Wednesday, May 1, 2024
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ಸ್ಪರ್ಧೆ ಸೋಲಿನ ಪಾಠವೇ ಯಶಸ್ಸಿಗೆ ಮೆಟ್ಟಿಲು: ಶ್ರೀನಿವಾಸ ಪೈ- ಕಹಳೆ ನ್ಯೂಸ್

ಪುತ್ತೂರು: ಕಾಲೇಜಿನಲ್ಲಿ ಏರ್ಪಡಿಸುವ ಸ್ಪರ್ಧೆಗಳು ವ್ಯಕ್ತಿತ್ವ ವಿಕಸನಕ್ಕೆ ಒಂದು ಅವಕಾಶ. ಬಹುಮಾನ ಸಿಗದೇ ಇರುವವರು ಬೇಸರ ಮಾಡಿಕೊಳ್ಳದೆ, ಇನ್ನಷ್ಟು ಪ್ರಯ್ನಗಳನ್ನು ನಡೆಸಿ ಮುಂದೆ ಬಹುಮಾನಗಳಿಸಿಕೊಳ್ಳುವ ಹಂತಕ್ಕೇರಬೇಕು. ಸೋಲುಗಳಿಂದ ಪಾಠ ಕಲಿತು, ತಪ್ಪುಗಳನ್ನು ಅರಿತು ಸರಿಪಡಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಕಾಲೇಜಿನ ವಿಜ್ಞಾನ ಸಂಘ ಹಾಗೂ ಐಕ್ಯುಎಸಿ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ವಿಜ್ಞಾನ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಸೋಮವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು


ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿ.ಜಿ.ಭಟ್ ಮಾತನಾಡಿ, ವಿಜ್ಞಾನದ ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸುವ ಸಾಮರ್ಥ್ಯ ಹೊಂದಿದ್ದು ಅದರ ಸದುಪಯೋಗ ಆಗಿರುವುದು ಕಾರ್ಯಕ್ರಮ ಆಯೋಜನೆಯಲ್ಲಿ ಕಂಡುಬರುತ್ತದೆ. ಇದು ಎಲ್ಲರಿಗೂ ಮಾದರಿಯಾಗಲಿ. ವಿದ್ಯಾರ್ಥಿಗಳು ತಮ್ಮ ಹಿರಿಯರ ಸಾಧನೆಗಳನ್ನು ನೋಡಿ ಪ್ರೇರಿತರಾಗಿ ತಮ್ಮ ಜೀವನದಲ್ಲಿಯೂ ಏನಾದರೂ ಉನ್ನತ ಗುರಿ ಇಟ್ಟುಕೊಂಡು ಅದನ್ನು ಪಡೆಯುವಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಹುಮಾನ
ತೃತೀಯ ಬಿಎಸ್ಸಿ ವಿದ್ಯಾರ್ಥಿಗಳು ದ್ವಿತೀಯ ಮತ್ತು ಪ್ರಥಮ ಬಿಎಸ್ಸಿ ವಿದ್ಯಾರ್ಥಿಗಳಿಗೆ ಒಟ್ಟು ೨೦ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ದ್ವಿತೀಯ ಬಿಎಸ್ಸಿ ‘ಡಿ’ವಿಭಾಗ ಬಹುಮಾನವನ್ನು ಪಡೆದುಕೊಂಡರು.

ಜಾಹೀರಾತು
ಜಾಹೀರಾತು

ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ರ‍್ಯಾಂಕ್ ವಿಜೇತ ಬಿಎಸ್ಸಿ ವಿದ್ಯಾರ್ಥಿಗಳಾದ ರೂಪಶ್ರೀ ಮತ್ತು ಮನ್ವಿತಾ ಅವರನ್ನು ಗೌರವಿಸಲಾಯಿತು. ಈ ವರ್ಷ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿನಿಯರಾದ ಪ್ರಿಯಾ ಡಿ. ಮತ್ತು ಅಂಕಿತಾ ವಿ.ಕೆ. ಅವರನ್ನು ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು

ಅನಘಾ ಎಂ. ಪ್ರಾರ್ಥಿಸಿದರು. ಸಹನಾ ರೈ ಸ್ವಾಗತಿಸಿದರು. ವಿಜ್ಞಾನ ಸಂಘದ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ. ಎನ್. ಪ್ರಸ್ತಾವನೆಗೈದರು. ಗೌರವಾರ್ಪಣೆ ಕಾರ್ಯಕ್ರಮವನ್ನು ಈಶ್ವರ ಪ್ರಸಾದ್ ನಿರ್ವಹಿಸಿದರು. ವಿಜ್ಞಾನ ಸಂಘದ ಅಧ್ಯಕ್ಷೆ ಆಶಾದೇವಿ ಕೆ.ಎಸ್. ವಂದಿಸಿದರು. ಸುನಯನ ಎ.ಜಿ. ಕಾರ್ಯಕ್ರಮ ನಿರೂಪಿಸಿದರು.