Wednesday, May 22, 2024

ಕೃಷಿ

ಕೃಷಿಬಂಟ್ವಾಳಸುದ್ದಿ

ಸಜೀಪಮೂಡ ಗ್ರಾಮದ ಮಿತ್ತಮಜಲು ಕ್ಷೇತ್ರದ ವತಿಯಿಂದ ನಡೆದ ವನಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಸಜೀಪಮೂಡ ಗ್ರಾಮದ ಮಿತ್ತಮಜಲು ಕ್ಷೇತ್ರದ ವತಿಯಿಂದ ಬಂಟ್ವಾಳ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವನಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮವು ಮಿತ್ತಮಜಲು ಕ್ಷೇತ್ರದ ವಠಾರದಲ್ಲಿ ನಡೆಯಿತು. ಅರಣ್ಯ ಇಲಾಖೆಯ ವತಿಯಿಂದ ಕ್ಷೇತ್ರದ ವಠಾರದಲ್ಲಿ 700 ಗಿಡಗಳನ್ನು ನಾಟಿ ಮಾಡಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಪ್ರಕೃತಿಯ ಸಮತೋಲನ ಕಳೆದುಕೊಂಡಾಗ ಗಿಡ ಮರಗಳೇ ಅದನ್ನು ಸಹಜ ಸ್ಥಿತಿಗೆ ತರುತ್ತಿದ್ದು, ಅರಣ್ಯ ನಾಶವು ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತದೆ....
ಕೃಷಿಪುತ್ತೂರುಸುದ್ದಿ

ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ (ನಿ.) : ಕಲ್ಪಸಮೃದ್ಧಿ ಯೋಜನೆಯಡಿ ಠೇವಣಿಗಳಿಗೆ ಆಕರ್ಷಕ ಬಡ್ಡಿದರ 12% -ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ (ನಿ.) ಭಾರತದ ಅತೀ ದೊಡ್ಡ ತೆಂಗು ರೈತರ ಸಂಸ್ಥೆ, ಅಧಿಕ ಪ್ರತಿಫಲ ನೀಡುವ ಕಲ್ಪಸಮೃದ್ಧಿ ಯೋಜನೆಯಡಿ ರೂ.1 ಲಕ್ಷಕ್ಕೆ ಪ್ರತೀ ತಿಂಗಳು 948 ರಂತೆ ಲಾಭಾಂಶ ಪಡೆಯಲು ಅವಕಾಶ ಕಲ್ಪಿಸಿದೆ. ಠೇವಣಿಗಳಿಗೆ ಸೀಮಿತ ಅವಧಿಯವರೆಗೆ ಮಾತ್ರ ಆಕರ್ಷಕ ಬಡ್ಡಿದರ ಲಭ್ಯವಿದ್ದು, ಚಿಂತೆ ಮುಕ್ತ ನಾಳೆಗಾಗಿ ವಿಶ್ವಾಸಾರ್ಹ ಆದಾಯವಾಗಿದೆ. ಹೌದು, ನೀವು ಠೇವಣಿ ಅವಧಿಯನ್ನು 45 ರಿಂದ 180 ದಿವಸದವರೆಗೆ ಇರಿಸಿದ್ದಲ್ಲಿ...
ಕೃಷಿಶಿಕ್ಷಣಸುದ್ದಿಸುಬ್ರಹ್ಮಣ್ಯ

ಉತ್ತ ಗದ್ದೆಯಲ್ಲಿ ನೇಜಿ ನಾಟಿ ಮಾಡಿದ ಎಸ್‌ಎಸ್‌ಪಿಯು ಕಾಲೇಜಿನ ಯುವ ವಿದ್ಯಾರ್ಥಿಗಳು –ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು ಭತ್ತದ ಗಿಡ ನಾಟಿ ಮಾಡುವ ಗದ್ದೆಯಲ್ಲಿ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು.  ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯ ರಾಮಣ್ಣ ಅವರ ಉತ್ತ ಗದ್ದೆಯಲ್ಲಿ ನೇಜಿ ನಡುವ ಪ್ರಕ್ರೀಯೆ ನಡೆಯಿತು. ಗದ್ದೆಗಳಲ್ಲಿ ಸಸಿ ನೆಟ್ಟು, ಕೆಸರಲ್ಲಿ ಮಿಂದೆದ್ದು ವಿದ್ಯಾರ್ಥಿಗಳು ನೇಗಿಲ ಯೋಗಿಗಳಾದರು. ಹಿರಿಯರು ಹೇಳಿದ ಓ ಬೇಲೆ ಜನಪದ ಪದ್ಯವನ್ನು ಹಾಡುತ್ತಾ ವಿದ್ಯಾರ್ಥಿಗಳು ಸಂತಸದಿAದ ಭತ್ತ...
ಕೃಷಿಮೂಡಬಿದಿರೆಸುದ್ದಿ

