Monday, March 9, 2026
ಸುದ್ದಿ

ವಿವೇಕಾನಂದರ ಚಿಂತನೆಗಳು ನಮ್ಮ ಆಲೋಚನೆಗಳನ್ನು ತೀಕ್ಷಗೊಳಿಸುತ್ತದೆ ; ಡಾ. ಎಸ್. ಆರ್. ಲೀಲಾ – ಕಹಳೆ ನ್ಯೂಸ್

ಪುತ್ತೂರು : ಸ್ವಾಮಿ ವಿವೇಕಾನಂದರ ಚಿಂತನೆಗಳು ಅತ್ಯಂತ ಪ್ರಬಲ ಹಾಗೂಪ್ರಭಾವಶಾಲಿಯಾಗಿದ್ದು, ಪ್ರತಿಯೊಬ್ಬರೂ ಜೀವ ಸಂಕುಲವನ್ನು ಪ್ರೀತಿಸಿ,ಗೌರವಿಸಬೇಕು. ವ್ಯಕ್ತಿ ತನಗಿರುವ ಅವಕಾಶ ಮತ್ತು ಮಿತಿಗಳ ಒಳಗೆ ತನ್ನಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಅದೇ ದೇಶಕ್ಕೆ ಸಲ್ಲಿಸುವನಿಜವಾದ ಸೇವೆಯೆಂದು ಖ್ಯಾತ ಅಂಕಣಗಾರರು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನಮಾಜಿ ಸದಸ್ಯೆ ಡಾ. ಎಸ್. ಆರ್. ಲೀಲಾ ಹೇಳಿದರು.


ಇವರು ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಮಂಗಳೂರು, ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು, ಪುತ್ತೂರು ವಿವೇಕಾನಂದಮಹಾವಿದ್ಯಾಲಯ ಹಾಗೂ ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ವಿವೇಕ ವಾಣಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ಚಿಂತನೆಗಳು ನಮ್ಮ ಆಲೋಚನೆಗಳನ್ನು ತೀಕ್ಷಗೊಳಿಸುತ್ತದೆ. ಧರ್ಮನಮ್ಮ ದೇಶದ ಆಧಾರವಾಗಿದ್ದು, ಪ್ರತಿಯೊಬ್ಬನ ಅಸ್ಮಿತೆಯನ್ನು ಎತ್ತಿ ಹಿಡಿಯಲು ಧರ್ಮಾಧ್ಯಾಯನ ಮುಖ್ಯ ಪಾತ್ರವನ್ನು ವಹಿಸುತ್ತದೆ. ಅಂತೆಯೇ ವಿದ್ಯಾರ್ಥಿಗಳುವಿವೇಕಾನಂದರAತೆ ಅಗಾಧ ದೇಶಪ್ರೇಮ ಮತ್ತು ಅಂತ:ಸತ್ವವನ್ನುಬೆಳೆಸಿಕೊಳ್ಳಬೇಕು ಎಂದು ಹೇಳಿದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನುನಾವೆಲ್ಲರೂ ಅನುಸರಿಸಬೇಕು ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಮುರಳೀಕೃಷ್ಣ.ಕೆ.ಎನ್ ಮಾತನಾಡಿ, ಧರ್ಮದ ಚಿಂತನೆ ಹಾಗೂ ತತ್ವಾದರ್ಶಗಳವಿಚಾರಧಾರೆಗಳನ್ನು ಜಾಗತಿಕವಾಗಿ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆಸಲ್ಲುತ್ತದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ದೇಶ ಮತ್ತು ಧರ್ಮದ ಕುರಿತು ಜಾಗೃತಿಮೂಡಿಸಲು ಶಿಕ್ಷಣ ಸಂಸ್ಥೆಗಳಲ್ಲಿರುವ ಶಿಕ್ಷಕರು ಶ್ರಮಿಸಬೇಕು ಎಂದುಅಭಿಪ್ರಾಯಪಟ್ಟರು.
ಬಳಿಕ ಪ್ರಶ್ನೋತ್ತರ ಅವಧಿ ನಡೆಯಿತು. ವೇದಿಕೆಯಲ್ಲಿ ನಿವೃತ್ತ ಯೋಧಬೆಳ್ಳಾ¯ ಗೋಪಿನಾಥ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು