Saturday, June 1, 2024
ದಕ್ಷಿಣ ಕನ್ನಡಮಂಗಳೂರುಶಿಕ್ಷಣಸುದ್ದಿ

‘ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ರಜತ ಮಹೋತ್ಸವದ ನಿಮಿತ್ತ ಮಂಗಳೂರಿನಲ್ಲಿ ವರ್ಧಂತ್ಯುತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಮಂಗಳೂರು : ಕೂಟಕ್ಕಲ ಅಡಿಟೋರಿಯಮ್, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ, ಕೊಡಿಯಾಲ್ ಬೈಲ್ ನಲ್ಲಿ `ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತ’ದ ರಜತ ಮಹೋತ್ಸವದ ನಿಮಿತ್ತ ವರ್ಧಂತ್ಯುತ್ಸವ ಕಾರ್ಯಕ್ರಮವು ಜರುಗಿತು.

ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಿನ್ನಿಗೋಳಿಯ ಶ್ರೀ ಶಕ್ತಿದರ್ಶನ ಆಶ್ರಮದ ಗುರುಗಳಾದ ಪಪೂ ದೇವಬಾಬರವರು ಈ ಕಾರ್ಯಕ್ರಮಕ್ಕೆ ಬರಲು ಅವಕಾಶ ಸಿಕ್ಕಿರುವ ಕುರಿತು ಸಂತಸವನ್ನು ವ್ಯಕ್ತ ಪಡಿಸಿದರು. ಹಿಂದೂಗಳಲ್ಲಿ ರಾಣಾ ಪ್ರತಾಪರಂತಹ ವೀರತೆ , ರಾಜಾ ವಿಕ್ರಮಾದಿತ್ಯರ ಧೀರತೆ ಮತ್ತು ಹಿಂದುತ್ವವನ್ನು ಜನರಲ್ಲಿ ಸನಾತನ ಪತ್ರಿಕೆಯು ಬಿಂಬಿಸುತ್ತಿದೆ. ಪ್ರತಿಯೊಬ್ಬರಿಗೂ ಮತ್ತು ಮುಂದಿನ ಪೀಳಿಗೆಗೆ ಸಂಸ್ಕಾರವನ್ನು ಸನಾತನ ಪ್ರಭಾತ ಪತ್ರಿಕೆಯು ನೀಡುತ್ತಿದೆ ಎಂದು ಪಪೂ ದೇವಬಾಬಾ ಇವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮವನ್ನು ಶಂಖನಾದ , ದೀಪಪ್ರಜ್ವಲನೆ ಮತ್ತು ವೇದಘೋಷದೊಂದಿಗೆ ಪ್ರಾರಂಭಿಸಲಾಯಿತು. ಸನಾತನ ಪ್ರಭಾತದ ವಿಶೇಷ ವಾಚಕರಿಗೆ ಸನ್ಮಾನಿಸಲಾಯಿತು. ವಾಚಕರು ಅವರ ಅನುಭವಗಳನ್ನು ಉತ್ಸಾಹದಿಂದ ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ನೂರೈವತ್ತಕ್ಕೂ ಹೆಚ್ಚು ಸನಾತನ ಪ್ರಭಾತದ ವಾಚಕರು , ಜಾಹೀರಾತುದಾರರು, ಹಿತಚಿಂತಕರು ಮತ್ತು ಧರ್ಮಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಜಾಹೀರಾತು
ಜಾಹೀರಾತು

ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ ಮತ್ತು ಈ ಕಾರ್ಯವನ್ನು ತತ್ವನಿಷ್ಠತೆಯಿಂದ ಮಾಡುವ ಪತ್ರಿಕೆಯಂದರೆ ಸನಾತನ ಪ್ರಭಾತ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸೌ ಮಂಜುಳಾ ಗೌಡ ಇವರು ಹೇಳಿದರು. ಗೋಹತ್ಯೆ , ಮತಾಂತರ , ಲವ್ ಜಿಹಾದ್, ಹಲಾಲ್ ಜಿಹಾದ್ ಇಂತಹ ಅನೇಕ ಹಿಂದೂಗಳ ಮೇಲಾಗುತ್ತಿರುವ ಆಘಾತದ ವಿರುದ್ಧ ಧ್ವನಿ ಎತ್ತಿ ಸತ್ಯನಿಷ್ಠ ಕಾರ್ಯವನ್ನು ಸನಾತನ ಪ್ರಭಾತ ಪತ್ರಿಕೆಯು ಮಾಡುತ್ತಿದೆ ಎಂದು ಹೇಳಿದರು.

