Thursday, March 12, 2026
ಸುದ್ದಿ

ಲೋಕಸಭೆಯ ಕಲಾಪದ ಅನುವಾದಕರಾಗಿ ಸುಬ್ರಹ್ಮಣ್ಯದ ಡಾ|ಗೋವಿಂದ ಎನ್.ಎಸ್ ನೇಮಕ – ಕಹಳೆ ನ್ಯೂಸ್

ಲೋಕಸಭೆಯ ಕಲಾಪದಲ್ಲಿ ಆಗುವ ಚರ್ಚೆಗಳನ್ನು ಆಂಗ್ಲ ಹಾಗೂ ಪ್ರಾದೇಶಿಕ ಭಾಷೆಗೆ ಭಾಷಾಂತರ ಮಾಡುವ ಕನ್ಸಲ್ಟಂಟ್ ಇಂಟಪ್ರಿಟರ್ ಹುದ್ದೆಗೆ ಸುಬ್ರಹ್ಮಣ್ಯ ಸಮೀಪದ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಮದ ಗುಂಡಿಹಿತ್ಲುವಿನ ಡಾ| ಗೋವಿಂದ ಎನ್.ಎಸ್. ನೇಮಕಗೊಂಡಿದ್ದಾರೆ.


ಲೋಕಸಭೆಯ ಅಧಿವೇಶನದಲ್ಲಿನ ಕಾರ್ಯಕಲಾಪಗಳನ್ನು ಭಾರತೀಯ ವ್ಯವಸ್ಥೆಗೆ ಭಾಷಾಂತರಿಸುವ ಸಲುವಾಗಿ ಹೊಸ ಸಂಸತ್ ಭವನದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಿರುವ ಎಲ್ಲ ಭಾಷೆಗಳಲ್ಲೂ ತಲಾ 5  ಕನ್ಸಲ್ಟಂಟ್ ಹುದ್ದೆಗಳನ್ನು ಸೃಷ್ಟಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡಕ್ಕೆ ಭಾಷಾಂತರ ಹುದ್ದೆಗೆ 15 ಮಂದಿ ಅರ್ಜಿ ಸಲ್ಲಿಸಿದ್ದು, 10  ಮಂದಿಯನ್ನು ಆಯ್ಕೆ ಮಾಡಲಾಗಿತ್ತು, ನಾಲ್ವರು ನೇಮಕಗೊಂಡಿದ್ದಾರೆ. ಅವರಲ್ಲಿ ಮೂವರು ದಿಲ್ಲಿಯ ಕನ್ನಡಿಗರಾಗಿದ್ದು, ಗೋವಿಂದ ಎನ್.ಎಸ್. ಕರ್ನಾಟಕ(ದಕ್ಷಿಣ ಕನ್ನಡ) ದವರಾಗಿದ್ದಾರೆ. ಈ ಮೊದಲೇ ಒರ್ವರು ಪೂರ್ಣಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದರು.

ಜಾಹೀರಾತು
ಜಾಹೀರಾತು