Wednesday, May 22, 2024
ಕೊಡಗುಮಡಿಕೇರಿರಾಜ್ಯಸುದ್ದಿ

ಕೊಡಗಿನ ಪೊನ್ನಂಪೇಟೆಯಲ್ಲಿ ಹಿಂದೂ ವ್ಯಾಪಾರಿಗಳ ಸೋಗಿನಲ್ಲಿ ಬಂದ ಮುಸ್ಲಿಂ ವ್ಯಾಪಾರಿಗಳು ; ಹಿಂದೂಗಳ ನಕಲಿ ಆಧಾರ್ ಕಾರ್ಡ್​ ಬಳಸಿ, ವ್ಯಾಪಾರಕ್ಕೆ ಅನುಮತಿ ಪಡೆದ ಮುಸ್ಲಿಂ ವ್ಯಾಪಾರಿಗಳು..! ಹಿಂದೂ ಕಾರ್ಯಕರ್ತರು ಆಕ್ರೋಶ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು

ಕೊಡಗು: ರಾಜ್ಯ ವಿವಿಧೆಡೆ ಜಾತ್ರಾ ಮಹೋತ್ಸವಗಳು ಹತ್ತಿರುವಾಗುತ್ತಿದ್ದಂತೆ ಮತ್ತೆ ಧರ್ಮ ಸಂಘರ್ಷ ಆರಂಭವಾಗಿದೆ. ದೇವಾಲಯದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬಾರು ಎಂದು ಹಿಂದೂಪರ ಸಂಘಟನೆಗಳಿಂದ ಆಗ್ರಹ ಕೇಳಿ ಬಂದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು

ಇದೀಗ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಹರಿಹರ ಸಬ್ರಹ್ಮಣ್ಯ ದೇವಾಲಯದ ಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ವಹಿವಾಟುಗಳಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಕೊಡಗಿನಲ್ಲಿ ಧರ್ಮಸಂಘರ್ಷ ಭುಗಿಲೆದ್ದಿದೆ.

ಮುಸ್ಲಿಂ ವ್ಯಾಪಾರಿಗಳು ಹಿಂದೂ ವ್ಯಾಪಾರಿಗಳ ಸೋಗಿನಲ್ಲಿ ಬಂದು ವ್ಯಾಪರ ನಡೆಸಿದ್ದಾರೆ. ಹಿಂದೂಗಳ ನಕಲಿ ಆಧಾರ್ ಕಾರ್ಡ್​ ಬಳಸಿ, ವ್ಯಾಪಾರ ನಡೆಸಲು ಅನುಮತಿ ಪಡೆದುಕೊಂಡಿದ್ದರು. ಹಿಂದೂಪರ ಸಂಘಟನೆಗಳ ಸೂಚನೆಯ ಮೇರಗೂ ನಕಲಿ ಕಾರ್ಡ್​​ ಬಳಲಿ ವ್ಯಾಪಾರ ಮಾಡಿರುವುದು ಹಿಂದೂಪರ ಸಂಘಟನೆಗಳ ಗಮನಕ್ಕೆ ಬಂದಿದೆ. ಇದರಿಂದ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪೊನ್ನಂಪೇಟೆಯ ಹರಿಹರ ಸುಬ್ರಹ್ಮಣ್ಯ ದೇವಾಲಯದ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಅನ್ಯಕೋಮಿನ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿ, ನಾಲ್ಕು ದಿನಗಳ ಹಿಂದೆ ಬ್ಯಾನರ್ ಅಳವಡಿಸಿದ್ದರು. ಆದರೆ ಕೆಲವು ವ್ಯಾಪಾರಿಗಳು ಮಾತ್ರ ನಕಲಿ ಕಾರ್ಡ್​ ಬಳಸಿ ವ್ಯಾಪಾರ ಮಾಡಿ, ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದಿದ್ದಾರೆ