Saturday, June 13, 2026

ಹೆಚ್ಚಿನ ಸುದ್ದಿ

ಜಿಲ್ಲೆಬೆಳಗಾವಿಸುದ್ದಿಹೆಚ್ಚಿನ ಸುದ್ದಿ

ಕಿತ್ತೂರು ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳು ಸಾವು ಪ್ರಕರಣ: ಸುತ್ತಮುತ್ತಲ ಗ್ರಾಮಗಳಿಗೂ ‘ಗಳಲೆ ರೋಗ’ ಹರಡುವ ಭೀತಿ: ಕಟ್ಟೆಚ್ಚರಕ್ಕೆ ಸೂಚಿಸಿದ ಅರಣ್ಯ ಇಲಾಖೆ – ಕಹಳೆ ನ್ಯೂಸ್

ಬೆಳಗಾವಿ: ಬೆಳಗಾವಿ ಜಿಲ್ಲೆಯ ಭೂತರಾಯನಹಟ್ಟಿ ಗ್ರಾಮದ ಕಿತ್ತೂರು ಚೆನ್ನಮ್ಮ ಕಿರು ಮೃಗಾಲಯದಲ್ಲಿ ಗಳಲೆ ರೋಗಗಿಂದ 31 ಕೃಷ್ಣಮೃಗಗಳು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಪಶುಪಾಲನಾ ಇಲಾಖೆಗೆ ಕಟ್ಟೆಚ್ಚರಕ್ಕೆ ಸೂಚಿಸಿದೆ. ಕತ್ತೂರು ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ ಕಾರಣವಗಿದೆ. ಮೃಗಾಲಯದಲ್ಲಿದ್ದ 38 ಕೃಷ್ಣಮೃಗಗಳಲ್ಲಿ 31 ಕೃಷ್ಣಮೃಗಗಳು ಈ ರೋಗಕ್ಕೆ ಬಲಿಯಾಗಿದೆ. ಮೃಗಾಲಯದಲ್ಲಿರುವ ಉಳಿದ ಪ್ರಾಣಿಗಳಿಗೆ ಗಳಲೆ ರೋಗ ಹರಡದಂತೆ ಮುಂಜಾಗೃತಾ ಕ್ರಮವಾಗಿ ಚಿಕಿತ್ಸೆ, ಮುನ್ನೆಚ್ಚರಿಕೆ ವಹಿಸಲಾಗಿದೆ. ಆದರೆ ಗಳಲೆ...
ಬೆಂಗಳೂರುರಾಜ್ಯಸುದ್ದಿಹೆಚ್ಚಿನ ಸುದ್ದಿ

ರಾಜ್ಯದಲ್ಲಿ ಈ ವರ್ಷ 900 ‘KPS’ ಶಾಲೆ ಆರಂಭಿಸಲು ನಿರ್ಧಾರ : CM ಸಿದ್ದರಾಮಯ್ಯ ಘೋಷಣೆ.! -ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ಈ ವರ್ಷ 900 ಕೆಪಿಎಸ್ ಸಿ ಶಾಲೆ ತೆರೆಯಲು ನಿರ್ಧರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಪಂಡಿತ್ ಜವಾಹರಲಾಲ್ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ 'ರಾಜ್ಯ ಮಟ್ಟದ ಮಕ್ಕಳ ದಿನಾಚರಣೆ ಮತ್ತು ಪೋಷಕರ-ಶಿಕ್ಷಕರ ಮಹಾಸಭೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಭವಿಷ್ಯ ರೂಪಿತ ಆಗುವುದು ವೈಚಾರಿಕ – ವೈಜ್ಞಾನಿಕ ಮನೋಭಾವದ ಮಕ್ಕಳಿಂದ. ಆದ್ದರಿಂದ ಮಕ್ಕಳು ಪ್ರಾಥಮಿಕ...
ಅಂತಾರಾಷ್ಟ್ರೀಯಸುದ್ದಿಹೆಚ್ಚಿನ ಸುದ್ದಿ

