Friday, May 3, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಸರಣಿಯ ದ್ವಿತೀಯ ಉಪನ್ಯಾಸ

ಪುತ್ತೂರು :  ಸಂತ ಫಿಲೋಮಿನಾ ಕಾಲೇಜಿನ ಇನ್ಸ್ಟಿಟ್ಯೂಶನಲ್‌ ಇನ್ನೊವೇಶನ್‌ ಕೌನ್ಸಿಲ್‌ (ಐಐಸಿ) ಹಾಗೂ ಗಣಕ ವಿಜ್ಞಾನ ಹಾಗೂಎಂಕಾಂ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಭವನದಲ್ಲಿ “ಇಂಪ್ಯಾಕ್ಟ್‌ ಲೆಕ್ಚರ್‌” ಉಪನ್ಯಾಸಕಾರ್ಯಕ್ರಮವನ್ನು ಆಯೋಜಿಸಲಾಯಿತು. ಯುವಜನರಲ್ಲಿ ಸ್ಟಾರ್ಟಪ್‌, ನಾವೀನ್ಯತೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ
ಸಲುವಾಗಿ ಶಿಕ್ಷಣ ಸಚಿವಾಲಯದ ಇನ್ನೊವೇಶನ್‌ ಸೆಲ್‌ ಹಾಗೂ ಎಐಸಿಟಿಇ ಪ್ರಾಯೋಜಿತ ಉಪನ್ಯಾಸ ಸರಣಿಯ ದ್ವಿತೀಯ ಕಾರ್ಯಕ್ರಮದಲ್ಲಿಮಂಗಳೂರಿನ ಗ್ಲೋಟಚ್‌ ಟೆಕ್ನಾಲಜೀಸ್‌ ಸಂಸ್ಥೆಯ ಅಪ್ಲಿಕೇಶನ್‌ ಡೆವಲಪ್‌ಮೆಂಟ್‌ ವಿಭಾಗದ ನಿರ್ದೇಶಕರಾದ ದೀಪಕ್‌ ಕೃಷ್ಣಮೂರ್ತಿಇವರು ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ್ದರು. ಉಪನ್ಯಾಸದ ಪ್ರಾರಂಭದಲ್ಲಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು ವಹಿಸಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅವರು
“ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು. ಕ್ರಿಯಾಶಿಲತೆ ಮತ್ತು ನಾವೀನ್ಯತೆಗಳು ಉದ್ಯಮದ ಯಶಸ್ಸಿಗೆ ಕಾರಣೀಭೂತವಾದ ಅಂಶಗಳಾಗಿವೆ.ಹೊಸ ಪರಿಕಲ್ಪನೆಗಳು ಹಲವಾರು ಸಂಸ್ಥೆಗಳನ್ನು ಯಶಸ್ಸಿನ ಉತ್ತುಂಗಕ್ಕೇರಿಸಿವೆ. ವಿದ್ಯಾರ್ಥಿಗಳು ಕ್ರಿಯಾತ್ಮಕ ಚಿಂತನೆ ಹಾಗೂ ಆವಿಷ್ಕಾರಮನೋಭವಗಳನ್ನು ಹೊಂದಿರಬೇಕು ” ಎಂದು ಹೇಳಿದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ದೀಪಕ್‌ ಕೃಷ್ಣಮೂರ್ತಿ ಇವರು "ಡಿಸ್ರಪ್ಟಿವ್‌ ಇನ್ನೊವೇಶನ್‌: ಟ್ರಾನ್ಸ್ಫಾರ್ಮಿಂಗ್‌ ಇಂಡಸ್ಟ್ರೀಸ್‌ ಥ್ರೂಕ್ರಿಯೇಟಿವ್‌ ಐಡಿಯೇಶನ್‌” ಎಂಬ ವಿಷಯದ ಕುರಿತು ಉಪನ್ಯಾಸ ನೀಡುವ ಸಂದರ್ಭದಲ್ಲಿ “90 ರ ದಶಕದದಲ್ಲಿ ಕ್ಲೇಟನ್ ಕ್ರಿಸ್ಟೇನ್‌ಸೆನ್‌ನಿಮೊದಲ ಬಾರಿಗೆ ಪರಿಚಯಿಸಲ್ಪಟ್ಟ ಡಿಸ್ರಪ್ಟಿವ್‌ ಇನ್ನೊವೇಶನ್‌ ಎಂಬ ಪದವು ನಂತರ ಸೈದ್ಧಾಂತಿಕ ಪರಿಕಲ್ಪನೆಯಿಂದ ಕಂಪನಿಗಳು ಮತ್ತು ದೇಶಗಳಿಗೆಸಮಾನವಾಗಿ ಮಾರ್ಗದರ್ಶಿ ತತ್ವವಾಗಿ ರೂಪಾಂತರಗೊಂಡಿದೆ. ಡಿಸ್ರಪ್ಟಿವ್‌ ಇನ್ನೊವೇಶನ್‌ ಒಂದು ವಲಯ ಅಥವಾ ಉದ್ಯಮದ ಕಾರ್ಯಗಳನ್ನು
ಗಮನಾರ್ಹವಾಗಿ ಬದಲಾಯಿಸುವ ಅಂಶವಾಗಿದೆ. ಡಿಸ್ರಪ್ಟಿವ್‌ ಇನ್ನೊವೇಶನ್‌ ಅನ್ನು ಬಳಸಿಕೊಳ್ಳಲು ನೋಡುತ್ತಿರುವ ಕೈಗಾರಿಕೆಗಳಿಗೆ ಪ್ರಯೋಗದಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು, ಗ್ರಾಹಕ-ಕೇಂದ್ರಿತ ವ್ಯವಹಾರ, ಮತ್ತು ಸಹಯೋಗ ಎಂಬ ಮೂರು ಅಂಶಗಳು ನಿರ್ಣಾಯಕವಾಗಿವೆ" ಎಂದು ಹೇಳಿತಮ್ಮ ಆಲೋಚನೆಗಳನ್ನು ಕಾಲಕ್ಕೆ ಹಾಗೂ ಜನರ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಯಿಸಿ ಯಶಸ್ವಿಯಾಗಿ ರೂಪಾಂತರಗೊಂಡ ಹಲವಾರು ಸಂಸ್ಥೆಗಳಉದಾಹರಣೆ ನೀಡಿ ಉದ್ಯಮ ಕ್ಷೇತ್ರದಲ್ಲಿ ಡಿಸ್ರಪ್ಟಿವ್‌ ಇನ್ನೊವೇಶನ್‌ ನ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.

