Friday, March 13, 2026
ಸುದ್ದಿ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂಧನಾ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ ೧೯ರಂದು ವಿವಿಧ ಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಸಾಧನೆೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂಧನಾಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪಶುವೈದ್ಯರು ಹಾಗೂ ಪುತ್ತೂರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಡಾ| ಕೃಷ್ಣಭಟ್‌ಕೊಂಕೋಡಿಮಾತನಾಡುತ್ತಾ, “ಶಿಕ್ಷಣವು ನಾಳಿನ ಭವಿಷ್ಯರೂಪಿಸಲು ಸಹಕಾರಿಯಾಗಿದೆ.ಸಂವೇದನೆ ಮತ್ತುಆತ್ಮವಿಶ್ವಾಸ ಶಿಕ್ಷಣದ ಜೀವಾಳ.ಇವÉರಡನ್ನೂ ಈ ಶಾಲೆಯಲ್ಲಿಕಂಡಿದ್ದೇನೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾಗಿ ರಾಷ್ಟçಮಟ್ಟದಲ್ಲಿಯೂ ಸಾಧನೆ ಮಾಡಿರುವುದುಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ಸಾಧಕನಾಗುವವನು ಭೋಗದಕಡೆಗೆ ಗಮನ ಕೊಡದೆಗುರಿಯತ್ತ ಗಮನ ಹರಿಸಿ, ಎಷ್ಟೇ ಕಷ್ಟ ದುಃಖಗಳ ಮಧ್ಯೆಯು ಸಾಧಿಸುವಛಲವನ್ನು ಬಿಡದೆ ಮುನ್ನುಗ್ಗಿ.ಇದೇರೀತಿಯಇನ್ನೂ ಹೆಚ್ಚಿನ ಸಾಧನೆಗಳು ಮಾಡಿ ವಿದ್ಯಾಸಂಸ್ಥೆಗೆ, ಗುರುಹಿರಿಯರಿಗೆ, ಪೋಷಕರಿಗೂಕೀರ್ತಿತರುವಂತವರಾಗಿ” ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ೨೦೨೩-೨೪ರ ಶೈಕ್ಷಣಿಕ ವರ್ಷದಲ್ಲಿಕ್ರೀಡೆ, ಗಣಿತ, ವಿಜ್ಞಾನ ಹಾಗೂ ಕಲಾಕ್ಷೇತ್ರದಲ್ಲಿತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿದಪ್ರತಿಭಾವಂತವಿದ್ಯಾರ್ಥಿಗಳಿಗೆ ಮಾತೃಸ್ವರೂಪಿಣಿಡಾ| ಕಮಲಾ ಪ್ರಭಾಕರ್ ಭಟ್, ಆಡಳಿತ ಮಂಡಳಿ ಸದಸ್ಯರಾದ ಮಲ್ಲಿಕಾ ಶೆಟ್ಟಿ, ಸುಧಾಕಶೆಕೋಡಿ, ಲಕ್ಷಿö್ಮರಘುರಾಜ್ ಆರತಿಬೆಳಗಿ, ಅಕ್ಷತೆ ಹಾಕಿ, ಸಿಹಿನೀಡಿ ಆರ್ಶೀವದಿಸಿದರು.ಇದೇ ವೇಳೆ ರಾಜ್ಯಮಟ್ಟದಕಬಡ್ಡಿಪಂದ್ಯಾಟದಲ್ಲಿ ವಿಜೇತರಾಗಿ ಶಾಲೆಯಕೀರ್ತಿಗೆಕಾರಣರಾದ ಕ್ರೀಡಾಪಟುಗಳಿಗೆ ತರಬೇತು ನೀಡಿದ ಶೋನಿತ್‌ರಾಜ್‌ಅವರನ್ನು ಸನ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಂತರಎಲ್ಲಾ ಸಾಧಕರಿಗೂ ಪ್ರಶಸ್ತಿ – ಪುರಸ್ಕಾರ ನೀಡಿಗೌರವಿಸಲಾಯಿತು.ಅಧ್ಯಾಪಕ ಬಾಲಕೃಷ್ಣ ಬಹುಮಾನ ಪಟ್ಟಿ ವಾಚಿಸಿದರು ಕಾರ್ಯಕ್ರಮದಲ್ಲಿ ೬ನೇ ತರಗತಿಯಧಾತ್ರಿಯಿಂದ ಪ್ರೇರಣಾಗೀತೆ ನಡೆಯಿತು. ತಬಲದಲ್ಲಿ ೫ನೇ ತರಗತಿಯಅಪ್ರಮೇಯ ಸಹಕರಿಸಿದನು.

ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದಡಾ| ಪ್ರಭಾಕರ್ ಭಟ್‌ಕಲ್ಲಡ್ಕ, ಕೋಶಾಧಿಕಾರಿಅಚ್ಯುತ್ ನಾಯಕ್, ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ಆಡಳಿತ ಸಮಿತಿಯ ಸದಸ್ಯ ಕೆದಿಲ ಸುಬ್ರಹ್ಮಣ್ಯ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದರಮೇಶ್‌ಎನ್, ಮಾತೃಸ್ವರೂಪಿಣಿಡಾ| ಕಮಲಾ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರಾದಮಲ್ಲಿಕಾ ಶೆಟ್ಟಿ, ಸುಧಾಕಶೆಕೋಡಿ, ಲಕ್ಷಿö್ಮÃರಘುರಾಜ್ ಮಂಗಳೂರು ಹಾಗೂ ಮುಖ್ಯೋಪಾಧ್ಯಾಯರವಿರಾಜ್‌ಕಣಂತೂರು ಉಪಸ್ಥಿತರಿದ್ದರು.