ಜಾಹೀರಾತು

ಹಿಂದೂ ಧರ್ಮಾಚರಣೆಯ ಅನೇಕ ಸಂಶಯವನ್ನು ಪರಿಹರಿಸಿ, ಹಿಂದುಗಳಿಗೆ ತಂದೆ – ತಾಯಿಯಂತೆ ಮಾರ್ಗದರ್ಶನವನ್ನು ಈ ಪತ್ರಿಕೆ ಮಾಡುತ್ತಿದೆ ಎಂದು ಮಂಗಳೂರಿನ ಉದ್ಯಮಿ ಶ್ರೀ ಮಧುಸೂದನ ಅಯಾರ್ ಇವರು, ಅವರ ಅನುಭವವನ್ನು ವ್ಯಕ್ತಪಡಿಸಿದರು.

‘ಹಿಂದೂ ರಾಷ್ಟ್ರ ಈ ಶಬ್ದಗಳನ್ನು ಸಮಾಜದಲ್ಲಿ ನಿಜವಾದ ಅರ್ಥದಿಂದ ಯಾರಾದರೂ ರೂಢಿಯಲ್ಲಿ ತಂದಿದ್ದರೆ, ಅದು ‘ಸನಾತನ ಪ್ರಭಾತ – ಶ್ರೀ ಪ್ರಶಾಂತ ಹರಿಹರ , ವಿಶೇಷ ಪ್ರತಿನಿಧಿ , ಸನಾತನ ಪ್ರಭಾತ

ಕನ್ನಡ ಸನಾತನ ಪ್ರಭಾತದ ವಿಶೇಷ ಪ್ರತಿನಿಧಿಯಾದ ಶ್ರೀ ಪ್ರಶಾಂತ್ ಹರಿಹರ ಇವರು ಸನಾತನ ಪ್ರಭಾತ ಪತ್ರಿಕೆಯು ಮೂಡಿ ಬರುತ್ತಿರುವ ಕಾರ್ಯದ ವಿಶ್ಲೇಷಣೆಯನ್ನು ಮಾಡಿದರು. ಇಂದು ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವಮಟ್ಟದಲ್ಲಿಯೂ ಹಿಂದೂ ರಾಷ್ಟ್ರದ ಬಗ್ಗೆ ಚರ್ಚಿಸಲಾಗುತ್ತಿದೆ. ಇಂದಿನಿಂದ ೨೫ ವರ್ಷಗಳ ಮೊದಲು ‘ಹಿಂದೂ ರಾಷ್ಟ್ರ ಈ ಶಬ್ದವನ್ನು ಉಚ್ಚರಿಸುವುದು, ಒಂದು ಅಘೋಷಿತ ಅಪರಾಧವಾಗಿತ್ತು. ಇಂತಹ ಕಾಲದಲ್ಲಿ ‘ಈಶ್ವರೀ ರಾಜ್ಯ, ‘ಹಿಂದೂ ರಾಷ್ಟ್ರ ಈ ಶಬ್ದಗಳನ್ನು ಸಮಾಜದಲ್ಲಿ ನಿಜವಾದ ಅರ್ಥದಿಂದ ಯಾರಾದರೂ ರೂಢಿಯಲ್ಲಿ ತಂದಿದ್ದರೆ, ಅದು ‘ಸನಾತನ ಪ್ರಭಾತ. ‘ಕೇವಲ ಸುದ್ದಿಗಳಲ್ಲ, ಬದಲಾಗಿ ಪ್ರತಿಯೊಂದು ಸುದ್ದಿಯಲ್ಲಿನ ದೃಷ್ಟಿಕೋನ ನೀಡುವುದು ಇದು ‘ಸನಾತನ ಪ್ರಭಾತದ ಪ್ರಮುಖ ವೈಶಿಷ್ಟ್ಯವಾಗಿದೆ ಎಂದು ಶ್ರೀ ಪ್ರಶಾಂತ ಹರಿಹರ ಇವರು ಹೇಳಿದರು.