ಇಂಡೋನೇಷ್ಯಾದಲ್ಲಿ ಭೂ ಕುಸಿತ, ಇಬ್ಬರ ದುರ್ಮರಣ, 21 ಮಂದಿ ನಾಪತ್ತೆ – ಕಹಳೆ ನ್ಯೂಸ್

ಜಕಾರ್ತ :  ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 21 ಜನರು ಕಾಣೆಯಾಗಿದ್ದಾರೆ. ಕಾಣೆಯಾದ 21 ಜನರಿಗಾಗಿ ರಕ್ಷಣಾ ಕಾರ್ಯಕರ್ತರು ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ.ಈ ಪ್ರದೇಶದಲ್ಲಿ ಹಲವಾರು ದಿನಗಳ ಭಾರೀ ಮಳೆಯಿಂದಾಗಿ ಇಂಡೋನೇಷ್ಯಾದ ಮಧ್ಯ ಜಾವಾ ಪ್ರಾಂತ್ಯದ ಮೂರು ಹಳ್ಳಿಗಳಲ್ಲಿ ಡಜನ್‌ಗಟ್ಟಲೆ ಮನೆಗಳಿಗೆ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಂತಹ ಸಮಯದಲ್ಲಿ ಬಲಿಪಶುಗಳನ್ನು ಹುಡುಕುವಲ್ಲಿ ಅಸ್ಥಿರ ನೆಲದ ಪರಿಸ್ಥಿತಿಗಳು ಶೋಧ ಮತ್ತು...
ಉಡುಪಿಜಿಲ್ಲೆಸುದ್ದಿಹೆಚ್ಚಿನ ಸುದ್ದಿ

ನ. 28: ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ಭೇಟಿ… ಜಿಲ್ಲಾಡಳಿತದಿಂದ ಪೂರ್ವಭಾವಿ ಸಭೆ – ಕಹಳೆ ನ್ಯೂಸ್

ಮಣಿಪಾಲ : ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೃಹತ್ ‌ ಗೀತೋತ್ಸವದ ನಿಮಿತ್ತ ನ . 28 ರಂದು ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬರಲಿದ್ದು , ಆ ಸಂಬಂಧ ಜಿಲ್ಲಾಡಳಿತ , ಪೊಲೀಸ್ ‌ ಇಲಾಖೆಯಿಂದ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳ ಸಭೆ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು . ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ...
ಉಡುಪಿಕುಂದಾಪುರಜಿಲ್ಲೆಸುದ್ದಿಹೆಚ್ಚಿನ ಸುದ್ದಿ

ಕೊಲ್ಲೂರು ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ನಕಲಿ ‘ವೆಬ್ ಸೈಟ್’ ತೆರೆದು ವಂಚನೆ.! – ಕಹಳೆ ನ್ಯೂಸ್

ಕುಂದಾಪುರ : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಓಪನ್ ಮಾಡಿ ವಂಚನೆ ಎಸಗಿರುವ ಘಟನೆ ನಡೆದಿದ್ದು, ದೂರು ದಾಖಲಾಗಿದೆ. ಹೌದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೊಠಡಿ ಕಾಯ್ದಿರಿಸಲು ನಕಲಿ ವೆಬ್ ಸೈಟ್ ತಯಾರಿಸಿ ವಂಚನೆ ಮಾಡಿರುವ ಘಟನೆ ನಡೆದಿದ್ದು, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೇವಸ್ಥಾನದ ಅಧಿಕೃತ ವೆಬ್ ಸೈಟ್ https://karnatakatemplesaccommodation.com ಬದಲಿಗೆ karnatakatempleaccommodation ಎಂಬ ಹೆಸರಿನ ಅನಧಿಕೃತ...
ರಾಜ್ಯಸುದ್ದಿಹೆಚ್ಚಿನ ಸುದ್ದಿ

ನ 19 ರಂದು ಬಾಲ್ಯವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಅಕ್ಕ ಕಾರ್ಯಪಡೆಗೆ ಚಾಲನೆ – ಕಹಳೆ ನ್ಯೂಸ್

