Wednesday, May 22, 2024

ಬೈಂದೂರು

ದಕ್ಷಿಣ ಕನ್ನಡಬೈಂದೂರುರಾಜಕೀಯಸುದ್ದಿ

100 ಬೂತ್ ತಲುಪಿದ ಬೂತ್ ಕಡೆಗೆ ಸಮೃದ್ಧ ನಡಿಗೆ ಅಭಿಯಾನ –ಕಹಳೆ ನ್ಯೂಸ್

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾದ ಬೂತ್ ಕಡೆಗೆ ಸಮೃದ್ಧ ನಡೆಗೆ ಎನ್ನುವ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು ಬೈಂದೂರು ಕ್ಷೇತ್ರದ ನೂರು ಬೂತ್ ಸಂಪರ್ಕ ಪೂರ್ಣಗೊಂಡಿದೆ. ಬೈAದೂರು ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೆ ಏರಿಸುವ ಸಂಕಲ್ಪ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಒಂದು ಲಕ್ಷ ಮತಗಳ ಲೀಡ್ ಒದಗಿಸುವ ಸಂಕಲ್ಪದೊAದಿಗೆ ಬೂತ್...
ಉಡುಪಿಬೈಂದೂರುರಾಜಕೀಯಸುದ್ದಿ

“ಕಾಂಗ್ರೆಸ್ ಅಭ್ಯರ್ಥಿ ಐದು ವರ್ಷಕ್ಕೊಮ್ಮೆ ಮತ ಕೇಳಲು ಬರುವುದು ಮಾತ್ರ : ಬಿಜೆಪಿ ಅಭ್ಯರ್ಥಿ ಅನುದಿನವು ಜನರೊಂದಿಗೆ ಇರುವವರು ಪಾದರಸದಂತೆ ಓಡಾಡುವವರು” : ಅಭಿವೃದ್ಧಿ ವಿಷಯದಲ್ಲಿ ಚರ್ಚೆಗೆ ಮಾಜಿ ಶಾಸಕರಿಗೆ ಪಂಥಾಹ್ವಾನ ನೀಡಿದ ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ – ಕಹಳೆ ನ್ಯೂಸ್

ಬೈಂದೂರು: ಅಭಿವೃದ್ಧಿ ಹಾಗೂ ಅನುದಾನ ಹಂಚಿಕೆ ವಿಚಾರದಲ್ಲಿ ಬಿ.ವೈ. ರಾಘವೇಂದ್ರ ಅವರು ಯಾವುದೇ ತಾರತಮ್ಯ ಮಾಡಿಲ್ಲ. ಕ್ಷೇತ್ರದಾದ್ಯಂತ ಪಾದರಸದಂತೆ ಸಂಚರಿಸಿ ಹಳ್ಳಿ ಹಳ್ಳಿಗಳಲ್ಲೂ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ನೆರವಾಗಿದ್ದಾರೆ. ಹಲವು ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಐದು ವರ್ಷಕ್ಕೊಮ್ಮೆ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವುದಕ್ಕೆ ಸೀಮಿತರಾಗಿದ್ದಾರೆ ಎಂದು ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು....
ದಕ್ಷಿಣ ಕನ್ನಡಬೈಂದೂರುರಾಜಕೀಯಸುದ್ದಿ

ಬಿಜೆಪಿ ಬೈಂದೂರು ಮಂಡಲ ವತಿಯಿಂದ ವಿನೂತ ಕಾರ್ಯಕ್ರಮ ;ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಯವರಿಂದ ಉಪ್ಪುಂದ ಗ್ರಾ. ಪಂ. ವ್ಯಾಪ್ತಿಯಲ್ಲಿ ಬುಧವಾರ ಕಾರ್ಯಕ್ರಮಕ್ಕೆ ಚಾಲನೆ –ಕಹಳೆ ನ್ಯೂಸ್

ಬೈಂದೂರು: ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಿಜೆಪಿ ಬೈಂದೂರು ಮಂಡಲದ ವತಿಯಿಂದ ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ನನ್ನ ಪೇಜ್ ನನ್ನ ಜವಾಬ್ದಾರಿ ವಿಶೇಷ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭಿಸಲಾಗಿದೆ. ಮಂಡಲ ಎಲ್ಲ ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಬುಧವಾರ ಉಪ್ಪುಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೀಪಕ್ ಕುಮಾರ್ ಶೆಟ್ಟಿಯವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನನ್ನ ಪೇಜ್...
ಉಡುಪಿಬೈಂದೂರುರಾಜಕೀಯಸುದ್ದಿ

