

ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ – ಪಿಕಪ್ ಢಿಕ್ಕಿ ಹೊಡೆದ ಪರಿಣಾಮ . ದ್ವಿಚಕ್ರ ವಾಹನ ಸವಾರ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ನಗರದ ವಾಣಿ ಕಾಲೇಜು ಸಮೀಪ ನಡೆದಿದೆ ಮೃತಪಟ್ಟವರನ್ನು ಬೆಳ್ತಂಗಡಿ ಲಾಯಿಲ ಗ್ರಾಮದ ರಾಘವೇಂದ್ರ ನಗರ ನಿವಾಸಿ ದಿ. ಜಯರಾಮ ಎಂಬವರ ಪುತ್ರ ಪುರುಷೋತ್ತಮ (19) ಎಂದು ಗುರುತಿಸಲಾಗಿದೆ ರಾಘವೇಂದ್ರ ನಗರ ನಿವಾಸಿ ತೌಸೀಫ್ ಎಂಬವರ ಪುತ್ರ ತೌಫೀಕ್ (18) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.














