ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ” ಬುರ್ಖಾ ತೆಗೆದು ಬನ್ನಿ’ ಸೂಚನ ಫಲಕ : ಪೋಸ್ಟ್ ವೈರಲ್ ಆಗುತ್ತಿದ್ದಂತೆ ಫಲಕ ತೆರವು – ಕಹಳೆ ನ್ಯೂಸ್

ಪುತ್ತೂರು : ತಾಲೂಕು ಆಸ್ಪತ್ರೆಯಲ್ಲಿ “ಬುರ್ಕಾ ತೆಗೆದು ಬನ್ನಿ’ ಎಂಬ ಸೂಚನ ಫಲಕ ವಿವಾದಕ್ಕೀಡಾದ ಮತ್ತು ಸಾಮಾಜಿಕ ಜಾಲತಾಣದಲ್ಲೂ ಭಾರೀ ಚರ್ಚೆಯ ಬಳಿಕ ಸೂಚನ ಫಲಕವನ್ನು ತೆರವುಗೊಳಿಸಿದ ವಿದ್ಯಮಾನ ನಡೆದಿದೆ.
ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ರೋಗಿಗಳ ಇಸಿಜಿ ತೆಗೆಯುವ ರೂಮ್ ಬಾಗಿಲಿನಲ್ಲಿ ಈ ಫಲಕ ಅಳವಡಿಸಲಾಗಿತ್ತು.














