Tuesday, May 21, 2024
ಬೆಂಗಳೂರುಮೈಸೂರುರಾಜ್ಯಸುದ್ದಿಹಾಸನ

ಅರ್ಜುನನ ಸಾವಿನ ರಹಸ್ಯ ಬಿಚ್ಚಿಟ್ಟ ಮಾವುತ ವಿನುನ ಬಾಮೈದಾ ರಾಜು – ಮತ್ತೊಂದು ಆಡಿಯೋ ವೈರಲ್ – ಕಹಳೆ ನ್ಯೂಸ್

ಹಾಸನ: ಅಂಬಾರಿ ಆನೆ ಅರ್ಜುನನ ಸಾವು ಪ್ರಕರಣದಲ್ಲಿ ಮತ್ತೊಂದು ಆಡಿಯೋ ವೈರಲ್ ಆಗಿದೆ. ಅರ್ಜುನನ ಮಾವುತ ವಿನು ಅವರ ಬಾಮೈದಾ ರಾಜು ಅವರು, ಹೋರಾಟಗಾರರೊಬ್ಬರ ಜೊತೆ ಮಾತಾಡಿರುವ ಆಡಿಯೋ ವೈರಲ್ ಆಗಿದ್ದು, ಡಾ.ರಮೇಶ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಕಾಡಾನೆಯೊಂದಿಗೆ ಕಾದಾಟದ ವೇಳೆ ಅದಕ್ಕೆ ನೀಡಬೇಕಾದ ಅರವಳಿಕೆಯನ್ನು ಪ್ರಶಾಂತ ಆನೆಗೆ ನೀಡಿದ್ದಾರೆ. ಇದರಿಂದ ಅದು ನೆಲಕ್ಕೆ ಬಿದ್ದಿದೆ. ಈ ವೇಳೆ ಅರ್ಜುನನನ್ನು ವಾಪಸ್ ಕರೆದುಕೊಂಡು ಬರಬಹುದಿತ್ತು. ಹಾಗೆ ಮಾಡಿದ್ದರೆ ಆನೆ ಉಳಿಯುತ್ತಿತ್ತು. ಪ್ರಶಾಂತ ಆನೆ ಬಿದ್ದಿದ್ದಕ್ಕಾಗಿ ಅದನ್ನು ವಾಪಸ್ ಕರೆದುಕೊಂಡು ಅಲ್ಲೇ ಉಳಿದುಕೊಂಡಿದ್ದಾರೆ. ಈ ವೇಳೆ ಕಾಡಾನೆ ಮತ್ತೆ ಕಾದಾಟಕ್ಕೆ ಬಂದಿದೆ. ಈ ಸಮಯದಲ್ಲಿ ಕಾಡಾನೆಗೆ ಗುಂಡು ಹಾರಿಸಲು ಹೋಗಿ ಅರ್ಜುನನಿಗೆ ಹೊಡೆದಿದ್ದಾರೆ. ನಮ್ಮ ಆನೆ ಅದೇ ಕಾಲಲ್ಲಿ ಕುಂಟಿಕೊಂಡು ಕಾದಾಟ ನಡೆಸಿದೆ. ಹೊಟ್ಟೆ ಬಳಿ ಗಾಯವಾಗಿದ್ದು ಅದೇನು ಎಂದು ಗೊತ್ತಾಗಲಿಲ್ಲ ಎಂದು ಹೋರಾಟಗಾರರೊಂದಿಗೆ ಅವರು ಮಾತಾಡಿದ್ದಾರೆ.

