Tuesday, May 21, 2024
ಅಂಕಣ

“ಸಾಧನೆಯ ಸರದಾರನಿಗೆ ಈಗ ಡಾಕ್ಟರೇಟ್ ಕಿರೀಟ” – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು

“ರಂಗಮನೆಯ ರಂಗ ಮಾಂತ್ರಿಕ
ಸಕಲ ಕಲಾ ಸಾಧಕ
ಜೀವನ ನೌಕೆಯ ನಾವಿಕ
ಇಂದು ಡಾಕ್ಟರೇಟ್ ಪದವಿಗೆ ಮಾಲೀಕ”

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು

ತಮ್ಮ ಅದ್ಭುತ ಕೌಶಲ್ಯಗಳಿಂದ “ರಂಗ ಮಾಂತ್ರಿಕ ” ಎಂದೇ ಮನೆ ಮಾತಾಗಿರುವ ಜೀವನ್ ರಾಂ ಸುಳ್ಯ ಇವರು ಕರ್ನಾಟಕ ಜಾನಪದ ಅಕಾಡೆಮಿ ನೀಡುವ 2022ನೇ ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಆಗಿರುವುದು ನಮಗೆಲ್ಲ ಸಂತಸದ ಸಂಗತಿ.
ಜೀವನ್ ರಾಂ ಸುಳ್ಯ ಇವರ ಹೆಸರನ್ನ ನಾನು ಬಹಳ ಬಾರಿ ಕೇಳಿದ್ದೆ ಆದರೆ ಅವರನ್ನು ಸಾಕ್ಷಾತ್ ಕಾಣುವ ಭಾಗ್ಯ ಸಿಕ್ಕಿದ್ದು ಆಳ್ವಾಸ್ ವಿದ್ಯಾರ್ಥಿ ಸಿರಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದ ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ, ಆ ದಿನದಿಂದ ಈ ಕ್ಷಣದವರೆಗೆ ಜೀವನ್ ರಾಂ ಸುಳ್ಯ ಸರ್ ನನ್ನ ಎಲ್ಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸ್ಪೂರ್ತಿಯಾಗಿ ಮಾರ್ಗದರ್ಶನ ನೀಡುತ್ತಿರುವ ಆದರ್ಶ ವ್ಯಕ್ತಿ. ಪ್ರತೀ ಬಾರಿ ಅವರನ್ನ ಕಂಡಾಗ ಮನದಲ್ಲಿ ಮೂಡುವ ಆಸೆ ಒಂದೇ ಅವರ ಶಿಷ್ಯೆಯಾಗಿ ನಾನೂ ರಂಗವೇರಬೇಕು ಅವರು ಮೆಚ್ಚುವಂತೆ ಅಭಿನಯಿಸಬೇಕು ಎಂದು.

ಕಲೆ ಸಾಹಿತ್ಯ ಸಾಂಸ್ಕೃತಿಕ ರಂಗದಲ್ಲಿ ಇವರ ಸಾಧನೆ ಅಗಾಧವಾದದ್ದು. ಇವರು ನಿರ್ದೇಶಿಸಿರುವ ಪ್ರತಿಯೊಂದು ನಾಟಕ ವಿಭಿನ್ನ ಮತ್ತು ವಿಶೇಷತೆಯಿಂದ ಕೂಡಿರುತ್ತದೆ . ತನ್ನ ನಾಟಕದಲ್ಲಿ ತನ್ನದೇ ಆದ ವಿಶೇಷ ರಂಗ ಸಂಯೋಜನೆ, ರಂಗ ವಿನ್ಯಾಸ , ವಸ್ತ್ರ ವಿನ್ಯಾಸವನ್ನು ಪ್ರಯೋಗ ಮಾಡುತ್ತಾ ಸಹಸ್ತ್ರಾರು ಅಭಿಮಾನಿಗಳ ಬಳಗವನ್ನು ಸಂಪಾದಿಸಿಕೊಂಡವರು.
ಸಾವಿರಾರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಿಗಾಗಿ ಕಲಾ ವೇದಿಕೆಯನ್ನು ಸೃಷ್ಟಿಸಿದವರು. ಜನಜಾಗೃತಿಗಾಗಿ ಅನೇಕ ಬೀದಿ ನಾಟಕಗಳನ್ನು ರಚಿಸಿ ನಿರ್ದೇಶನ ಮಾಡಿ ನಟಿಸಿದವರು. ರಂಗಭೂಮಿ, ಯಕ್ಷಗಾನ, ಕಲೆ, ಸಂಗೀತ, ಸಾಹಿತ್ಯ ,ಜಾದು ಹೀಗೆ
ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಬಹುಮುಖ ಪ್ರತಿಭೆ.

