Tuesday, May 21, 2024
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಾಲ್ಯ ವಿವಾಹಕ್ಕೆ ಉತ್ತೇಜಿಸಿರುವ ಪ್ರಕರಣ: ಪೂರ್ಣ ಪ್ರಮಾಣದ ತನಿಖೆ ನಡೆಸುವುದಕ್ಕೂ ಮುನ್ನವೇ ಮೇಲ್ನೋಟದ ಕೇಸು ಕಂಡು ಬರದ ಕಾರಣ ಕೇಸಿನಿಂದ ವಿಮುಕ್ತಿಯ ವಿಶೇಷ ಪರಿಹಾರವನ್ನು ನೀಡಿ ಆರೋಪಿಗಳನ್ನು ಖುಲಾಸೆಗೊಳಿಸಿದ ಪುತ್ತೂರು ನ್ಯಾಯಾಲಯ–ಕಹಳೆ ನ್ಯೂಸ್

ಪುತ್ತೂರು : ಸಿಡಿಪಿಓ ಪುತ್ತೂರು ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶಾಂತಿ ಟಿ ಹೆಗಡೆ ರವರು ನೀಡಿದ ದೂರಿನ ಆಧಾರದಲ್ಲಿ ಬಾಲ್ಯ ವಿವಾಹಕ್ಕೆ ಉತ್ತೇಜಿಸಿದ್ದಾರೆ ಎನ್ನಲಾದ ಆರೋಪದಡಿಯಲ್ಲಿ ಪ್ರಕರಣ ಎದುರಿಸುತ್ತಿದ್ದ ಕೆಮ್ಮಿಂಜೆ ನಿವಾಸಿಗಳಾದ ಯು ಟಿ ಅಬ್ದುಲ್ ಅಜೀಜ್ ಮತ್ತು ಇತರರನ್ನು ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಪುತ್ತೂರು, ಸದ್ರಿ ಪ್ರಕರಣದಿಂದ ಖುಲಾಸೆ ಮಾಡಿರುತ್ತಾರೆ.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣದ ಸಾರಾಂಶ: ಪಿರ್ಯಾದಿದಾರರಾದ ಶ್ರೀಮತಿ ಶಾಂತಿ ಟಿ ಹೆಗಡೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 14/11/2018 ರಂದು ಉಪ್ಪಿನಂಗಡಿ ನೆಕ್ಕಿಲಾಡಿ ಆದರ್ಶ ನಗರದ ಸುಲೇಮಾನ್ ರವರ ಮಗನಾದ ಮಹಮದ್ ಸಾಧಿಕ್ ಎಂಬಾತನ ಜೊತೆ ಪುತ್ತೂರು ಕೂರ್ನಡ್ಕ ಮಸೀದಿಯ ಮೌಲಿಯಾದ ಬಂಬ್ರಾನ್ ವಸ್ತಾದ್ ರವರು ಒಂದನೇ ಆರೋಪಿಯ ಮನೆಯಲ್ಲಿ ಅಪ್ರಾಪ್ತ ಬಾಲಕಿ ಮರಿಯಂ ಶಿಫಾನ ಇವರ ನಿಖಾ ಶಾಸ್ತ್ರವನ್ನು ನೆರವೇರಿಸಿ ಬಾಲ್ಯ ವಿವಾಹವನ್ನು ನಡೆಸಿರುತ್ತಾರೆ ಎಂಬಿತ್ಯಾದಿಯಾಗಿ ಬಾಲಕಿಯ ಮಲತಾಯಿಯ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಮಹಿಳಾ ಪೊಲೀಸು ಠಾಣೆಗೆ ದೂರನ್ನು ಸಲ್ಲಿಸಿರುತ್ತಾರೆ.

ಜಾಹೀರಾತು
ಜಾಹೀರಾತು

ಪ್ರಕರಣವನ್ನು ಕೈಗೆತ್ತಿಕೊಂಡ ತನಿಕಾಧಿಕಾರಿಗಳು ತನಿಖೆ ನಡೆಸಿ ಅಂತಿಮ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಈ ನಡುವೆ ಆರೋಪಿಗಳು ತಮ್ಮ ಪರ ವಕೀಲರ ಮುಖಾಂತರ ಸದ್ರಿ ಪ್ರಕರಣದಿಂದ ವಿಮೋಚನೆ (ಡಿಸ್ಚಾರ್ಜ್ ) ಮಾಡಲು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಇದಕ್ಕೆ ಉತ್ತರವಾಗಿ ಸರಕಾರಿ ಅಭಿಯೋಜಕರು ತಕರಾರು ಸಲ್ಲಿಸಿರುತ್ತದೆ.

ಜಾಹೀರಾತು

ವಾದ ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಲಯವು ಸದ್ರಿ ಪ್ರಕರಣದಲ್ಲಿ ಆರೋಪಿಸಲಾದ ಆರೋಪವು ಆಧಾರ ರಹಿತವಾದದ್ದು ಮತ್ತು ಆ ದಿನ ದೂರಿನಂತೇ ಕೇವಲ ನಿಶ್ಚಿತಾರ್ಥ ಮಾತ್ರ ನೆರವೇರಿದ್ದು ಯಾವುದೇ ಕಾನೂನುಬಾಹಿರ ಬಾಲ್ಯ ವಿವಾಹ ನೇರವೇರಿರುವುದಿಲ್ಲ , ಮದುವೆ ನಡೆದಿದೆ ಎನ್ನುವುದಕ್ಕೆ ಹಾಲ್ ನಲ್ಲೂ ದಾಖಲೆ ಇರುವುದಿಲ್ಲ ಹಾಗೂ ಅಭಿಯೋಜನೆಯು ಸದರಿ ಪ್ರಕರಣವನ್ನು ಸಂಶಯಾತೀತವಾದದ್ದು ಎಂದು ನಿರೂಪಿಸಲು ವಿಫಲವಾಗಿರುತ್ತದೆ, ಆದ್ದರಿಂದ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಅರ್ಚನಾ ಕೆ ಉನ್ನಿತ್ತನ್ ರವರು ಆರೋಪಿಗಳಾದ ಹಾಜಿ ಯುಟಿ ಅಬ್ದುಲ್ ಅಜೀಜ್, ಹಾಜಿರ, ಇಬ್ರಾಹಿಂ ಚಾಪಳ್ಳ, ಸುಲೇಮಾನ್, ಅಪ್ಸಾ, ಮೊಹಮ್ಮದ್ ಸಾಧಿಕ್ ರವರನ್ನು ಸದ್ರಿ ಪ್ರಕರಣದಿಂದ (ಡಿಸ್ಚಾರ್ಜ್) ವಿಮೋಚನೆ ಗೊಳಿಸಿರುತ್ತದೆ. ಸದ್ರಿ ಆರೋಪಿಗಳ ಪರವಾಗಿ ಶ್ರೀ. ಮಹೇಶ್ ಕಜೆರವರು ವಾದ ಮಂಡಿಸಿರತ್ತಾರೆ.