Wednesday, May 22, 2024
ಅಂತಾರಾಷ್ಟ್ರೀಯಸುದ್ದಿ

ಅಮ್ಮ ಕಲಾವಿದರು ಬಹರೈನ್ ವತಿಯಿಂದ ಶ್ರೀ ದುರ್ಗಾ ಪೂಜೆ : ಭಕ್ತಿಪರವಶರಾದ ಭಕ್ತ ಜನವೃಂದ – ಕಹಳೆ ನ್ಯೂಸ್

ಬಹರೈನ್ : ಕಳೆದ ಒಂದು ದಶಕಕ್ಕೂ ಮಿಕ್ಕಿ ದ್ವೀಪದೇಶ ಬಹರೈನ್ ನಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ‌ಚಟುವಟಿಕೆಯಲ್ಲಿ ತೊಡಗಿರುವ ಅಮ್ಮ ಕಲಾವಿದರು ಬಹರೈನ್ ಸಂಯೋಜನೆಯಲ್ಲಿ ಜ.12ರoದು ಅಷ್ಟಾವಧಾನ ಸಹಿತ ಶ್ರೀ ದುರ್ಗಾಪೂಜೆ‌ ಹಾಗೂ ಭಕ್ತಿಸಂಗೀತ ಕಾರ್ಯಕ್ರಮವು ವೈಭವೋಪೇತವಾಗಿ‌ ನೆರವೇರಿತು.

ಜಾಹೀರಾತು
ಜಾಹೀರಾತು

ದ್ವೀಪದ‌ ಹಿರಿಯ ಸಂಘಟಕರಾದ ಮೋಹನದಾಸ್ ರೈ ಎರುಂಬು ಸಾರಥ್ಯದ ಅಮ್ಮ ಕಲಾವಿದರು ಬಹರೈನ್ ನ ಈ ವಿಶೇಷ ಕಾರ್ಯಕ್ರಮದಲ್ಲಿ ದ್ವೀಪದ ಸುಮಾರು 600 ಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಭಕ್ತಿಪರವಶರಾದರು. ತಾಯ್ನಾಡಿಂದ ಪುರೋಹಿತರಾಗಿ ಆಗಮಿಸಿದ್ದ ವೇದಮೂರ್ತಿ ಹರ್ಷ‌ ಭಟ್ ಪೆರುವಾಯಿ ಇವರು ಶ್ರೀ ದುರ್ಗಾಪೂಜೆ‌ಯನ್ನು ಅರ್ಥ ವಿವರಣೆ ಸಹಿತ ನೆರವೇರಿಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡ ಸಂಘ ಬಹರೈನ್‌ನ ಕನ್ನಡ ಭವನ ಸಭಾಂಗಣದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ‌ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ತುಳುನಾಡ ಗಂಧರ್ವ ಖ್ಯಾತ ಗಾಯಕ ಜಗದೀಶ್ ಆಚಾರ್ಯ ಪುತ್ತೂರು ಇವರ ಭಕ್ತಿ ಸಂಗೀತ ಕಾರ್ಯಕ್ರಮವಿತ್ತು. ಸಂಗೀತ ಸಹಕಾರದಲ್ಲಿ ತಾಯ್ನಾಡ ಸುಮಧುರ ಗಾಯಕಿ ದಿವ್ಯನಿಧಿ ರೈ ಎರುಂಬು, ಕೊಳಲುವಾದನದಲ್ಲಿ ದಿವ್ಯಧನುಷ್ ರೈ ಎರುಂಬು, ತಬಲಾ ಸುರೇಶ್, ರಿದಂ ಪ್ಯಾಡ್ ಯಕ್ಷಿತ್ ಶೆಟ್ಟಿ, ಕೀಬೋರ್ಡ್ ವಾದನದಲ್ಲಿ ದಿವ್ಯರಾಜ್ ರೈ ಭಕ್ತಿ ಸಂಗೀತ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಜಾಹೀರಾತು
ಜಾಹೀರಾತು

ಈ‌ ದಿನದ ಅನ್ನದಾನದ ಸೇವಾಕರ್ತರು ಮತ್ತು‌ ವಿಶೇಷ‌ ದಾನಿಯಾದ ಸುಭಾಶ್ಚಂದ್ರ ಅವರಿಂದ ಆಧ್ಯಾತ್ಮಿಕ ‌ಚಿಂತನೆಯ ಸತ್ಸಂಗ ಪ್ರವಚನವು ನೆರವೇರಿತು‌. ಮಕ್ಕಳು, ಮಹಿಳೆಯರು ಹಾಗೂ ಪುರುಷರ ತಂಡದ ಕುಣಿತ ಭಜನೆ ಪ್ರಧಾನ ಆಕರ್ಷಣೆಯಾಗಿ ಮೂಡಿಬಂದಿತು. ದ್ವೀಪದ ಖ್ಯಾತ ನೃತ್ಯನಿರ್ದೇಶಕರಾದ ಹರಿಣಿ ಉತ್ಕರ್ಷ್ ಶೆಟ್ಟಿ, ನಮಿತಾ ಸಾಲ್ಯಾನ್, ಪ್ರೀತಂ ಆಚಾರ್ಯ ಕುಣಿತ ಭಜನೆಯ ತರಬೇತಿ ‌ನೀಡಿದ್ದರು.