ಪ್ರಸ್ತುತ ಯಕ್ಷ ರಂಗಾಯಣ ಕಾರ್ಕಳದ ಪ್ರಥಮ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು .ರಂಗದಶಾವತಾರಿ, ರಂಗಮಾತ್ರಿಕ, ರಂಗ ಮಾಣಿಕ್ಯ, ಸರಸ್ವತಿ ಪುರಸ್ಕಾರ,ಕರ್ನಾಟಕ ನಾಟಕ ಅಕಾಡೆಮಿ ಸಿ.ಜಿ.ಕೆ ಪುರಸ್ಕಾರ, ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು. ಇವರ ಸಾಧನೆಗೆ ಕಿರೀಟ ಎಂಬಂತೆ ಇದೀಗ ಗೌರವ ಡಾಕ್ಟರೇಟ್ ಪದವಿ ದೊರೆತಿದೆ.
ಇಂದು ಹಾವೇರಿ ಜಿಲ್ಲೆಯ ಶಿಂಗಾವಿಯಲ್ಲಿ ಕರ್ನಾಟಕ ಜಾನಪದ ವಿ.ವಿ ಯ ಆರನೇ ಘಟಕೋತ್ಸವದ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಠಾವರ್ ಚಂದ್ ಗೆಹ್ಲೋಟ್ ಇವರಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿರುವ ಜೀವನ್ ರಾಂ ಸುಳ್ಯ ಇವರಿಗೆ ಮುಂದೆ ರಾಷ್ಟ್ರಮಟ್ಟದ ಗೌರವವೂ ಲಭಿಸುವಂತಾಗಲಿ ಎಂಬ ಆಶಯ ನನ್ನದು.

ಅನನ್ಯ ಬೆಳ್ತಂಗಡಿ
ಶ್ರೀ ಧ ಮ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಉಜಿರೆ.

“ರಂಗಮನೆಯ ರಂಗ ಮಾಂತ್ರಿಕ
ಸಕಲ ಕಲಾ ಸಾಧಕ
ಜೀವನ ನೌಕೆಯ ನಾವಿಕ
ಇಂದು ಡಾಕ್ಟರೇಟ್ ಪದವಿಗೆ ಮಾಲೀಕ”

