
ವಿಟ್ಲ: ಕಲ್ಲಿನ ಕೋರೆಯಲ್ಲಿ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಟ್ಲ ಸಮೀಪದ ಕುದ್ದುಪದವು ಎಂಬಲ್ಲಿ ನಡೆದಿದೆ.
ಉಕ್ಕುಡ ದರ್ಬೆ ನಿವಾಸಿ ಕಾರ್ತಿಕ್(24 ವ.) ಮೃತ ದುರ್ದೈವಿ. ಕಾರ್ತಿಕ್ ಕುದ್ದುಪದವು ಬಳಿ ಇರುವ ಕಲ್ಲಿನ ಕೋರೆಯಲ್ಲಿ ಈಜಲು ಹೋಗಿದ್ದು, ಈ ಸಂದರ್ಭದಲ್ಲಿ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದೆ. ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ಮಷ್ಟೆ ತಿಳಿದುಬರಬೇಕಿದೆ.