ಕಡಂದಲೆ ಹೈಸ್ಕೂಲು ಪರಿಸರದಲ್ಲಿ ವನ ಮಹೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಮೂಡುಬಿದಿರೆ : ಮುಂಡ್ಕೂರು-ಕಡoದಲೆ ಲಯನ್ಸ್ ಕ್ಲಬ್, ದ.ಕ. ಹಾಲು ಒಕ್ಕೂಟ, ಮುಂಡ್ಕೂರು ಭಾರ್ಗವ ಜೇಸೀಸ್, ಅರಣ್ಯ ಇಲಾಖೆ, ಗ್ರಾಮ ಆರಣ್ಯ ಸಮಿತಿ ಹಾಗೂ ಪಾಲಡ್ಕ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಕಡಂದಲೆ ಹೈಸ್ಕೂಲು ಪರಿಸರದಲ್ಲಿ ವನ ಮಹೋತ್ಸವ ಕಾರ್ಯಕ್ರಮ ನಡೆದಿದೆ. ದ.ಕ. ಹಾಲು ಒಕ್ಕೂಟದ ಮಾರುಕಟ್ಟೆ ಅಧಿಕಾರಿ ಡಾ. ರವಿರಾಜ ಉಡುಪ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಶ್ವದೆಲ್ಲೆಡೆ ತಾಪಮಾನ ಏರಿಕೆಗೆ ಕಾಡು ನಾಶವಾಗುತ್ತಿರುವುದೇ ಮೂಲ ಕಾರಣ. ಇದನ್ನು ಹೋಗಲಾಡಿಸಿ ಶುದ್ಧ ಗಾಳಿ,...
ಕೃಷಿಬಂಟ್ವಾಳಸುದ್ದಿ

FERD ಟ್ರಸ್ಟ್ ವತಿಯಿಂದ ಬರಿಮಾರು ಗ್ರಾಮದ ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ –ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನ ಕಲ್ಲೆಟ್ಟಿ ಬರಿಮಾರು ಗ್ರಾಮ ಹಾಗೂ ಈಇಖಆ ಟ್ರಸ್ಟ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ದೈವಸ್ಥಾನದ ಆವರಣದಲ್ಲಿ ಹಲವಾರು ಔಷದೀಯ ಗಿಡಗಳನ್ನು ನೆಡಲಾಯಿತು. ಜೊತೆಗೆ ದೈವಸ್ಥಾನಕ್ಕೆ ಉಪಯೋಗ ಆಗುವ ಹೂವಿನ ಗಿಡಗಳನ್ನು ಸಹ ನೆಡಲಾಯಿತು. ಸೊರಗೆ, ಸೀತಾ ಅಶೋಕ ನಾಗಸಂಪಿಗೆ, ಬಿಲ್ವಪತ್ರೆ ಪಾರಿಜಾತ ದಾಸವಾಳ, ಕೇಪುಲ, ಸಂಪಿಗೆ, ಪುನರ್ಪುಳಿ ,ಕುಂಟಾಲ್, ನಂದಿ ಬಟ್ಟಲು , ತುಳಸಿ, ಗೋರಂಟಿ, ಕನಕಾಂಬರಿ, ಕಾಡು ಕೇಪುಲ ಬಂಟಕೇಪುಲ, ಗರುಡಪಾತಾಳ,...
ಕೃಷಿಮೂಡಬಿದಿರೆಸುದ್ದಿ

ಪುತ್ತಿಗೆ ಗುತ್ತು ಕಡಂದಲೆ ಪರಾರಿ : ಸಾಂಪ್ರದಾಯಿಕ ನಾಟಿ ಕಾರ್ಯಕ್ರಮಕ್ಕೆ ಚಾಲನೆ – ಕಹಳೆ ನ್ಯೂಸ್

