Tuesday, May 21, 2024
ಕೃಷಿರಾಜ್ಯಶಿಕ್ಷಣಸುದ್ದಿ

ರಾಷ್ಟ್ರೀಯ ಯುವದಿನದ ಅಂಗವಾಗಿ ನಡೆದ ಹವಾಗುಣ ಬದಲಾವಣೆ ಮತ್ತು ಯುವಜನರು ಎಂಬ ವಿಷಯದ ಕುರಿತ ಚಿಂತನ ಮಂಥನ ಕಾರ್ಯಕ್ರಮ – ಕಹಳೆ ನ್ಯೂಸ್

ತುಮಕೂರು : ರಾಷ್ಟ್ರೀಯ ಯುವದಿನದ ಅಂಗವಾಗಿ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕ ಸಮಾಜಕಾರ್ಯ ವಿಭಾಗ ಮತ್ತು ಚಿಗುರು ಯುವಜನ ಸಂಘದ ಸಂಯೋಜನೆಯಲ್ಲಿ ಹವಾಗುಣ ಬದಲಾವಣೆ ಮತ್ತು ಯುವಜನರು ಎಂಬ ವಿಷಯದ ಕುರಿತ ಚಿಂತನ ಮಂಥನ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು

ಜಾಗತಿಕ ತಾಪಮಾನದ ವೈಫರಿತ್ಯ ಹವಾಮಾನದ ವ್ಯತ್ಯಾಸ ಈ ಬಗ್ಗೆ ನಿರ್ವಹಿಸಬೇಕಾದ ಜಾಗೃತಿ, ಮಾಡಬೇಕಾದ ಕೆಲಸದ ಕುರಿತು ಯುವ ಜನತೆಗೆ ಮಾಹಿತಿ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾಲೇಜು ಆವರಣದಲ್ಲಿ ಹಲಸಿನ ಗಿಡವನ್ನು ನೆಡುವ ಮೂಲಕ ಪ್ರಾಂಶುಪಾಲರಾದ ಪೆÇ್ರ.ಬಿ. ಕರಿಯಣ್ಣ ನವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಬಳಿಕ ಮಾತನಾಡಿದ ಅವರು, ಮಾನವನು ಪ್ರಕೃತಿಯ ಒಂದು ಭಾಗವಾಗಬೇಕು. ಪ್ರತಿಯೊಬ್ಬರು ಪರಿಸರದೊಂದಿಗೆ ಬೆರೆತು ಸಹಜೀವನವನ್ನು ನಡೆಸುವುದರ ಮೂಲಕ ಪ್ರಕೃತಿಗೆ ಕೊಡುಗೆ ನೀಡಬೇಕು. ಪ್ರಕೃತಿಯು ಮಾನವನ ಅಗತ್ಯತೆಗಳನ್ನು ಪೂರೈಸುತ್ತದೆ ಹೊರತು ದುರಾಸೆಯನ್ನಲ್ಲ. ಆದ್ದರಿಂದ ನಾವುಗಳು ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಬೇಕಾದರೆ ಸುಸ್ಥಿರ ಬದುಕಿನತ್ತ ದಾಪುಗಲು ಇಡಬೇಕಾಗುತ್ತದೆ ಎಂದು ಯುವ ಸಮುದಾಯಕ್ಕೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಮಂಜುನಾಥ್ ಅಮಗೊಂದಿ ಮಾತನಾಡಿ, ಚಿಗುರು ಯುವಜನ ಸಂಘವು ಪರಿಸರಕ್ಕೆ ಪೂರಕವಾದ ಕಾರ್ಯಗಳನ್ನು ಮಾಡುತ್ತಿದ್ದು, ಯುವಜನರಿಗೆ ಪರಿಸರದ ಬಗೆಗಿನ ಪ್ರಜ್ಞೆಯನ್ನು ಮೂಡಿಸುತ್ತಿದೆ. ರಾಷ್ಟ್ರೀಯ ದಿನದ ಅಂಗವಾಗಿ ಯುವಜನರಿಗೆ ಹವಾಗುಣ ಬದಲಾವಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅನೇಕ ಶಾಲಾಕಾಲೇಜುಗಳಲ್ಲಿ ಅಭಿಯಾನವನ್ನು ಮಾಡಲಾಗುತ್ತಿದೆ.

ಜಾಹೀರಾತು

ಮಾನವರ ಅನೇಕ ಚಟುವಟಿಕೆಗಳಿಂದ ಹಸಿರು ಮನೆ ಅನಿಲಗಳು ಹೆಚ್ಚಾದ ಪರಿಣಾಮವಾಗಿ ತಾಪಮಾನ ಹೆಚ್ಚಾಗಿ ಪ್ರಸ್ತುತವಾಗಿ ಭೂಮಿಗೆ ಜ್ವರ ಬಂದಿದೆ. ಇದು ಯುವಜನ ಆರೋಗ್ಯ ಉದ್ಯೋಗ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಇಂದು ಜಾಗತಿಕ ತಾಪಮಾನದಿಂದ ಹವಾಗುಣದಲ್ಲಿ ಬದಲಾವಣೆಯು ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ವ್ಯಕ್ತಿಯಿಂದ ಹಿಡಿದು ವಿಶ್ವದವರೆಗೆ ವೈಯಕ್ತಿಕವಾಗಿ, ಸಂಘಟಿತರಾಗಿ ಕಾರ್ಯನಿರ್ವಹಿಸುವ ಸ್ಥಿತಿ ಜೀವನಶೈಲಿಯಿಂದ ಅನಿವಾರ್ಯ ಮಾನವರ ಕೊಳ್ಳುಬಾಕ ಸಂಸ್ಕøತಿಯು ಹೆಚ್ಚುತ್ತಿದೆ.

ಇದು ಪರಿಸರ ನಾಶಕ್ಕೆ ಮೂಲ ಕಾರಣವಾಗಿದೆ. ಭಾರತದಲ್ಲಿ ವ್ಯಕ್ತಿಗಳ ಇಂಗಾಲದ ಹೆಜ್ಜೆ ಗುರುತುಗಳನ್ನು ಗಮನಿಸಿದರೆ ವರ್ಷ ಪ್ರತಿ ವ್ಯಕ್ತಿಯ ಇಂಗಾಲದ ಉತ್ಪಾದನೆಯು 750 ಕೆಜಿಯಷ್ಟಿದೆ. ಇದನ್ನು ಕಡಿಮೆ ಮಾಡುವುದ ಜೊತೆ ಸುಸ್ಥಿರ ಅಭಿವೃದ್ಧಿಗಾಗಿ ಸರ್ಕಾರಗಳನ್ನು ಸಾಮೂಹಿಕವಾಗಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಹೇಮಂತ್ ಕುಮಾರ್ ಕೆ ಪಿ, ಪ್ರಹ್ಲಾದ ಜಿ ಮತ್ತು ಸಮಾಜ ಕಾರ್ಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.