Tuesday, May 21, 2024

ಶಿಕ್ಷಣ

ದಕ್ಷಿಣ ಕನ್ನಡಪುತ್ತೂರುಶಿಕ್ಷಣ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ| ಮಹೇಶ್ ಪ್ರಸನ್ನ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅದೇ ಕಾಲೇಜಿನಲ್ಲಿ ೬ ವರ್ಷಗಳಿಂದ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥರಾಗಿದ್ದ ಮೂಲತಃ ಪಾಣಾಜೆಯ ಡಾ. ಮಹೇಶ್ ಪ್ರಸನ್ನರವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಈ ಹಿಂದೆ ಪ್ರಾಂಶುಪಾಲರಾಗಿದ್ದ ಡಾ. ಎಂ.ಎಸ್. ಗೋವಿಂದೇ ಗೌಡರ ತೆರವಾದ ಸ್ಥಾನಕ್ಕೆ ಕಾಲೇಜಿನ ಆಡಳಿತ ಮಂಡಳಿ ಡಾ. ಪ್ರಸನ್ನರವರನ್ನು ನಾಮ ನಿರ್ದೇಶಿಸಿದ್ದು, ಅಧಿಕಾರ ಸ್ವೀಕರಿಸಿದ್ದಾರೆ. ಪಾಣಾಜೆ ಗ್ರಾಮದ ಕುರಿಯತ್ತಡ್ಕ ಗೋಪಾಲಕೃಷ್ಣ ಶಾಸ್ತ್ರಿ ಮತ್ತು...
ಶಿಕ್ಷಣ

ಕೊರೋನಾ ಸಂದರ್ಭದಲ್ಲಿ ಕಾಲೇಜು ಫೀಸ್ ಕೇಳುವಂತಿಲ್ಲ : ತಹಶೀಲ್ದಾರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್– ಕಹಳೆ ನ್ಯೂಸ್

ಸುಳ್ಯ ; ಸರಕಾರದ ನಿಯಮಗಳ ಪ್ರಕಾರ ಯಾವುದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಒತ್ತಾಯಪೂರ್ವಕವಾಗಿ ಈ ಸಂದರ್ಭದಲ್ಲಿ ಕಾಲೇಜು ಫೀಸ್ ಅನ್ನು ಕೇಳುವಂತಿಲ್ಲ... ಕೊರೋನಾದಿಂದ ಜನಸಾಮಾನ್ಯರು ಆರ್ಥಿಕವಾಗಿ ಕಂಗೆಟ್ಟಿರುವ ಈ ಸಂದರ್ಭದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪೂರ್ಣ ಪ್ರಮಾಣದ ಫೀಸು ಜುಲೈ 31ರ ಒಳಗಾಗಿ ಕಟ್ಟಬೇಕೆಂದು ಸುತ್ತೋಲೆ ಹೊರಡಿಸಿದ್ದು ಎಲ್ಲರನ್ನು ಗೊಂದಲಕ್ಕೀಡು ಮಾಡಿದೆ. ಅದಲ್ಲದೆ ಸುತ್ತೋಲೆಯನ್ನು ಕೇವಲ ಹತ್ತು ದಿನಗಳ ಹಿಂದೆ ಹೊರಡಿಸಿ,ಕೊನೆಯ ದಿನಾಂಕವನ್ನು ಹೇಳಿದರೆ ಹಣ ಹೊಂದಿಸಲು ಹೇಗೆ ಸಾಧ್ಯ. ಈ...
ಶಿಕ್ಷಣಸುದ್ದಿ

ಪಠ್ಯಪುಸ್ತಕದಿಂದ ಟಿಪ್ಪುಸುಲ್ತಾನ್ ವಿಷಯವನ್ನು ತೆಗೆದುಹಾಕಿದ ಕೆಟಿಬಿಎಸ್..!-ಕಹಳೆ ನ್ಯೂಸ್

ಬೆಂಗಳೂರು,ಜು.28- ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ (ಕೆಟಿಬಿಎಸ್) ಮೈಸೂರು ಇತಿಹಾಸದ ಪ್ರಮುಖ ಭಾಗವಾದ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್ ಪಠ್ಯವನ್ನು ತೆಗೆದುಹಾಕಿದೆ. ಕೋವಿಡ್ ಕಾರಣದಿಂದಾಗಿ ಸಮಯದ ಕೊರತೆ ನೆಪವೊಡ್ಡಿ ಮೈಸೂರಿನ ಏಳನೇ ತರಗತಿ ಸಮಾಜ ವಿಜ್ಞಾನ ಪಠ್ಯದ ಐತಿಹಾಸಿಕ ಚರಿತ್ರೆ ಭಾಗದಿಂದ ಟಿಪ್ಪುಸುಲ್ತಾನ್ ಪಠ್ಯವನ್ನು ಕಿತ್ತು ಹಾಕಲಾಗಿದೆ. ಈ ನಡುವೆ ಮೈಸೂರು ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಈ ವಿಷಯಗಳ ಬಗ್ಗೆ ಪ್ರಸ್ತುತಿಗಳನ್ನು ತಯಾರಿಸಿ ತೋರಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ...
ಗೋಕರ್ಣಶಿಕ್ಷಣಸುದ್ದಿ