ಜಾಹೀರಾತು
ಜಾಹೀರಾತು

ಕಾರ್ಯಾಚರಣೆ ವೇಳೆ, ಅಲ್ಲಿರುವ ವಾಚರ್‌ಗಾರ್ಡೋ ಯಾರೋ ಗೊತ್ತಿಲ್ಲ ಗಾಬರಿಯಲ್ಲಿ ಕಾಡಾನೆಗೆ ಗುಂಡು ಹಾರಿಸಲು ಹೋಗಿ ಅರ್ಜುನನಿಗೆ ಹೊಡೆದಿದ್ದಾರೆ. ಅಲ್ಲದೇ ಸಾಕಾನೆಗೆ ಡಾ.ರಮೇಶ್ ಅವರು ಗಾಬರಿಯಲ್ಲಿ ಅರವಳಿಕೆ ಹೊಡೆದುಬಿಟ್ಟಿದ್ದಾರೆ. ಇದರಿಂದ ಪ್ರಶಾಂತ ಕುಸಿದು ಬಿತ್ತು ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಫೋನ್ ಮಾಡಿ ಅಪ್ಪನಿಗೆ ಹುಷಾರಿಲ್ಲ, ನನಗೆ ಬರಲು ಆಗಲ್ಲ. ಅನಿಲ್ ತಮ್ಮನು ಮರದಿಂದ ಬಿದ್ದು ಸಮಸ್ಯೆಯಾಗಿದೆ. ವಿನು ಅಣ್ಣ ಒಬ್ಬರೇ ಆಗ್ತಾರೆ ಆನೆ ಕಳಿಸಿಕೊಡಿ ಎಂದಿದ್ದೆ. ಈ ವೇಳೆ ಆನೆಯನ್ನು ಕಳಿಸಲು ಆಗುವುದಿಲ್ಲ ಎಂದು ರಮೇಶ್ ಹೇಳಿದ್ದರು. ನೀವು ಏನು ಮಾಡ್ತಿರೋ ಬಿಡ್ತಿರೋ ಗೊತ್ತಿಲ್ಲ. ನನ್ನ ಕೆಲಸ ಹೋದರೂ ಪರವಾಗಿಲ್ಲ. ಆ ರಮೇಶ್ ಆನೆ ವೈದ್ಯರಾಗಿ ಇರಬಾರದು. ಅವರು ನರಕ ಅನುಭವಿಸಬೇಕು, ಆ ಥರ ಮಾಡಿ ಕೊಡಣ್ಣ ನಿನ್ ಕಾಲಿಗೆ ಬೀಳ್ತಿನಿ ಎಂದು ಹೋರಾಟಗಾರರ ಬಳಿ ಹೇಳಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು

ಬೇರೆ ಆನೆಗಳಿಗೆ ಸೊಪ್ಪನ್ನು ಅದರ ಕೈಯಲ್ಲಿ ಹೊರಿಸಿಕೊಂಡು ಬರ್ತಾರೆ. ನಾನು ನಮ್ಮಪ್ಪನ ನಿವೃತ್ತಿ ಹಣ ಹಾಗೂ ಸಾಲ ಮಾಡಿ ಒಂದು ದಿನವೂ ಸೊಪ್ಪನ್ನು ಹೊರಿಸದೆ ಸಾಕಿದ್ದೆ. ಅಂತ ಆನೆಯನ್ನು ಸಾಯಿಸಿಬಿಟ್ಟರು ಎಂದು ಅಳಲು ತೋಡಿಕೊಂಡಿದ್ದಾರೆ.

ಜಾಹೀರಾತು

ಈ ವೇಳೆ ಆತ ಅನುಭವಿಸುವಂತೆ ಮಾಡುತ್ತೇನೆ. ನೀವು ಹೇಳಿಕೆ ಕೊಡಲು ಆಗಲ್ವಾ ಎಂದು ಹೋರಾಟಗಾರ ಕೇಳಿದ್ದಾರೆ. ಈ ವೇಳೆ ನಾನು ಹೇಳಿಕೆ ಕೊಟ್ಟರೆ ನೀವು ಇರಲಿಲ್ವಾ? ಎಂದು ಕೇಳುತ್ತಾರೆ. ಸ್ಥಳೀಯರು ಹೇಳಿಕೆ ಕೊಟ್ಟಂತೆ ಇರಬೇಕು ಹಾಗೆ ಕೊಡಬೇಕು ಎಂದು ಅವರು ಹೇಳಿದ್ದಾರೆ.

ನಮ್ಮ ಆನೆಗೆ ಮದ ಇದೆ ಎಂದರು ಆನೆಯನ್ನು ಕರೆಸಿಕೊಂಡಿದ್ದಾರೆ. ನಾನು ಏನು ಹೇಳಿದ್ರು ಕೇಳಲಿಲ್ಲ. ನಾನು ಸುಮ್ಮನಾಗಿಬಿಟ್ಟೆ. ಆ ವೈದ್ಯರದ್ದು ಹುಣಸೂರು ಡಿವಿಷನ್. ಅವರೇ ಆನೆ ಸಾವಿಗೆ ಕಾರಣ ಎಂದು ಮಾವುತನ ಬಾಮೈದಾ ಆರೋಪಿಸಿದ್ದಾರೆ.