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರಿಂದ ಬೂತ್ ಬೂತ್ ಗಳಲ್ಲೂ ಮತ ಶಿಖಾರಿ ಆರಂಭ : “ಬೂತ್ ಕಡೆಗೆ ಸಮೃದ್ಧ ನಡಿಗೆ” ವಿನೂತನ ಕಾರ್ಯಕ್ರಮಕ್ಕೆ ಚಾಲನೆ – ಕಹಳೆ ನ್ಯೂಸ್

ಬೈಂದೂರು: ಲೋಕಸಭಾ ಚುನಾವಣ ಕಣ ರಂಗೇರುತಿದ್ದು, ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಮಂಗಳವಾರ ಬೈಂದೂರು ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಕಾರ್ಯಕರ್ತರ ಸಭೆ ನಡೆಸಿ ಹೊಸ ಸಂಚಲನ, ಚೈತನ್ಯ ತುಂಬಿದ್ದರು. ಇದರ ಮುಂದುವರಿದ ಭಾಗವಾಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಗುರುರಾಜ ಗಂಟಿಹೊಳೆ ಯವರು ಬೂತ್ ಕಡೆಗೆ ಸಮೃದ್ಧ ನಡಿಗೆ ವಿಶೇಷ ಕಾರ್ಯಕ್ರಮದ ಮೂಲಕ ಮತ ಶಿಖಾರಿ ಬುಧವಾರದಿಂದ ಆರಂಭಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ನಿರೀಕ್ಷೆಗೂ...
ಉಡುಪಿಬೈಂದೂರುರಾಜಕೀಯಸುದ್ದಿ

ಅಂಪಾರು ಮೂಡುಬಗೆ ಗ್ರಾಮದಲ್ಲಿರುವ ನಮ್ಮೂರ ಸಂಭ್ರಮ ಮೈದಾನದಲ್ಲಿ ನಡೆದ “ಸಿದ್ದಾಪುರ ಹಾಗೂ ಕಾವ್ರಾಡಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಕಾರ್ಯಕರ್ತರ” ಸಮಾವೇಶ – ಕಹಳೆ ನ್ಯೂಸ್

ಬೈಂದೂರು : ಲೋಕಸಭಾ ಚುನಾವಣೆ ನಿಮಿತ್ತ ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಹಾಗೂ ಕಾವ್ರಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಂಪಾರು ಮೂಡುಬಗೆ ಗ್ರಾಮದಲ್ಲಿರುವ ನಮ್ಮೂರ ಸಂಭ್ರಮ ಮೈದಾನದಲ್ಲಿ ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲದ ವತಿಯಿಂದ "ಸಿದ್ದಾಪುರ ಹಾಗೂ ಕಾವ್ರಾಡಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಕಾರ್ಯಕರ್ತರ" ಸಮಾವೇಶ ನಡೆಯಿತು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕನಸು ಸ್ವಾತಂತ್ರ‍್ಯದ ಶತಮಾನೋತ್ಸವ ಸಂದರ್ಭದಲ್ಲಿ ದೇಶವು "ವಿಕಸಿತ ಭಾರತ" ವಾಗಬೇಕು ಎಂಬುದು...
ಬೆಂಗಳೂರುಬೈಂದೂರುರಾಜಕೀಯರಾಜ್ಯಸುದ್ದಿ

ಬಿಜೆಪಿ 2 ನೇ ಪಟ್ಟಿ ರಿಲೀಸ್ -‌ 23 ಅಭ್ಯರ್ಥಿಗಳ ಹೆಸರು ಬಿಡುಗಡೆ ; ಬೈಂದೂರಿನಿಂದ ಹಾಲಿ ಶಾಸಕ ಸುಕುಮಾರ್ ಶೆಟ್ಟಿಗೆ ಟಿಕೆಟ್ ಮಿಸ್ – RSS ಪ್ರಚಾರಕರಾಗಿ ನಿವೃತ್ತರಾದ ಗುರುರಾಜ ಗಂಟ್ಟಿಹೊಳೆ ಕಣಕ್ಕೆ- ಕಹಳೆ ನ್ಯೂಸ್

