Tuesday, May 7, 2024
ಸುದ್ದಿ

ಹಿಂದೂಗಳಲ್ಲಿ ಶೌರ್ಯ ಹೆಚ್ಚಿಸಲು ಹಾಗೂ ರಾಮರಾಜ್ಯದ ಕಾರ್ಯಕ್ಕಾಗಿ ಬಲ ಪಡೆಯಲು ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ಸಾಮೂಹಿಕ ಗದಾಪೂಜೆ ! – ಕಹಳೆ ನ್ಯೂಸ್

ಶ್ರೀ ಹನುಮನ ಜಯಂತಿಯ ಸಂದರ್ಭದಲ್ಲಿ ಹಿಂದೂಗಳಲ್ಲಿ ವೀರತೆಯನ್ನು ಜಾಗೃತಗೊಳಿಸಲು ಹಾಗೂ ರಾಮರಾಜ್ಯದ ಕಾರ್ಯಕ್ಕಾಗಿ ಬಲಪ್ರಾಪ್ತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮವಿಚಾರಿ ಹಿಂದುತ್ವವಾದಿ ಸಂಘಟನೆಗಳಿಂದ ದೇಶದಾದ್ಯಂತ -ಅನೇಕ ಕಡೆಗಳಲ್ಲಿ ಸಾಮೂಹಿಕ `ಗದಾಪೂಜೆ’ಯನ್ನು ಮಾಡಲಾಗಿದೆ.

ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮವನ್ನು ಶಂಖನಾದದೊಂದಿಗೆ ಆರಂಭಿಸಲಾಯಿತು. ಇದರ ನಂತರ ಸಾಮೂಹಿಕ ಪ್ರಾರ್ಥನೆ, `ಗದಾಪೂಜೆ’ಯ ಅನುಷ್ಠಾನ, ಶ್ರೀ ಮಾರುತಿಯ ಆರತಿ, ಶ್ರೀ ಹನುಮಾನ ಚಾಲೀಸಾ ಪಠಣದೊಂದಿಗೆ `ಶ್ರೀ ಹನುಮತೇ ನಮಃ’ ಈ ಸಾಮೂಹಿಕ ನಾಮಜಪ ಮಾಡಲಾಯಿತು. `ಧರ್ಮಸಂಸ್ಥಾಪನೆಗಾಗಿ ಹನುಮಂತನ ಗುಣಗಳನ್ನು ಹೇಗೆ ಮೈಗೂಡಿಸಿಕೊಳ್ಳಬೇಕು ?’ ಎಂಬುದರ ಬಗ್ಗೆ ಮಾರ್ಗದರ್ಶನ ಮಾಡಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ `ರಾಮರಾಜ್ಯದ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ’ ಮಾಡಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಶ್ರೀ. ವಿಜಯ ಕುಮಾರ್ ರವರು ಈ ಗದಾಪೂಜೆಯ ಹಿಂದಿನ ಉದ್ದೇಶ ತಿಳಿಸುತ್ತಾ ಯುಗಯುಗಗಳಿಂದ ಮಾರುತಿಯ ಗಧೆಯನ್ನು ಅವರ ಶೌರ್ಯದ ಪ್ರತೀಕವಾಗಿ ಗುರುತಿಸಲಾಗುತ್ತದೆ. ಅವರು ಇದೆ ದೈವೀ ಗಧೆಯಿಂದ ಶಕ್ತಿಶಾಲಿ ರಾಕ್ಷಸರನ್ನು ಸಂಹರಿಸಿದ್ದರು ಹಾಗೂ ಶ್ರೀ ರಾಮಚಂದ್ರರ ರಾಮರಾಜ್ಯದಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ್ದರು.

ಜಾಹೀರಾತು
ಜಾಹೀರಾತು

ಮಹಾಭಾರತದ ಯುದ್ಧದಲ್ಲಿಯೂ ಮಾರುತಿಯು ಅರ್ಜುನನ ರಥದ ಮೇಲೆ ಕುಳಿತು ಪಾಂಡವರಿಗೆ ಧರ್ಮಯುದ್ಧವನ್ನು ಗೆಲ್ಲಲು ದೈವೀ ಸಹಾಯ ಮಾಡಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿಯೂ ಸಮರ್ಥ ರಾಮದಾಸ ಸ್ವಾಮಿಗಳು ೧೧ ಮಾರುತಿಯ ಸ್ಥಾಪನೆ ಮಾಡಿ ಮಾವಳರಿಗೆ (ಶಿವಾಜಿ ಮಹಾರಾಜರ ಸೈನಿಕರಿಗೆ) ಬಲ ಪ್ರಾಪ್ತಿ ಮಾಡಿಕೊಟ್ಟಿದ್ದರು. ಈಗ 500 ವರ್ಷಗಳ ನಂತರ ಪುನಃ ಇನ್ನೊಮ್ಮೆ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮರು ವಿರಾಜಮಾನರಾಗಿದ್ದಾರೆ. ಇಂತಹ ಸಮಯದಲ್ಲಿ ನಾವು ಪುನಃ ರಾಮರಾಜ್ಯವನ್ನು ಸ್ಥಾಪಿಸಲು ಮಾರುತಿಯಂತಹ ಭಕ್ತಿ ಹಾಗೂ ವೀರತೆಯು ಅತ್ಯಂತ ಅವಶ್ಯಕವಾಗಿದೆ. ಈ ಉದ್ದೇಶವನ್ನು ಗಮನದಲ್ಲಿಟ್ಟು ಶ್ರೀ ಹನುಮಾನ ಜಯಂತಿಯ ಮಂಗಳ ದಿನದಂದು ವಿವಿಧ ಕಡೆಗಳಲ್ಲಿ ಗದಾಪೂಜೆಯನ್ನು ಮಾಡಲಾಯಿತು
ಈ ಕಾರ್ಯಕ್ರಮಗಳಲ್ಲಿ ಸಾಧು ಸಂತರು, ವಿವಿಧ ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಉಪಸ್ಥಿತರಿದ್ದರು.