ಬೆಂಗಳೂರು. - ಬಾಲ್ಯವಿವಾಹ ತಡೆಗಟ್ಟುವ ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ರಚಿಸಲಾಗಿರುವ ಅಕ್ಕ ಪಡೆಗೆ ನ .19 ರಂದು ಚಾಲನೆ ನೀಡಲಾಗುತ್ತಿದ್ದು, ಪೂರ್ವಭಾವಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸದಾಶಿವನಗರದಲ್ಲಿರುವ ಡಾ.ಜಿ.ಪರಮೇಶ್ವರ್‌ ಅವರ ಮನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಭೇಟಿ ನೀಡಿದರು....
ಜಿಲ್ಲೆಮಂಡ್ಯಸುದ್ದಿಹೆಚ್ಚಿನ ಸುದ್ದಿ

ಮಂಡ್ಯದಲ್ಲಿ ಅಕ್ರಮವಾಗಿ 50ಕ್ಕೂ ಹೆಚ್ಚು ದನದ ಕರುಗಳನ್ನು ಮಾರಾಟಕ್ಕೆ ಯತ್ನ – ಕಹಳೆ ನ್ಯೂಸ್

ಮಂಡ್ಯ: ಜಿಲ್ಲೆಯಲ್ಲಿ ಅಕ್ರಮವಾಗಿ ಕರುಗಳ ಮಾರಾಟಕ್ಕೆ ಗ್ಯಾಂಗ್ ಮುಂದಾಗಿತ್ತು. ವಿಷಯ ತಿಳಿದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹೋಗ್ತಿದ್ದಂತೆ ಕರುಗಳನ್ನ ಬಿಟ್ಟು ಎಸ್ಕೇಪ್ ಆಗಿರುವಂತ ಘಟನೆ ತೆಂಡೆಕೆರೆ ಗ್ರಾಮದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ‌ ತಾಲೂಕಿನ ತೆಂಡೆಕೆರೆ ಗ್ರಾಮದ ಸಂತೆಯಲ್ಲಿ 50 ಕ್ಕೂ ಹೆಚ್ಚು ಕರುಗಳನ್ನ ಖರೀದಿಸಿ ಕಟ್ಟಡವೊಂದರಲ್ಲಿ ಕೂಡಿಟ್ಟದದ್ದರು. ವಿಷಯ ತಿಳಿದ ಮೈಸೂರು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಹೀಗೆ ದಾಳಿ ಮಾಡ್ತಿದ್ದಂತೆ ಅಕ್ರಮ ಗೋ...
ಕೇರಳರಾಜ್ಯಹೆಚ್ಚಿನ ಸುದ್ದಿ

ಕೇರಳ: ಕ್ಯಾನ್ಸರ್ ರೋಗಿಗಳಿಗೆ ಉಚಿತ ಬಸ್‌ ಪ್ರಯಾಣ ಯೋಜನೆ ಘೋಷಿಸಿದ ಕೆಎಸ್‌ಆರ್‌ಟಿಸಿ – ಕಹಳೆ ನ್ಯೂಸ್

ತಿರುವನಂತಪುರ: ಕ್ಯಾನ್ಸರ್‌ ರೋಗಿಗಳಿಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು(ಕೆಎಸ್‌ಆರ್‌ಟಿಸಿ) ಉಚಿತ ಬಸ್‌ ಪ್ರಯಾಣ ಯೋಜನೆ ಘೋಷಿಸಿದೆ. ಕ್ಯಾನ್ಸರ್‌ ರೋಗಿಗಳು ಚಿಕಿತ್ಸೆಗಾಗಿ ರಾಜ್ಯದಲ್ಲಿನ ಯಾವುದೇ ಆಸ್ಪತ್ರೆಗೆಗಳಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಸಾಮಾನ್ಯ ಬಸ್‌ನಿಂದ ಹಿಡಿದು ವೇಗದ ಬಸ್‌ನಲ್ಲಿಯೂ ಕೀಮೊ ತೆರಪಿ, ರೇಡಿಯೇಶನ್ ಮುಂತಾದ ಕ್ಯಾನ್ಸರ್‌ ಚಿಕಿತ್ಸೆಗಾಗಿ ರೋಗಿಗಳು ಉಚಿತವಾಗಿ ಪ್ರಯಾಣಿಸಬಹುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಸ್ಥ ಪ್ರಮೋಜ್ ಶಂಕರ್ ಹೇಳಿದ್ದಾರೆ. ಯೋಜನೆಗೆ ಅರ್ಹರಾಗಿರುವ...
1 2 3 4 5 174
Page 3 of 174