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮೂಲಕ ಭಾರತೀಯ ಶಿಕ್ಷಣಕ್ಕೆ ಹೊಸದಿಕ್ಕು ; ಗುರುಕುಲಗಳ ಆನ್‍ಲೈನ್ ಶಿಕ್ಷಣಕ್ಕೆ ಚಾಲನೆ ನೀಡಿದ ರಾಘವೇಶ್ವರಭಾರತೀ ಮಹಾಸ್ವಾಮೀಜಿ – ಕಹಳೆ ನ್ಯೂಸ್

ಗೋಕರ್ಣ: ದೇಶ ಬೆಳಗಬೇಕು; ಭಾರತೀಯ ವಿದ್ಯೆ ಬೆಳೆಯಬೇಕು ಎಂಬ ಉದ್ದೇಶದಿಂದ ಭಾರತದ ಶಿಕ್ಷಣದಲ್ಲಿ ಭಾರತೀಯತೆಯನ್ನು ತುಂಬುವ ಮಹತ್ಕಾರ್ಯಕ್ಕೆ ಶ್ರೀರಾಮಚಂದ್ರಾಪುರ ಮಠದ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮುನ್ನುಡಿ ಬರೆದಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ಆನ್‍ಲೈನ್ ಶಿಕ್ಷಣಕ್ಕೆ ಚಾಲನೆ ನೀಡಿದ ಸಂದರ್ಭ ಸ್ವಾಮೀಜಿಯವರು ಸ್ವತಃ ಪ್ರಥಮ ಪಾಠ ಬೋಧಿಸಿದರು. ವಿಶ್ವದ ಎಲ್ಲೂ ಸಿಗದ ಪರಿಪೂರ್ಣ, ಅಪೂರ್ವ ಶಿಕ್ಷಣ ನಮ್ಮ ಯುವ ಜನಾಂಗಕ್ಕೆ ಸಿಗಬೇಕು ಎನ್ನುವುದೇ ವಿವಿವಿ...
ಬೆಂಗಳೂರುರಾಜ್ಯಶಿಕ್ಷಣಸುದ್ದಿ

ಜು.23ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯೂಟ್ಯೂಬ್‌ ತರಗತಿ ಪ್ರಾರಂಭ ; ವಿದ್ಯಾರ್ಥಿಗಳಿಗೆ ಪ್ರತಿ ದಿನ 45 ನಿಮಿಷಗಳ 4 ತರಗತಿಗಳು – ಕಹಳೆ ನ್ಯೂಸ್

ಬೆಂಗಳೂರು, ಜು 22 : ಜು.23ರ ಗುರುವಾರದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯೂಟ್ಯೂಬ್‌‌‌ ಮುಖಾಂತರ ಪ್ರೀ ರೆಕಾರ್ಡೆಡ್‌‌‌‌ ವಿಡಿಯೋ ತರಗಳು ಪ್ರಾರಂಭವಾಗಲಿವೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ಪಾಠವನ್ನು ಕೇಳಲು ಸ್ಮಾರ್ಟ್‌ಫೋನ್‌‌‌, ಲ್ಯಾಪ್‌ಟಾಪ್‌‌‌‌ ಅಥವಾ ಇಂಟರ್‌ನೆಟ್‌‌ ಇರದೇ ಇದ್ದಲ್ಲಿ, ಕಾಲೇಜು ಆರಂಭವಾದ ಸಂದರ್ಭ ಇದೇ ಪಾಠಗಳನ್ನು ಉಪನ್ಯಾಸಕರು ಮತ್ತೊಮ್ಮೆ ಬೋಧನೆ ಮಾಡಲಿದ್ದಾರೆ ಎಂದು ಪಿಯು ಇಲಾಖೆ ನಿರ್ದೇಶಕಿ ಎಂ.ಕಂಗವಲ್ಲಿ ಹೇಳಿದ್ದಾರೆ. ಕೊರೊನಾ ಸೋಂಕು ಹೆಚ್ಚಾಗಿ ವ್ಯಾಪಿಸುತ್ತಿರುವ ಹಿನ್ನೆಲೆ ಸದ್ಯಕ್ಕೆ ಕಾಲೇಜು ಪ್ರಾರಂಭವಾಗುವ...
ಬೆಂಗಳೂರುರಾಜ್ಯಶಿಕ್ಷಣಸುದ್ದಿ