ಬೆಂಗಳೂರು : ಮಂಗಳವಾರ ಬಹುನಿರೀಕ್ಷಿತ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಬುಧವಾರ 23 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. 224 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಮಾತ್ರ ಬಾಕಿ ಉಳಿದಿದ್ದು ನಾಳೆ ಬಿಡುಗಡೆ ಮಾಡುವ ಎಲ್ಲ ಸಾಧ್ಯತೆಗಳಿವೆ. 7 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ಯಾರಿಗೆಲ್ಲ ಟಿಕೆಟ್..?: ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್‌, ಬಸವನ ಬಾಗೇವಾಡಿ- ಎಸ್‌.ಕೆ ಬೆಳ್ಳುಬ್ಬಿ, ಇಂಡಿ- ಕಾಸಾಗೌಡ ಬಿರಾದಾರ್‌, ಗುರಮಿಠಕಲ್-‌...
ಉಡುಪಿಬೈಂದೂರುರಾಜ್ಯಸುದ್ದಿ

ಫೆ.15, 16 ರಂದು ಜಗನ್ಮಾತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ನೂತನ ಬ್ರಹ್ಮರಥ ಸಮರ್ಪಣೆ – ಕಹಳೆ ನ್ಯೂಸ್

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ದಾನಿಗಳಾದ ಬೆಂಗಳೂರಿನ ಉದ್ಯಮಿ ಸುನಿಲ್‌ ಆರ್‌. ಶೆಟ್ಟಿ ಅವರಿಂದ ಕೊಡಮಾಡಿದ ನೂತನ ಬ್ರಹ್ಮರಥದ ಪುರಪ್ರವೇಶ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಫೆ. 15 ಹಾಗೂ 16 ರಂದು ನಡೆಯಲಿದೆ. ಫೆ.15 ರಂದು ಕುಂಭಾಶಿ. ಕೋಟೇಶ್ವರ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬಗ್ವಾಡಿ, ನೆಂಪು ವಂಡ್ಸೆ, ಚಿತ್ತೂರು, ಈಡೂರು, ಜಡ್ಕಲ್‌ ಹಾಲ್ಕಲ್‌ ಮಾರ್ಗವಾಗಿ ಪುರಮೆರವಣಿಗೆಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುವುದು. ರಥ ಸಾಗುವ ಮಾರ್ಗದಲ್ಲಿ ಅಲ್ಲಿನ ಮುಖ್ಯ ದೇಗುಲ‌ಗಳ...
ಕುಂದಾಪುರಬೈಂದೂರುರಾಜಕೀಯರಾಜ್ಯಸುದ್ದಿ

ಹಿಜಬ್ ಮಾನಸಿಕತೆ ಮೋಸ್ಟ್ ಡೇಂಜರಸ್ ; ಪ್ರಮೋದ್ ಮುತಾಲಿಕ್ ಆಕ್ರೋಶ – ಕಹಳೆ ನ್ಯೂಸ್

ಬೆಳಗಾವಿ : ಹಿಜಬ್ ಪ್ರಕರಣ ಎರಡು ತಿಂಗಳಿನಿಂದ ನಡೆಯುತ್ತಿದೆ. ಆಗಲೇ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದರೆ ರಾಜ್ಯ ವ್ಯಾಪ್ತಿ ವಿಸ್ತಾರ ಆಗುತ್ತಿರಲಿಲ್ಲ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಜಬ್ ಬಗ್ಗೆ ನಿಮಗೆ ಹಕ್ಕು ಸ್ವಾತಂತ್ರ್ಯ ಇರಬಹುದು. ಕಾಲೇಜಿನ ಹೊರಗಡೆ ಸ್ವತಂತ್ರವಾಗಿ ಇರಬಹುದು. ಆದರೆ ಕಾಲೇಜಿನ ನೀತಿ ನಿಯಮ ಪಾಲಿಸಬೇಕು. ಕಾಲೇಜಿನ ಆವರಣದಲ್ಲಿ ಇದ್ದರೆ ಕಾಲೇಜು ನಿಯಮದಲ್ಲಿರಬೇಕು. ಅಲ್ಲಿ ಹಿಜಬ್, ಬುರ್ಖಾ...
1 2 3
Page 2 of 3