ಬ್ರಹ್ಮಗಿರಿ ಬೆಟ್ಟ ಕುಸಿದು ಇಂದಿಗೆ ಆರು ದಿನ – ಆಸ್ಟ್ರೇಲಿಯಾದಿಂದ ಬಂದ ಮಕ್ಕಳ ಆಕ್ರಂದನ ; ಎರಡು ಕಾರುಗಳು ಪತ್ತೆ, ಮುಂದುವರಿದ ಶೋಧಕಾರ್ಯ – ಕಹಳೆ ನ್ಯೂಸ್
ಮಡಿಕೇರಿ: ಕೊಡಗಿನ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟ ಕುಸಿದು ಆರು ದಿನಗಳಾಗಿವೆ. ದುರಂತದಲ್ಲಿ ಐವರು ಭೂ ಸಮಾಧಿಯಾಗಿದ್ದಾರೆ. ಇದುವರೆಗೂ ಒಂದು ಮೃತ ದೇಹ ಮಾತ್ರ ಪತ್ತೆಯಾಗಿದೆ. ಇಂದು ಕೂಡ ಮೃತದೇಹ ಹುಡುಕುವ ಕಾರ್ಯಾಚರಣೆ ಮುಂದುವರಿಯಲಿದೆ. ಕೊಡಗಿನಲ್ಲಿ ಸುರಿದ ಭಾರೀ ಮಳೆ ಪರಿಣಾಮ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಕುಸಿದಿತ್ತು. ಪರಿಣಾಮ ಬೆಟ್ಟದಲ್ಲಿ ಮನೆ ಕೊಂಡಿದ್ದ ಅರ್ಚಕ ನಾರಾಯಣ್ ಆಚಾರ್ ಅವರ ಮನೆಯೂ ಈ ಬೆಟ್ಟದ ಮಣ್ಣಿನಲ್ಲಿ ಮುಚ್ಚಿ ಹೋಗಿ ಮನೆಯಲ್ಲಿದ್ದ ಅರ್ಚಕರು...