ತಮ್ಮ ಅದ್ಭುತ ಕೌಶಲ್ಯಗಳಿಂದ “ರಂಗ ಮಾಂತ್ರಿಕ ” ಎಂದೇ ಮನೆ ಮಾತಾಗಿರುವ ಜೀವನ್ ರಾಂ ಸುಳ್ಯ ಇವರು ಕರ್ನಾಟಕ ಜಾನಪದ ಅಕಾಡೆಮಿ ನೀಡುವ 2022ನೇ ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಆಗಿರುವುದು ನಮಗೆಲ್ಲ ಸಂತಸದ ಸಂಗತಿ.
ಜೀವನ್ ರಾಂ ಸುಳ್ಯ ಇವರ ಹೆಸರನ್ನ ನಾನು ಬಹಳ ಬಾರಿ ಕೇಳಿದ್ದೆ ಆದರೆ ಅವರನ್ನು ಸಾಕ್ಷಾತ್ ಕಾಣುವ ಭಾಗ್ಯ ಸಿಕ್ಕಿದ್ದು ಆಳ್ವಾಸ್ ವಿದ್ಯಾರ್ಥಿ ಸಿರಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದ ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ, ಆ ದಿನದಿಂದ ಈ ಕ್ಷಣದವರೆಗೆ ಜೀವನ್ ರಾಂ ಸುಳ್ಯ ಸರ್ ನನ್ನ ಎಲ್ಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸ್ಪೂರ್ತಿಯಾಗಿ ಮಾರ್ಗದರ್ಶನ ನೀಡುತ್ತಿರುವ ಆದರ್ಶ ವ್ಯಕ್ತಿ. ಪ್ರತೀ ಬಾರಿ ಅವರನ್ನ ಕಂಡಾಗ ಮನದಲ್ಲಿ ಮೂಡುವ ಆಸೆ ಒಂದೇ ಅವರ ಶಿಷ್ಯೆಯಾಗಿ ನಾನೂ ರಂಗವೇರಬೇಕು ಅವರು ಮೆಚ್ಚುವಂತೆ ಅಭಿನಯಿಸಬೇಕು ಎಂದು.

ಕಲೆ ಸಾಹಿತ್ಯ ಸಾಂಸ್ಕೃತಿಕ ರಂಗದಲ್ಲಿ ಇವರ ಸಾಧನೆ ಅಗಾಧವಾದದ್ದು. ಇವರು ನಿರ್ದೇಶಿಸಿರುವ ಪ್ರತಿಯೊಂದು ನಾಟಕ ವಿಭಿನ್ನ ಮತ್ತು ವಿಶೇಷತೆಯಿಂದ ಕೂಡಿರುತ್ತದೆ . ತನ್ನ ನಾಟಕದಲ್ಲಿ ತನ್ನದೇ ಆದ ವಿಶೇಷ ರಂಗ ಸಂಯೋಜನೆ, ರಂಗ ವಿನ್ಯಾಸ , ವಸ್ತ್ರ ವಿನ್ಯಾಸವನ್ನು ಪ್ರಯೋಗ ಮಾಡುತ್ತಾ ಸಹಸ್ತ್ರಾರು ಅಭಿಮಾನಿಗಳ ಬಳಗವನ್ನು ಸಂಪಾದಿಸಿಕೊಂಡವರು.
ಸಾವಿರಾರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರಿಗಾಗಿ ಕಲಾ ವೇದಿಕೆಯನ್ನು ಸೃಷ್ಟಿಸಿದವರು. ಜನಜಾಗೃತಿಗಾಗಿ ಅನೇಕ ಬೀದಿ ನಾಟಕಗಳನ್ನು ರಚಿಸಿ ನಿರ್ದೇಶನ ಮಾಡಿ ನಟಿಸಿದವರು. ರಂಗಭೂಮಿ, ಯಕ್ಷಗಾನ, ಕಲೆ, ಸಂಗೀತ, ಸಾಹಿತ್ಯ ,ಜಾದು ಹೀಗೆ
ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಬಹುಮುಖ ಪ್ರತಿಭೆ.

ಪ್ರಸ್ತುತ ಯಕ್ಷ ರಂಗಾಯಣ ಕಾರ್ಕಳದ ಪ್ರಥಮ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇವರು .ರಂಗದಶಾವತಾರಿ, ರಂಗಮಾತ್ರಿಕ, ರಂಗ ಮಾಣಿಕ್ಯ, ಸರಸ್ವತಿ ಪುರಸ್ಕಾರ,ಕರ್ನಾಟಕ ನಾಟಕ ಅಕಾಡೆಮಿ ಸಿ.ಜಿ.ಕೆ ಪುರಸ್ಕಾರ, ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು.
ಇವರ ಸಾಧನೆಗೆ ಕಿರೀಟ ಎಂಬಂತೆ ಇದೀಗ ಗೌರವ ಡಾಕ್ಟರೇಟ್ ಪದವಿ ದೊರೆತಿದೆ.