ಜಾಹೀರಾತು

ಶ್ರೀ ದುರ್ಗಾಪೂಜೆಯ ಅಂಗವಾಗಿ ಅಷ್ಟಾವಧಾನ ಸೇವೆ ನಡೆಸಲಾಯಿತು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದ, ಪಂಚಾಂಗ ಶ್ರವಣ,‌ಪುರಾಣ ವಾಚನ, ಶಂಖನಾದ, ಸಂಗೀತ,‌ಕೊಳಲುವಾದನ, ಕುಣಿತ‌ ಭಜನೆ, ಭರತನಾಟ್ಯ, ಯಕ್ಷಗಾನ ಸೇವೆಯನ್ನು ಒಳಗೊಂಡ ಅಷ್ಟಾವಧಾನ ಸೇವೆಯು ವಿಶೇಷವಾಗಿ ನಡೆಸಲ್ಪಟ್ಟಿತು.

ಇದೇ ಸಂದರ್ಭದಲ್ಲಿ ಪುರೋಹಿತ ಹರ್ಷ ಭಟ್ ಪೆರುವಾಯಿ, ಮಹಾದಾನಿ ಸುಭಾಶ್ಚಂದ್ರ, ಗಾಯಕ ಜಗದೀಶ್ ಆಚಾರ್ಯ ಪುತ್ತೂರು, ಗಾಯಕಿ ದಿವ್ಯನಿಧಿ ರೈ ಎರುಂಬು , ಕೊಳಲುವಾದಕ ದಿವ್ಯಧನುಷ್ ರೈ‌ ಎರುಂಬು, ತಬಲಾವಾದಕ ಸುರೇಶ್, ರಿದಂ ಪ್ಯಾಡ್ ವಾದಕ ಯಕ್ಷಿತ್ ಶೆಟ್ಟಿ, ಕೀಬೋರ್ಡ್ ವಾದಕ ದಿವ್ಯರಾಜ್ ರೈ, ಮಹನೀಯರಾದ ಕನ್ನಡಸಂಘದ ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಬಹರೈನ್ ಬಿಲ್ಲವಾಸ್ ಅಧ್ಯಕ್ಷ ಹರೀಶ್ ಪೂಜಾರಿ,‌ಕನ್ನಡ ಸಂಘದ ಪ್ರತಿನಿಧಿ ಪ್ರವೀಣ್ ಶೆಟ್ಟಿ ಕಿನ್ನಿಗೋಳಿ, ಕಲಾಪೋಷಕಿ ಡಾ.ವಿಭಾಲಿ ನವೀನ್ ಶೆಟ್ಟಿ, ಯಕ್ಷಗಾನ ನಿರ್ದೇಶಕ ದೀಪಕ್ ರಾವ್ ಪೇಜಾವರ , ಭಾಗವತ ರೋಶನ್ ಎಸ್.ಕೋಟ್ಯಾನ್ ಮತ್ತು ತಂಡ, ನೃತ್ಯ ನಿರ್ದೇಶಕರಾದ ಹರಿಣಿ ಉತ್ಕರ್ಷ್ ಶೆಟ್ಟಿ, ನಮಿತಾ ಸಾಲ್ಯಾನ್, ಪ್ರೀತಂ ಆಚಾರ್ಯ, ಭರತನಾಟ್ಯ ಸಂಯೋಜಕಿ ಶೋಭಾ ಮದಂಗಲ್ಲು ಮತ್ತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ನವೀನ್ ಮಾವಾಜಿ,ರಾಮಪ್ರಸಾದ ಅಮ್ಮೆನಡ್ಕ, ಗುರುರಾಜ್ ನಾಯ್ಕ್ ಇವರನ್ನು ಸಮ್ಮಾನದೊಂದಿಗೆ ಗೌರವಿಸಲಾಯಿತು.

ಭಾಗವಹಿಸಿದ ಎಲ್ಲ ಕಲಾವಿದರಿಗೆ, ಕಲಾಸೇವಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪೂಜಾ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನದಲ್ಲಿ ರಾಮಪ್ರಸಾದ್‌ ಅಮ್ಮೆನಡ್ಕ, ಹರಿ ನಾರಾಯಣ ಭಟ್ ಎಡನೀರು, ಗಣೇಶ್ ಭಟ್ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನೆರದಿದ್ದ ಭಕ್ತಾದಿಗಳಿಗೆ ಬಾಳೆ ಎಲೆ ಯ‌ಲ್ಲಿ ವಿಶೇಷ ಭೋಜನದ ವ್ಯವಸ್ಥೆ ‌ಮಾಡಲಾಗಿತ್ತು. ನೂರಾರು ಸ್ವಯಂಸೇವಕರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮ ‌ಸಂಘಟಕರಾದ‌ ಮೋಹನದಾಸ್ ರೈ ಎರುಂಬು ಸ್ವಾಗತಿಸಿ ನಿರೂಪಿಸಿರು. ಕಾರ್ಯಕ್ರಮದ ಕೊನೆಯಲ್ಲಿ ಅಮ್ಮ ಕಲಾವಿದರಿಂದ ಧನ್ಯವಾದ ಸಮರ್ಪಿಸಲಾಯಿತು.