ಅಮಾವಾಸ್ಯೆ, ಹುಣ್ಣಿಮೆಗೂ ಸೂರ್ಯ ಇರ್ತಾನೆ: ಸಿಎಂಗೆ ತೇಜಸ್ವಿ ಸೂರ್ಯ ತಿರುಗೇಟು – ಕಹಳೆ ನ್ಯೂಸ್
ಬೆಂಗಳೂರು: ತಮ್ಮನ್ನು ಅಮಾವಾಸ್ಯೆ ಸೂರ್ಯ ಎಂದು ಟೀಕಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದು " ಅವರಿಗೆ ಅಮಾವಾಸ್ಯೆಗೂ ಹುಣ್ಣಿಮೆಗೂ ವ್ಯತ್ಯಾಸ ಗೊತ್ತಿಲ್ವಾ? ಅಮಾವಾಸ್ಯೆ, ಗ್ರಹಣ, ಸೂರ್ಯ- ಚಂದ್ರ ಎಲ್ಲ ಜ್ಯೋತಿಷಿಗಳಿಗೆ ಬಿಡಿ. ನೀವು ಆಡಳಿತದ ಕಡೆಗೆ ಗಮನ ಕೊಡಿ ಎಂದು ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಅಮಾವಾಸ್ಯೆಗೂ ಸೂರ್ಯ ಇರ್ತಾನೆ, ಹುಣ್ಣಿಮೆಗೂ ಸೂರ್ಯ ಇರ್ತಾನೆ. ಅಮಾವಾಸ್ಯೆಗೆ ಇಲ್ಲದಿರುವುದು ಚಂದ್ರ. ಸಿದ್ದರಾಮಯ್ಯನವರು ಹಲವು...