ಜಾಹೀರಾತು
ಜಾಹೀರಾತು

ಎಂ ಕಾಂ ವಿಭಾಗದ ವಿದ್ಯಾರ್ಥಿನಿಯರಾದ ಶ್ರೀರಾಗಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಗಣಕ ವಿಜ್ಞಾನ ವಿಭಾಗದ ಡೀನ್‌ ವಿನಯಚಂದ್ರಸ್ವಾಗತಿಸಿದರು. ಕಾಲೇಜಿನ ಐಐಸಿ ಘಟಕದ ನಿರ್ದೇಶಕರಾದ ಗೀತಾ ಪೂರ್ಣಿಮಾ ವಂದಿಸಿದರು. ಎಂಕಾಂ ವಿಭಾಗದ ಉಪನ್ಯಾಸಕಿ ಸ್ಬಾತಿ ಶೆಟ್ಟಿಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಐಐಸಿ ಘಟಕದ ಸಂಯೋಜಕರಾದ ಅಭಿಷೇಕ್‌ ಸುವರ್ಣ ಮತ್ತು ಎಂ ಕಾಂ ಕಾರ್ಯಕ್ರಮದ ಸಂಯೋಜಕರಾದಹರ್ಷಿತ್‌ ಆರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೃತೀಯ ಬಿಸಿಎಯ ಅಭಿಷೇಕ್‌ ಕಾಮತ್‌ ಮತ್ತು ಅನುಶ್‌ ಸಹಕಾರ ನೀಡಿದರು. ಕಾಲೇಜಿನ ಬಿಸಿಎ
ಹಾಗೂ ಎಂ ಕಾಂ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.