Recent Posts

Tuesday, March 10, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಹಲವೆಡೆ ಮತಯಾಚನೆ ನಡೆಸಿದ ಅಭ್ಯರ್ಥಿ ಬ್ರಿಜೇಶ್ ಚೌಟ – ಕಹಳೆ ನ್ಯೂಸ್

ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡ ವೇಳೆ ಕುಲಾಲ ಸಮುದಾಯ ಹಾಗೂ ವಿಶ್ವಕರ್ಮ ಸಮಾಜದ ಪ್ರಮುಖರ ಜೊತೆ ಸಂವಾದ ನಡೆಸಿದರು.

ಬಳಿಕ ಕಾರ್ಯಕರ್ತರ ಜೊತೆ ಮಾತನಾಡಿದ ಅವರು ರಾಷ್ಟ್ರೀಯತೆ ಮತ್ತು ಹಿಂದೂ ವಿಚಾರಧಾರೆಗಳಿಗೆ ಗೌರವ ತರುವುದರ ಜೊತೆಗೆ ಪ್ರಮಾಣಿಕವಾಗಿ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಅವರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದು, ಕಾರ್ಯಕರ್ತರ ಗೆಲುವು ಪಕ್ಷದ ಗೆಲುವಾಗಲಿದೆ. ಪಕ್ಷ ಸಂಘಟಿತವಾಗುವುದರ ಜೊತೆಗೆ ಅಭ್ಯರ್ಥಿ ಗೆಲುವು ಸಾಧಿಸಿದರೆ ಕಾರ್ಯಕರ್ತ ಬಲಿಷ್ಠವಾಗುತ್ತಾನೆ.ಹಾಗಾಗಿ ಪ್ರತಿಯೊಂದು ಬೂತ್ ಗಳಲ್ಲಿ ಕಾರ್ಯಕರ್ತರು ಸಕ್ರೀಯವಾಗಿ ತೊಡಗಿಸಿಕೊಂಡು ಬೂತ್ ನಲ್ಲಿ ಗೆಲುವು ಸಾಧಿಸಲು ಪ್ರಯತ್ನ ಮಾಡಿ ಎಂದು ಮನವಿ ಮಾಡಿಕೊಂಡರು.

ಚುನಾವಣೆಗೆ ಇನ್ನು ನಾಲ್ಕು ದಿನಗಳು ಬಾಕಿಯಿದ್ದು, ಪ್ರತಿಯೊಂದು ನಿಮಿಷಗಳು ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಕಾರ್ಯಕರ್ತರು ವಿರಮಿಸದೆ ನಿರಂತರವಾಗಿ ಮನೆ,ಮನಗಳನ್ನು ಪರಿವರ್ತನೆ ಮಾಡಿ ಬಿಜೆಪಿ ಗೆಲುವಿಗೆ ಕಾರಣರಾಗಿ ಎಂದು ತಿಳಿಸಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಎಲ್ಲಾ ಸಮಾಜದ ಮೇಲೆ ಪರಿಣಾಮ ಬೀರುವ ಭವಿಷ್ಯದ ಚುನಾವಣೆ ಇದಾಗಿದ್ದು, ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಕಿಕೊಂಡಿರುವ ಯೋಜನೆಗಳಿಗೆ ಈ ವರ್ಷದ ಲೋಕಸಭಾ ಚುನಾವಣೆ ಶಕ್ತಿ ನೀಡುವಂತಹ ಚುನಾವಣೆಯಾಗಿದೆ ಎಂದು ತಿಳಿಸಿದರು. ಚುನಾವಣೆಗೆ ಉಳಿದಿರುವ ಕೆಲವೇ ದಿನಗಳನ್ನು ಅತ್ಯಂತ ಜವಾಬ್ದಾರಿಯಿಂದ ಸದ್ಬಳಕೆ ಮಾಡಿಕೊಂಡು, ಬಿಜೆಪಿ ಪಕ್ಷವನ್ನು ಬಲಿಷ್ಟಗೊಳಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.

ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಗಳಾದ ಜಗದೀಶ್ ಶೇಣವ, ಪೂಜಾ ಪೈ, ,ಗ್ರಾ.ಪಂ.ಉಪಾಧ್ಯಕ್ಷ ಚಂದ್ರಹಾಸ ಪೂಜಾರಿ,ಸದಸ್ಯರಾದ ಮಮತಾ ಪೂಜಾರಿ, ಉಮೇಶ್ ಶೆಟ್ಟಿ,ಗೀತಾ, ರಘವೀರ ಆಚಾರ್ಯ, ಪ್ರಕಾಶ್ ಆಳ್ವ,
ಪ್ರಮುಖರಾದ ದೇವಪ್ಪ ಪೂಜಾರಿ, ನಂದರಾಮ ರೈ, ರಮೇಶ್ ಭಟ್ಟಾಜೆ,, ಮೋಹನ್ ದಾಸ್ ಕೊಟ್ಟರಿ, ಸಂದೇಶ್ ಶೆಟ್ಟಿ ಅರೆಬೆಟ್ಟು, ಹರಿಪ್ರಸಾದ್ ಕುಲಾಲ್ , ರಾಧಾಕೃಷ್ಣ ಕುಲಾಲ್,ಮಚ್ಚೇಂದ್ರ ಸಾಲಿಯಾನ್, ಮನೋಜ್ ಆಚಾರ್ಯ, ಡೊಂಬಯ್ಯ ಅರಳ, ಜನಾರ್ದನ ಬೊಂಡಾಲ, ಸುರೇಶ್ ಕೊಟ್ಯಾನ್, ಚಂದ್ರಹಾಸ ಪೂಜಾರಿ,ತಿರುಲೇಶ್, ತಿರುಮಲೇಶ್,ತಿಮ್ಮಪ್ಪ ವಿಶ್ವಂಭರ, ಮೋಹನ್ ಮೇಲಾಂಟ, ತಿಮ್ಮಪ್ಪ ರೈ, ಸವಿತಾ ಶೆಟ್ಟಿ, ನಿರಂಜನ ಸೇಮಿತ, ಬಾಲಕೃಷ್ಣ ಶೆಟ್ಟಿ,ಜಯಂತ ತಂಬಡಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.