ಜು. 30, 31ರಂದು ಸಿಇಟಿ ಪರೀಕ್ಷೆ ; ಪಿಜಿಸಿಇಟಿ, ಡಿಪ್ಲೊಮಾ ಸಿಇಟಿ ಪರೀಕ್ಷೆ ಮುಂದೂಡಿಕೆ – ಕಹಳೆ ನ್ಯೂಸ್

ಬೆಂಗಳೂರು, ಜು 22 : ಸಿಇಟಿ ಪರೀಕ್ಷೆಯ ಜು 30, 31ರಂದು ನಡೆಯಲಿದ್ದು, 497 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಡಿಸಿಎಂ ಅಶ್ವತ್ಥ್‌‌ ನಾರಾಯಣ ಹೇಳಿದ್ದಾರೆ.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಇಟಿ ಪರೀಕ್ಷೆಯ ಎರಡು ದಿನಗಳ ಮೊದಲೇ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್‌‌ ಮಾಡಲಾಗುತ್ತದೆ. ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ ಥರ್ಮಲ್‌ ಸ್ಕ್ರೀನಿಂಗ್‌‌‌‌‌‌‌‌‌‌‌‌‌, ಮಾಸ್ಕ್‌‌‌‌ ಸೇರಿದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಪರೀಕ್ಷೆಯು ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ನಡೆಯಲಿದ್ದು, ಎಸ್‌‌‌ಒಪಿ ತಂಡಗಳನ್ನು ಈಗಾಗಾಲೇ ರಚನೆ ಮಾಡಲಾಗಿದೆ....
ಶಿಕ್ಷಣಸುದ್ದಿ

‘ಆಗಸ್ಟ್‌ ಮೊದಲ ವಾರದಲ್ಲಿ SSLC ಫಲಿತಾಂಶ ಪ್ರಕಟ’ ; ಮಾಹಿತಿ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್ – ಕಹಳೆ ನ್ಯೂಸ್

ಬೆಂಗಳೂರು, ಜು.20  : ಕೊರೊನಾ ಆತಂಕದ ನಡುವೆಯೂ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಶೇ. 89ರಷ್ಟು ಪೂರ್ಣವಾಗಿದ್ದು ಆಗಸ್ಟ್‌ ಮೊದಲ ವಾರದಲ್ಲಿ ಫಲಿತಾಂಶ ಲಭಿಸಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಬಹುತೇಕವಾಗಿ ಪೂರ್ಣವಾಗಿದೆ. ಲಾಕ್‌ಡೌನ್‌ ಕಾರಣದಿಂದಾಗಿ ಬೆಂಗಳೂರಿನ ಎರಡು ಜಿಲ್ಲೆಗಳಲ್ಲಿ ಮೌಲ್ಯಮಾಪನ ಆರಂಭ ತಡವಾಗಿದೆ. ಬೇರೆ ಎಲ್ಲಾ ಜಿಲ್ಲೆಗಳ ಮಾಹಿತಿ ಪಡೆಯುತ್ತಿದ್ದು ಆಗಸ್ಟ್‌...
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಬಡತನ, ಅಂಗ ವೈಕಲ್ಯ ಮೀರಿ ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಬಂಟ್ವಾಳದ ಭಾಗ್ಯಶ್ರೀ – ಕಹಳೆ ನ್ಯೂಸ್

ಬಂಟ್ವಾಳ‌‌‌, ಜು 16 : ವಿದ್ಯಾರ್ಥಿನಿಯೋರ್ವಳು ಬಡತನ, ಅಂಗವೈಕಲ್ಯವನ್ನು ಮೆಟ್ಟಿನಿಂತು ದ್ವಿತೀಯ ಪಿಯುಸಿಯಲ್ಲಿ 470 ಅಂಕ ಗಳಿಸಿ ಉತ್ತಮ ಸಾಧನೆಗೈದಿದ್ದಾಳೆ.   ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಕೇಶವ ಕುಲಾಲ್‌ ಹಾಗೂ ರಾಜೀವಿ ದಂಪತಿಯ ಪುತ್ರಿ ಭಾಗ್ಯಶ್ರೀ ಬಂಟ್ವಾಳದ ಎಸ್‌‌.ವಿ.ಎಸ್‌‌ ಕಾಲೇಜಿನಲ್ಲಿ ಕಲಿತು ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ 476 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಕಲಿಕೆಯಲ್ಲಿ ಆಸಕ್ತಿ ಹೊಂದಿರುವ ಭಾಗ್ಯಶ್ರೀ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್‌ ಶಾಲೆಯಲ್ಲಿ...
1 26 27 28 29 30
Page 28 of 30