ಕಡಂದಲೆ: ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀ ಧೂಮಾವತಿ ದೈವದ ಜೋಡು ಪೂಕರೆ ಎಳೆಯುವ ಕಂಬಳದ ಗದ್ದೆಯ ಸಾಂಪ್ರದಾಯಿಕ ಏಣೀಲು ಸಾಗುವಳಿ ಕಾರ್ಯಕ್ರಮವು ನಾಟಿ ಮಾಡುವ ಮೂಲಕ ಜು. ೪ರಂದು ಸಂಪ್ರದಾಯದoತೆ ಪೂಜೆ ಪುರಸ್ಕಾರದಿಂದಿಗೆ ನೆರವೇರಿಸಲಾಯಿತು. ಪುತ್ತಿಗೆ ಗುತ್ತು ಕಡಂದಲೆ ಪರಾರಿ ಕೆ.ಪಿ. ಸಂತೋಷ್ ಕುಮಾರ್ ಶೆಟ್ಟಿಯವರು ಈ ಗದ್ದೆಯಲ್ಲಿ ವರ್ಷಂಪ್ರತಿ ಎರಡು ಬೇಸಾಯ ಮಾಡುತ್ತಾ ಪರಂಪರೆಯ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುತ್ತಿಗೆ ಗುತ್ತು ಕಡಂದಲೆ...
ಕೃಷಿದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿಸುಳ್ಯ

ಮೀನು ಕೃಷಿಕರಿಂದ ಉತ್ಪಾದನೆಯಾಗುವ ಎಲ್ಲ ರೀತಿಯ ಮೀನುಗಳನ್ನು ನಿಗಮದಿಂದಲೇ ಖರೀದಿಗೆ ಯೋಜನೆ : ಸಚಿವ ಎಸ್‌. ಅಂಗಾರ – ಕಹಳೆ ನ್ಯೂಸ್

ಸುಳ್ಯ: ಮೀನು ಕೃಷಿಕರಿಂದ ಉತ್ಪಾದನೆಯಾಗುವ ಎಲ್ಲ ರೀತಿಯ ಮೀನುಗಳನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದಲೇ ಖರೀದಿಸಲು ಯೋಜನೆ ರೂಪಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ಹೇಳಿದರು. ಅವರು ರವಿವಾರ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ನಡೆದ ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವೋ ಉದ್ಯೋಗ – ಮನೆ...
ಕೃಷಿದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಶಾಸಕರಾದ ಹರೀಶ್ ಪೂಂಜಾರವರ ನೇತೃತ್ವದಲ್ಲಿ ತೋಟಗಾರಿಕಾ ಮಂತ್ರಿಗಳಾದ ಶ್ರೀ ಮುನಿರತ್ನರವರಿಗೆ ರಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಮನವಿ – ಕಹಳೆ ನ್ಯೂಸ್

ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದ ಹೆಚ್ಚಿನ ರೈತರು ತಮ್ಮ ಜೀವನಾಧಾರಕ್ಕೆ ಅಡಿಕೆಯೊಂದಿಗೆ ರಬ್ಬರ್ ಕೃಷಿಯನ್ನು ಅವಲಂಬಿಸಿದ್ದಾರೆ. ರಬ್ಬರಿನ ಪರ್ಯಾಯ ಕೃಷಿಯಿಂದ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ. ಇತ್ತೀಚಿನ ರಬ್ಬರ್ ಮಾರುಕಟ್ಟೆಯಲ್ಲಿ ಉಂಟಾದ ದರ ಕುಸಿತವು ಕೃಷಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಶಾಸಕರಾದ ಹರೀಶ್ ಪೂಂಜಾರವರ ನೇತೃತ್ವದಲ್ಲಿ ತೋಟಗಾರಿಕಾ ಮಂತ್ರಿಗಳಾದ ಶ್ರೀಮಾನ್ ಮುನಿರತ್ನರವರಿಗೆ ರಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಮನವಿ ಸಲ್ಲಿಸಲಾಯಿತು ಮುಖ್ಯಮಂತ್ರಿ ಗಳೊಂದಿಗೆ ಈ...
1 2 3 4
Page 2 of 4