹೀರಾತು
ಜಾಹೀರಾತು